ಗದಗ : ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಾಯಿದ್ದ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ .
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು , ಎಸ್ಪಿ ಬಿ.ಎಸ್ ನೇಮಗೌಡ , ಬಾಗಲಕೋಟ ಎಸ್ಪಿ ಗದಗ ಪ್ರಭಾರ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ , ಡಿವೈಎಸ್ಪಿ ಜೆ.ಎಚ್ ಇನಾಮದಾರ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ . ಗದಗ , ಹಾವೇರಿ , ವಿಜಯನಗರ , ಶಿವಮೊಗ್ಗ ಚಿತ್ರದುರ್ಗ ಜಿಲ್ಲೆಯಲ್ಲಿ ಕಳ್ಳತನ ಮಾಡ್ತಾಯಿದ್ದ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ . ಪ್ರಸಾದ & ಗುರುಪ್ರಸಾದ , ಪ್ರದೀಪ್ , ಶ್ರೀಕಾಂತ , ಬಂಧಿತ ಆರೋಪಿಗಳಾಗಿದ್ದು
ಅಂಬಾಭವಾನಿ ದೇವಸ್ಥಾನ , ಹೇಮಗಿರಿ ಮಠ ಬನ್ನಿಕೊಪ್ಪ ದುರ್ಗಾದೇವಿ ಹಾಗೂ ಮಾರುತಿ ದೇವಸ್ಥಾನ , ಹೇಮಗಿರಿ ಚನ್ನಬಸವೇಶ್ವರ ಮಠ ಗುತ್ತಲ ಗ್ರಾಮ , ಶ್ರೀ ಬನಶಂಕರಿ ದೇವಿ ದೇವಸ್ಥಾನ ತುಮ್ಮಿನಕಟ್ಟ , ಗ್ರಾಮದೇವತೆ ದೇವಸ್ಥಾನ ನೀರಲಗಿ ಗ್ರಾಮ , ಶ್ರೀ ಬನಶಂಕರಿ ದೇವಿ ದೇವಸ್ಥಾನ ತುಮ್ಮಿನಕಟ್ಟೆ ಗ್ರಾಮ , ಹಾಲು ರಾಮೇಶ್ವರ ಗಂಗಮ್ಮ ದೇವಸ್ಥಾನ ಗೂಳಿ ಹೊಸಳ್ಳಿ ಗ್ರಾಮ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದರು .
ಲಕ್ಷೇಶ್ವರದಲ್ಲಿ ನಡೆದ ಕಳ್ಳತನದ ಸಿಸಿ ಟಿವಿ ದೃಶ್ಯ ಬೆನ್ನತ್ತಿ ಕಳ್ಳರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂಧಿದ್ದು ಆರೋಪಿಗಳಿಂದ ಒಟ್ಟು 15 ಪ್ರಕರಣಗಳಲ್ಲಿ ಬಂಧಿತರು
1 ] ಪ್ರಸಾದ @ ಗುರುಪ್ರಸಾದ ತಂದೆ ನಾಗರಾಜಪ್ಪ ವಯಾ : 28 ವರ್ಷ ಸಾ : ರಾಣೀಬೆನ್ನೂರ 2 ] ಪ್ರದೀಪ್ ತಂದ ನಾಗರಾಜಪ್ಪ ವಯಾ : 24 ವರ್ಷ ಸಾ : ರಾಣೀಬೆನ್ನೂರ 3 ] ಶ್ರೀಕಾಂತ ತಂದೆ ಮಾಲತೇಶ ಗುಡಗೂರ ವಯಾ : 29 ವರ್ಷ ಸಾ : ಗಂಗಾಪೂರ ತಾ : ರಾಣೇಬೆನ್ನೂರ ಜಿ : ಹಾವೇರಿ
1 ಹಾಗೂ 2 ನೇ ಆರೋಪಿತರ ಅಣ್ಣ ರಾಮು @ ರಮೇಶ ತಂದೆ ನಾಗರಾಜಪ್ಪ ಇವನನ್ನು ರಾಣಿಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಮತ್ತು 3 ನೇ ಆರೋಪಿತರು ಸೇರಿಕೊಂಡು ದಿನಾಂಕ : 10.05.2023 ರಂದು ಕೊಲೆ ಮಾಡಿ ಮುಚ್ಚಿ ಹಾಕಿದ ಬಗ್ಗೆ ಪತ್ತೆ ಮಾಡಿದ್ದು , ಆ ಕುರಿತು ರಾಣಿಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನಾ ನಂಬರ್ 238/2024 ಕಲಂ : 302 , 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ .
ಆರೋಪಿತರಿಂದ ಒಟ್ಟು 46,22000 / -ರೂ ಕಿಮ್ಮತ್ತಿನ 1. 328 ಗ್ರಾಂ [ 32 ತೊಲೆ 8 ಗ್ರಾಂ ] ಬಂಗಾರದ ಆಭರಣಗಳನ್ನು ಹಾಗೂ ಒಟ್ಟು 2. 5.96,000 / -ರೂ ಕಿಮ್ಮತ್ತಿನ 19,100 ಗ್ರಾಂ [ 19. ಕೆ.ಜಿ. 100 ಗ್ರಾಂ ] ಬೆಳ್ಳಿಯ ಆಭರಣಗಳಗಳನ್ನು ಮತ್ತು ಒಟ್ಟು 3. ರೋಖ ಹಣ 2,000 / – ರೂಗಳು ಹೀಗೆ ಒಟ್ಟು 39.04.000 / – ಕಿಮ್ಮತ್ತಿನ ಬಂಗಾರ ಹಾಗೂ ಬೆಳ್ಳ ಮತ್ತು ನಗದು ಹಣವನ್ನು ಹಾಗೂ ಆರೋಪಿತರ ತಾಬಾದಿಂದ ವಶಪಡಿಸಿಕೊಂಡಿದ್ದು ಇರುತ್ತದೆ . 4. ಒಂದು ಸ್ಥಾರ್ಪಿಯೊ ನಂ : ಕೆಎ -01 / ಎಮ್ -6679 ನೇದ್ದು ಅಕಿ . 5,00,000 / – 5. ಒಂದು 220 ಸಿಸಿ ಪಲ್ಸ್ರ ಬೈಕ ಅಕಿ . 1.10,000 / – ರೂ ಕಿಮ್ಮತ್ತಿನ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಂದು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಭಾರಿ ಎಸ್ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದರು . ಇನ್ನೂ ಪ್ರಕರಣ ಭೇದಿಸಿದ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ ಲಕ್ಷ್ಮೇಶ್ವರ ಪಿಎಸ್‌ಐ ಈರಪ್ಪ ರಿತ್ತಿ ಮಾರುತಿ ಜೋಗದಂಡಕ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಬೆಳಗಾವಿ ಐಜಿಪಿ ಹಾಗೂ ಗದಗ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ .