14.4 C
New York
Friday, May 9, 2025

Buy now

spot_img

ಗದಗ : ಎಚ್.ಐ.ವಿ ಏಡ್ಸ್ ಬಗ್ಗೆ ಸಮುದಾಯದಲ್ಲಿ ಜಾಗೃತಿ ಅವಶ್ಯ  ಡಾ.ಎಸ್.ಎಸ್.ನೀಲಗುಂದ

ಜಿಲ್ಲಾ ಮಟ್ಟದ ಮ್ಯಾರಾಥಾನ ಸ್ಪರ್ಧೆ

ಗದಗ  ಸೆಪ್ಟೆಂಬರ್ 10: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯಏಡ್ಸ್ ಪ್ರೀವೇನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐ.ಎಮ್.ಎ, ರೋಟರಿ ಸೆಂಟ್ರಲ್ ಗದಗ, ಲಾಯನ್ಸ್ ಕ್ಲಬ್ ಗದಗ-ಬೆಟಗೇರಿ, ನೂರಾನಿ ಟ್ರಸ್ಟ್ ಗದಗ-ಬೆಟಗೇರಿ, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಗದಗಜಿಲ್ಲೆಯಎನ್.ಎಸ್.ಎಸ್. ಘಟಕಗಳು ಹಾಗೂ ರೆಡ್‌ರಿಬ್ಬನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2024 ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮ್ಯಾರಾಥಾನ ಸ್ಪರ್ಧೆಯನ್ನುಏರ್ಪಡಿಸಲಾಗಿತ್ತು.

ಮ್ಯಾರಾಥಾನ ಸ್ಪರ್ಧೆಯನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಅವರು ಮಾತನಾಡಿ ಜಿಲ್ಲೆಯಲ್ಲಿ ಹೆಚ್.ಐ.ವಿ. ಪ್ರಮಾಣ ಇಳಿಮುಖವಾಗಿದ್ದು, ವಿದ್ಯಾರ್ಥಿಗಳು ಹೆಚ್.ಐ.ವಿ.ಏಡ್ಸ್ ಬಗ್ಗೆ ಮಾಹಿತಿ ತಿಳಿದುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ತೀವ್ರತರವಾದ ಐ.ಇ.ಸಿ. ಪ್ರಚಾರಾಂದೋಲನದ ಘೋಷವಾಕ್ಯದಂತೆ “ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿ ಯುಜನತೆಯ ಮುಂದಾಳತ್ವ” ಘೋಷಣೆಯಂತೆ ಯುವಕರು ಸಂಯಮದಿAದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಧೃಢ ಆರೋಗ್ಯವನ್ನು ಹೊಂದಿ ಸಮೃಧ್ದ ಭಾರತವನ್ನು ನಿರ್ಮಾಣ ಮಾಡಲು ಕೈಗೂಡಿಸಬೇಕೆಂದು ಕರೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರೊ. ಎಸ್.ಬಿ. ಮಾಸನಾಯಕ ಮಾತನಾಡಿ ವಿದ್ಯಾರ್ಥಿಗಳು ಯವ್ವನದಲ್ಲಿ ತಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.

ಡಾ. ಅರುಂಧತಿ ಕುಲಕರ್ಣಿ ಮಾತನಾಡಿ ಹೆಚ್.ಐ.ವಿ. ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಜಿಲ್ಲೆಯಯುವ ಸಮುದಾಯ ಜಾಗೃತಿಯನ್ನು ಮೂಡಿಸಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರಲು ಶ್ರಮಿಸಬೇಕೆಂದು ತಿಳಿಸಿದರು. ಮ್ಯಾರಾಥಾನ ನಡೆಸುª Àಉದ್ದೇಶ ಹೆಚ್.ಏಡ್ಸ್. ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ.ಏಡ್ಸತಡೆ ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097, ಎಸ್,ಟಿ.ಐ. ಖಾಯಿಲೆಗಳು ಇತಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ಹೇಳಿದರು. ಆರೋಗ್ಯವಂತ ಯುವ ಸಮುದಾಯ ದೇಶದ ಸಂಪನ್ಮೂಲವಾಗಿ ದೇಶದ ಅಭಿವೃದ್ಧಿಗೆ ಹಾಗೂ ಸಮಾಜದ ಒಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ತಿಳಿಸಿದರು.

