ಗದಗ : , ಸೆ . 28 – ಡಿಸೆಂಬರ್ ತಿಂಗಳಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪೂರಕವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥ ಯಾತ್ರೆ ಇಂದು ಸಂಜೆ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮಕ್ಕೆ ಆಗಮಿಸಿದ್ದು ಸಡಗರ- ಸಂಭ್ರಮದೊಂದಿಗೆ ಬರಮಾಡಿಕೊಳ್ಳಲಾಯಿತು .ಹಾಗೂ ಭುವನೇಶ್ವರ ದೇವಿಗೆ ಪೂಜೆ ಸಲ್ಲಿಸಿ ಜಯ ಘೋಷಣೆ ಕೂಗಿ ಕನ್ನಡ ಜ್ಯೋತಿ ರಥ ಯಾತ್ರೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ, ಶ್ರೀ ವಿವೇಕಾನಂದಗೌಡ, ಪಾಟೀಲ, ಕಾರ್ಯದರ್ಶಿ ಪ್ರೋ.ಕಿಶೋರಬಾಬು ನಾಗರಕಟ್ಟೆ, ಮುಂಡರಗಿ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ವಿಶ್ವನಾಥ ಹೊಸಮನಿ,ಬೀದಿನಾಟಕ, ಜನಪದ ಕಲಾತಂಡಗಳ ಒಕ್ಕೂಟದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ವೀರಣ್ಣ ಚನ್ನಪ್ಪ ಅಂಗಡಿ, ಗ್ರಂಥಾಲಯ ಮೇಲ್ವಿಚಾರಕ ಲಕ್ಷ್ಮಣ ದೊಡ್ಡಮನಿ,ಗ್ರಾ.ಪಂ.ಸಹಾಯಕ ಹನುಮಂತ ಹೊಂಬಳ, ಶಿಕ್ಷಕರಾದ ಎಸ್.ಎಮ್.ಪಾಟೀಲ,ನಿ.ಶಿಕ್ಷಕರಾದ ಎಮ್ ಎಫ್.ಕೋಲಕಾರ, ಗ್ರಾಮದ ಹಿರಿಯರಾದ ಶ್ರೀ ಲೆಂಕೆಪ್ಪ ಹೊಸಳ್ಳಿ ,ಶಿವಾನಂದ ತಳವಾರ, ರಮೇಶ್ ಕಲ್ಮನಿ ಈರಣ್ಣ ಹುಲಗಣ್ಣವರ ಇನ್ನು ಮುಂತಾದವರು ಇದ್ದರು.