Sunday, October 13, 2024
Google search engine
Homeಆರೋಗ್ಯಗದಗ : ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾನವ ಸರಪಳಿ ಕಾರ್ಯಕ್ರಮವನ್ನು...

ಗದಗ : ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಮಹತ್ವದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು

ಗದಗ ಸೆಪ್ಟೆಂಬರ್ 10 : ಇದೇ ಸೆಪ್ಟೆಂಬರ್15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಹಮ್ಮಿಕೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್ ನಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 15 ಮುಂಜಾನೆ 9 ಗಂಟೆಗೆ ಹಾವೇರಿಯ ಬಾಳೆಹೊಸುರು ದಿಂದ ಕೊಪ್ಪಳ ವರೆಗೆ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ಜರಗುತ್ತಿದ್ದು ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನಲ್ಲಿ ಮಾನವ ಸರಪಳಿ ಹಾದು ಹೋಗುತ್ತಿದ್ದು ಪ್ರತಿ ಕಿಲೋ ಮೀಟರ್ ಗೆ ಒಬ್ಬರು ನೂಡಲ್ ಅಧಿಕಾರಿಯನ್ನು ನೇಮಿಸಿ, ಮುಖ್ಯ ವೃತ್ತಗಳಲ್ಲಿ ತೋರಣ ,ಬ್ಯಾನರ್ ಹಾಕಿಸಿ ಮಾನವ ಸರಪಳಿ ನಿರ್ಮಿಸಿ 100 ಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಸೇರಿಸಿ ಸಂವಿಧಾನದ ಪೀಠಿಕೆ ಓದಿಸಿ, ರಾಷ್ಟ್ರಗೀತೆ ಯನ್ನು ಹಾಡಿಸಬೇಕು ಎಂದು ಹೇಳಿದರು.

ತಾಲೂಕಿನ ತಹಶಿಲ್ದಾರರು ಮತ್ತು ತಾ.ಪಂ ಕಾರ್ಯನಿರ್ವಾಹಕರು ಒಳಗೊಂಡು ಸಂಪೂರ್ಣ ಯೋಜನೆ ಜೊತೆಗೆ ಸೂಕ್ಷ್ಮ ಯೋಜನೆ ತಯಾರಿಸಿ ಮಾನವ ಸರಪಳಿ ಹಾದುಹೋಗುವ ಗ್ರಾಮ ಸೇರಿದಂತೆ,10 ಕಿಲೋ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ನಡೆಸಿ ಮತ್ತು ಗ್ರಾಮದ ಶಾಲೆಗಳಲ್ಲಿ ಸಭೆಯನ್ನು ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ಅಧಿಕಾರಿ, ಸಿಬ್ಬಂದಿಗಳು ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು, ಪಿಡಿಓ, ನರೇಗಾ, ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಅವಶ್ಯಕ ಪೂರ್ವಸಿದ್ದತಾ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ತಾಲೂಕಿನ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ಹಾದು ಹೋಗುವಾಗ ವಾಹನ ದಟ್ಟಣೆ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ವಹಿಸಿ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡು ಮಾನವ ಸರಪಳಿಯ ಪ್ರಾರಂಭ ಮತ್ತು ಅಂತ್ಯ ಸ್ಥಳವನ್ನು ಗುರುತಿಸಬೇಕು ಎಂದು ಸೂಚಿಸಿದರು.

