Sunday, March 23, 2025
Google search engine
Homeಗದಗಗಜೇಂದ್ರಗಡಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು...

ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ

ಗದಗ  ಸೆಪ್ಟೆಂಬರ್ 17; ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ /ವಿಶೇಷ ಸಭೆಗಳಲ್ಲಿ ನಿರ್ಣಯವಾಗುವ ಠರಾವುಗಳ ಕುರಿತು ಪಾರದರ್ಶಕತೆಯನ್ನು ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಕೈಕೊಳ್ಳುವ ನಿರ್ಣಯಗಳು ಸಾರ್ವಜನಿಕರಿಗೆ ಗಮನಕ್ಕೆ ತರುವುದು ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯ/ವಿಶೇಷ ಸಭೆ ಜರುಗಿದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸ್ಶೆಟ ( https://gadag.nic.in ) ನಲ್ಲಿ ಕಡ್ಡಾಯವಾಗಿ ಅಪಲೋಡ ಮಾಡಲು ಕ್ರಮವಹಿಸುವುದು. ಒಂದು ವೇಳೆ ಸಾಮಾನ್ಯ / ವಿಶೇಷ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸದೇ ಇದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜರುಗುವ ಸಾಮಾನ್ಯ /ವಿಶೇಷ ಸಭೆಯಲ್ಲಿನ ಠರಾವುಗಳನ್ನು ಸದರ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕ ಹಾಗೂ ಸದರಿ ಠರಾವುಗಳ ಯಥಾವತ್ತ ಗಣಕೀಕೃತ ಠರಾವು ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ ಗದಗ : ಮಾರ್ಚ 15 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಗದಗ : ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು..! ಮಾಜಿ ಪೈಲ್ವಾನರ್ ಮಾಸಾಶನ ಹೆಚ್ಚಳಕ್ಕೆ ಸ್ವಾಗತ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ನ್ಯೂಝಿಲೆಂಡ್ ವಿರುದ್ಧ ಭರ್ಜರಿ ಗೆಲುವು