ಗದಗ್ ೦೯: ಕೆ ಎಂ ಯು ಸಂಘಟನೆಯಿಂದ ಸನ್ಮಾನ ಕಾರ್ಯಕ್ರಮವನ್ನು ಸಂಘಟನೆಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮೌಲಾನ ಅಬ್ದುಲ್ ಗಫೂರ್ ಪಲ್ಲೇದ್, ಮುಫ್ತಿ ಸಮದ್ ಜಕಾತಿ, ಮೌಲನ ಶಮ್ಶುದ್ದೀನ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುವ ಮುಖಂಡರು ಹಾಗೂ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿವೇಕ ಯಾವಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ಎಂ ಯು ಜಿಲ್ಲಾಧ್ಯಕ್ಷರಾದ ಸೈಯದ್ ಖಾಲಿದ್ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರದಿಂದ ಆಯ್ಕೆಯಾದ ನಾಮ ನಿರ್ದೇಶಕ ಹಾಗೂ ಸಿಂಡಿಕೇಟ್ ಸದಸ್ಯರಿಗೆ ವಿಶೇಷವಾದ ಸನ್ಮಾನವನ್ನು ಜರುಗಿತು.
ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಆಗಮಿಸಿದ ನೂತನವಾಗಿ ಅಧಿಕಾರ ವಹಿಸಿದೆ ಜಿ ಎಂ ದಂಡಿನ್ ವಕ್ಫ್ ಬೋರ್ಡ್ ಅಧ್ಯಕ್ಷರು, ಗದಗ್ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಶ್ರೀ ಬಿ ಬಿ ಅಸೂಟಿರವರು, ಮೋಹನ್ ಭಜಂತ್ರಿ ಸಿಂಡಿಕೇಟ್ ಸದಸ್ಯರು ಕಾನೂನು ವಿಶ್ವವಿದ್ಯಾಲಯ, ನಾಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರು ಶ್ರೀ ಬಸವರಾಜ್ ಕಡೆಮನಿ, ನಗರಸಭೆಯ ನಾಮನಿರ್ದೇಶಕ ಸದಸ್ಯರಾಗಿ, ಶ್ರೀ ಮಹಮ್ಮದ್ ಶಾಲ್ಗರ್, ದುರ್ಗೇಶ್ ವಿಭೂತಿ, ಮೋಹನ್ ಕಟ್ಟಿಮನಿ, ಬಾಬು ನರಸಾಪೂರ, ಶರಣಪ್ಪ ಗೊಳಗೂಳಕಿ, ಆಶ್ರಯ ಸಮಿತಿಯ ಸದಸ್ಯರು ಇಮಾಮ್ ಸಾಬ್ರು ರೋಣ, ಪ್ರಧಾನ ಮಂತ್ರಿ ೧೫ ಪಾಯಿಂಟ್ ಸಮಿತಿ ಸದಸ್ಯರಾಗಿ ರಿಯಾಜ್ ಅತ್ತಾರ್, ಹಾಗೂ ನೂತನವಾಗಿ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷರಾದ ಶ್ರೀ ಭಾಷಾಸಾಬ್ ಮಲ್ಸಮುದ್ರ ಹಾಗೂ ಉಪಾಧ್ಯಕ್ಷರಾಗಿ ಅಬ್ಬುರಾಟಿ ರವರು ಹಾಗೂ ಮುಂತಾದವರಿಗೆ ವಿಶೇಷವಾದ ಸನ್ಮಾನವನ್ನು ಕರ್ನಾಟಕ ಮುಸ್ಲಿಂ ಯುನಿಟಿ ಇಂದ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷರಾದ ಸೈಯದ್ ಖಾಲಿದ್ ಕೊಪ್ಪಳ ಸರ್ವ ಸದಸ್ಯರಿಗೆ ಸ್ವಾಗತವನ್ನು ಕೊರಿದರು