ಮ್ಯಾರಾಥಾನ ಜನಜಾಗೃತಿ ಕಾರ್ಯಕ್ರಮದಲ್ಲಿ ಐ.ಎಮ್.ಎ. ಗದಗ ಅಧ್ಯಕ್ಷರಾದ ಡಾ. ಜಿ.ಎಸ್. ಪಲ್ಲೇದ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಡಾ. ಆರ್.ಎನ್. ಗೋಡಬೋಲೆ, ರೋಟರಿ ಸೆಂಟ್ರಲ್ ಗzಗ Àಅಧ್ಯಕ್ಷರಾದ ದಾನಪ್ಪಗೌಡರ, ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ನಿತೀಶ ಸಾಲಿ, ನೂರಾನಿ ಟ್ರಸ್ಟ್ ಪದಾಧಿಕಾರಿ ನುಮೇರ ನೂರಾನಿ, ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಪ್ರೊ.ಎಸ್.ಎಸ್. ಕೊಳ್ಳಿಯವರ, ಕ್ರೀಡಾ ಇಲಾಖೆ ತರಬೇತಿದಾರರಾದ ಮಂಜುನಾಥ ಬಾಗಡೆ, ಶ್ರೀಮತಿ ವಿದ್ಯಾ ಕುಲಕರ್ಣಿ, ಗದಗ ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು, ಜಿಲ್ಲೆಯ ರೆಡ್‌ರಿಬ್ಬನ್ ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು, ಆರೋಗ್ಯ ಇಲಾಖೆಯ ರೂಪಸೇನ್ ಚೌವ್ಹಾಣ, ಗೀತಾ ಕಾಂಬಳೆ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ಬಸವರಾಜ ಹಿರೇಹಾಳ, ಗುರುರಾಜ ಕೋಟ್ಯಾಳ, ಜಿಲ್ಲೆಯ ಎಲ್ಲ ಐಸಿಟಿಸಿ, ಎ.ಆರ್.ಟಿ. ಡ್ಯಾಪ್ಕೂ ಸಿಬ್ಬಂದಿ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ, ರಕ್ಷಣೆ ಸಂಸ್ಥೆಯ ಹಜರತ್‌ಬಿ ಮತ್ತು ಸಿಬ್ಬಂದಿ, ಸೃಷ್ಟಿ ಸಂಸ್ಥೆಯ ಆದಿತ್ಯಾ ಮತ್ತು ಸಿಬ್ಬಂದಿ, ಚೈತನ್ಯ ಸಂಸ್ಥೆಯ ಸುನೀಲ್ ಮತ್ತು ಸಿಬ್ಬಂದಿ, ನವಚೇತನ ಸಂಸ್ಥೆಯ ಅಸ್ಲಂ ಹಾಗೂ ಎಲ್ಲ ಸಿಬ್ಬಂದಿ ಹಾಜರಿದ್ದರು.

ಮ್ಯಾರಾಥಾನ ಸ್ಪರ್ಧೆಯಲ್ಲಿ ಪುರುಷರಲ್ಲಿ ಪ್ರಥಮ ಸ್ಥಾನವನ್ನು ಈರಪ್ಪ ಲಕ್ಕುಂಡಿ, ದ್ವೀಯ ಸ್ಥಾನವನ್ನು ನಿಂಗಪ್ಪ ಕರಿಗಣ್ಣವರ, ತೃತೀಯ ಸ್ಥಾನವನ್ನು ಸುದೀಪ ಖಾನಾಪೂರ ಪಡೆದುಕೊಂದಿದ್ದು, ಪರಶುರಾಮ ಹಿರೇಮನಿ, ವಿಜಯ ಬಿಸ್ನಳ್ಳಿ, ವಿಜಯಕುಮಾರ ಹಡಗಳಿ, ಮುತ್ತಪ್ಪ ನಾಯ್ಕರ ಈ ನಾಲ್ವರು ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ, ಪ್ರಥಮ ಸ್ಥಾನವನ್ನು ಭೂಮಿಕಾ ಪುಠಾಣಿ, ದ್ವಿತೀಯ ಸ್ಥಾನವನ್ನು ಜ್ಯೋತಿ ಕಾಕುರಗೋಡ, ತೃತೀಯ ಸ್ಥಾನವನ್ನು ಶೋಭಾ ತಂಬೂರಿ ಪಡೆದುಕೊಂಡಿದ್ದು, ಕನಕಾ ಎಸ್.ಜಿ., ವಿಜಯಲಕ್ಷಿö್ಮ ನಲವಡಿ, ಪೂಜಾ ಪೋತದಾರ, ಶಿಲ್ಪಾ ಕೊಂತಿಕಲ್ ಈ ನಾಲ್ವರು ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು. ಮ್ಯಾರಾಥಾನದಲ್ಲಿ ಸುಮಾರು 250 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಗದಗ ಐ.ಎಮ್.ಎ. ಹಾಗೂ ನೂರಾನಿ ಟ್ರಸ್ಟ್ನಿಂದ ಮ್ಯಾರಾಥಾನಗೆ 100 ಟಿ-ಶರ್ಟಗಳನ್ನು ಕೊಡುಗೆಯಾಗಿ ನೀಡಿದ್ದು ಮ್ಯಾರಾಥಾನಗೆ ಮೆರಗು ತಂದಿತು.

ಪ್ರಾರಂಭದಲ್ಲಿ ಐ.ಸಿ.ಟಿ.ಸಿ. ಸಿಬ್ಬಂದಿ ಸ್ವಾಗತಿಸಿದರು. ಬಸವರಾಜ ಲಾಳಗಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಾಕ್ಸ್ ;ಹೆಚ್.ಐ.ವಿ. ಏಡ್ಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಯುಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆ ಹಾಗೂ ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮ್ಯಾರಾಥಾನ ಸ್ಪರ್ಧೆ ಆಯೋಜಿಸಲಾಗಿದೆ-ಡಾ. ಅರುಂಧತಿ ಕುಲಕರ್ಣಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಗದಗ

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