ಪ್ರತಿ ಕಿಲೋಮೀಟರ್ ಅನ್ನು ಬಣ್ಣ ಹಚ್ಚಿ ಗುರುತು ಮಾಡಿಕೊಂಡು 2 ಕಿ.ಮೀ, 1ಕಿ.ಮೀ ಮತ್ತು 100 ಮೀಟರ್ ಗೆ ಒಬ್ಬರಂತೆ ನೂಡಲ್ ಅಧಿಕಾರಿಯನ್ನು ಪೂರ್ವಯೋಜನೆ ತಯಾರಿಸಿಕೊಳ್ಳಬೇಕು‌ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ, ಗ್ರಾಮ ಮತ್ತು ತಾಲೂಕಗಳಲ್ಲಿರುವ ವಿವಿಧ ಸಂಘಟನೆಗಳ ಮತ್ತು ಸ್ವ ಸಹಾಯ ಗುಂಪುಗಳ ಜೊತೆ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು, ಪದಾಧಿಕಾರಿಗಳು, ಮತ್ತು ಸಾರ್ವಜನಿಕರನ್ನು ಸೇರಿಸಬೇಕು ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ನೀಡಿ, ಮಕ್ಕಳನ್ನು ಕರೆ ತರುವ ಮತ್ತು ಕಳಿಸುವ ಕೆಲಸ ಸರಿಯಾಗಿ ಆಗಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ ಬಿ ಸಂಕದ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಪಿ ಎಸ್ ಐ, ಡಿ ವಾಯ್ ಎಸ್ ಪಿ ಮತ್ತು ಸಂಚಾರಿ ಪೊಲೀಸ್ ಗಳು ಕಾರ್ಯನಿವಹಿಸಿ ಮಾನವ ಸರಪಳಿಗೆ ಸಂಪೂರ್ಣ ಬಂದೂಬಸ್ತ್ ಒದಗಿಸಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಮಾನವ ಸರಪಳಿಯ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಿಕೊಳ್ಳಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಜಿ.ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್ ಬಾರಟಕ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ವಿವಿಧ ತಾಲೂಕಿನ ತಹಶಿಲ್ದಾರರು ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಮುಖ ಅಂಶಗಳು

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯ ಸೇರಿದಂತೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಏಕ ಕಾಲಕ್ಕೆ ಮಾನವ ಸರಪಳಿ ಆಯೋಜನೆ

ಸಪ್ಟೆಂಬರ್ 15 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಮಾನವ ಸರಪಳಿ ರಚನೆ ನಂತರ ಸಂವಿಧಾನ ಪೀಠಕೆ ಓದಿ ರಾಷ್ಟ್ರ ಗೀತೆಯೊಂದಿಗೆ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೆ ಸೂಚನೆ

ಜಿಲ್ಲೆಯ ಲಕ್ಷ್ಮೇಶ್ವರ ಶಿರಹಟ್ಟಿ ಮುಂಡರಗಿ ಜಿಲ್ಲಾ ಗಡಿ ವ್ಯಾಪ್ತಿಯ 61 ಕಿಲೋಮೀಟರ್ ಮಾನವ ಸರಪಳಿ ಆಯೋಜನೆ

ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮಾನವ ಸರಪಳಿ ಆಯೋಜನೆ ಜಾಗೃತಿಗಾಗಿ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳಿಂದ ಪ್ರಭಾತಪೇರಿ ಆಯೋಜನೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ ನಗರಕ್ಕೆ ಆಗಮಿಸಿದ ವಿಜಯ ಜ್ಯೋತಿಗೆ ಸಚಿವ ಎಚ್. ಕೆ. ಪಾಟೀಲ ಅವರಿಂದ ಅದ್ದೂರಿ ಸ್ವಾಗತ* ಐತಿಹಾಸಿಕ ದೇವರಗುಡ್ಡ ಕಾರ್ಣಿಕ : ಆಕಾಶ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್'!  ಗದಗ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ ಗದಗ : ವಿನೂತನ ಪ್ರಯತ್ನಕ್ಕೆ ಮುಂದಾದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ; ಕ್ಯೊ.ಆರ್‌ ಕೋಡ್‌ ಮೂಲಕ ಬೇಡಿಕೆ ಅರ್ಜಿ ಸಲ್ಲಿಕ... Big Breaking : ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ವಿಧಿವಶ ! ಗದಗ : ವಿವಿಧ ಅರ್ಜಿಗಳ ಆಹ್ವಾನ ಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ ಗದಗ : ಬೇಡಿಕೆಗಳ ಈಡೇರಿಕೆಗೆ ಪಂಚಾಯತ್ ರಾಜ್ ಅಧಿಕಾರಿಗಳಿಂದ ಧರಣಿ  ಗದಗ : ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ  ಗದಗ : ಉದ್ಯೋಗ ದೊರಕಿಸಿಕೊಳ್ಳಲು ಡಿಪ್ಲೋಮಾ ವ್ಯಾಸಂಗವು ಉಪಯುಕ್ತವಾಗಿದೆ:ಪ್ರಾಚಾರ್ಯ ಭರಮಪ್ಪ ಬಡಪ್ಳವರ