ನೂತನವಾಗಿ ಆಯ್ಕೆಯಾದ ಸಿಂಡಿಕೇಟ್ ಸದಸ್ಯರಾದ ಮೋಹನ್ ಭಜಂತ್ರಿ ರವರು ಮಾತನಾಡಿ ಅಲ್ಪಸಂಖ್ಯಾತರು ಶೈಕ್ಷಣಿಕ ಸುಧಾರಣೆಯಾಗಬೇಕು, ಸರ್ಕಾರಿ ಸೌಲಭ್ಯಗಳನ್ನು ಉಪಯೋಗ ಮಾಡಬೇಕು ಎಂದು ಹೇಳಿದರು. ಮತ್ತೋರ್ವ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿ ಬಿ ಬಿ ಅಸೋಟಿ ಅವರು ಮಾತನಾಡಿ ಗದಗ ಜಿಲ್ಲೆಯಲ್ಲಿ ಶ್ರೀ ಎಚ್ ಕೆ ಪಾಟೀಲ್ ರವರ ನೇತೃತ್ವದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನವನ್ನು ನೀಡುತ್ತಾ ಶ್ರೀ ಎಚ್ ಕೆ ಪಾಟೀಲ್‌ರವರು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸದಾಕಾಲ ಶ್ರಮಿಸುತ್ತಾ ಬಂದಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಎಲ್ಲರೂ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ವಿವೇಕ್ ಯಾವಗಲ್ ರವರು ಮಾತನಾಡಿ ರಾಜ ಹಾಗೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಶೈಕ್ಷಣಿಕ ಆರ್ಥಿಕ ರಾಜಕೀಯವಾಗಿ ಬೆಳೆಯಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ತಾವು ಸದಾ ಕಾಲ ಸಮಾಜದ ಪರವಾಗಿ ಹಾಗೂ ಅಭಿವೃದ್ಧಿಯ ಪರವಾಗಿ ಸಂಘಟನೆ ಜೊತೆಗೆ ಸದಾ ಕಾಲ ಇರೋರು ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮ ಗುರುಗಳಾದ ಮೌಲಾನಪಲ್ಲೇದ್ ರವರು ಸಮಾಜದಲ್ಲಿ ಒಗ್ಗಟ್ಟದಿಂದ ಕೋಮುಸೌಹಾರ್ದತೆಯಿಂದ ಶಾಂತಿಯಿAದ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಲ್ಪಸಂಖ್ಯಾತರು ಸಬಲರಾಗಬೇಕು ಎಂದು ಮೌಲಾನಾ ಅವರು ಹೇಳಿದರು ಅದರ ಜೊತೆಗೆ ಯುವಕರು ಒಗ್ಗಟ್ಟಿನಿಂದ ಶಕ್ತಿಯಾಗಿ ಒಳ್ಳೆ ಕಾರ್ಯಗಳನ್ನು ಮಾಡಬೇಕು ಕೆಎಂಯು ಅಂತಹ ಒಳ್ಳೆಯ ಸಂಘಟನೆಯಲ್ಲಿ ಪಾಲ್ಗೊಂಡು ಸಮಾಜಮುಖಿ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಮಹಮ್ಮದ್ ಶಫಿ ಯರಗುಡಿರವರು ನೆರವೇರಿಸಿದರು. ಕಾರ್ಯಕ್ರಮದ ವಂದನೆಗಳನ್ನು ಜಾಫರ್ ಅಲಿ ಸೈಯದ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಅಕ್ಬರಅಲಿ ಬೇಗ್, ನ್ಯಾಯವಾದಿಗಳಾದ ಎಸ್ ಕೆ ನದಾಫ್, ಇರ್ಫಾನ್ ಡಂಬಳ,ಇಬ್ರಾಹಿA ಹಳ್ಳಿಕೆರೆ, ಶೊಖತ್ ಕಾತರಕಿ, ಯಾಸಿನ್ ಬೋದಲೇಖಾನ್ ರಿಯಾಜ್ ತಹಶೀಲ್ದಾರ್, ಅಬ್ದುಲ್ ಉಮಚಗಿ, ಮುನ್ನಾ ರೇಷ್ಮೆ, ಸಾಧಿಕ್, ದಾವಲ ತಹಶೀಲ್ದಾರ್, ಫಾರೂಕ್ ಸಿಂದಗಿ, ದಾವಲ್ ಕಂಪಲಿ, ಮತ್ತಿನ ಲಡ್ಸ್ಯಾಬ್ನವರ್, ದಾದು ಮುಂಡರಗಿ, ಅಲ್ತಾಫ್ ಕಟ್ಟಿಮನಿ, ಇಸ್ಮಾಯಿಲ್ ಕೊಪ್ಪಳ, ಅನ್ವರ್ ಬಾವಾಜಿ, ಮುನ್ನ ಇರಕಲ್,ಅಜಾಜ್, ಹಲವಾರು ಹಿರಿಯರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.