ಗದಗ ಸೆಪ್ಟೆಂಬರ್ 9: 58ನೇ ಅಂತಾರಾಷ್ಟ್ರಿಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಗದಗ ಜಿಲ್ಲಾ ಮಟ್ಟದ ಸಾಕ್ಷರತಾ ದಿನಾಚರಣೆಯನ್ನು ಜಿಲ್ಲಾಡಳಿತ ಕಛೇರಿಯ ಆವರಣದಲ್ಲಿ ನೆರವೇರಿಸಲಾಯಿತು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು ( ಆಡಳಿತ) ಜಿ.ಎಲ್. ಬಾರಾಟಕ್ಕೆ ಇವರು ಸಾಕ್ಷರತಾ ಧ್ವಜಾರೋಹಣವನ್ನು ನೆರವೇರಿಸಿದರು. ಶಿಕ್ಷಣದ ಮಹತ್ವ ಸಾರುವ ದಿನವು ಇದಾಗಿದೆ. ನಾವು ಯಾವುದೇ ರಂಗದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸಾಕ್ಷರತೆ ಅತೀ ಅವಶ್ಯಕ, ಎಲ್ಲರೂ ಸಾಕ್ಷರರಾಗಬೇಕು. ಹಾಗೂ ವಿದ್ಯಾವಂತರು ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಬೇಕು. ಜನರು ಸ್ವಾವಲಂಬಿಯಾಗಿ ಬದುಕಲು ಸಾಕ್ಷರತೆ ಒಂದು ಊರುಗೋಲು ಇದ್ದಂತೆ ಎಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎಸ್.ಎಸ್. ಕುರಿಯವರ ಅವರು ಸ್ವಾಗತಿಸಿ ಸಾಕ್ಷರತೆ ಕುರಿತು ಪ್ರಾಸ್ತಾವಿಕವಾಗಿ ಮಾತಾನಾಡುತ್ತಾ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯತ ಸಾಕ್ಷರತಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಲಿಂಕ್ ಡಾಕ್ಯೂಮೆಂಟ್ ಜನಶಿಕ್ಷಣ ನಿಲಯ ಯೋಜನೆಯಡಿಯ ಮೂಲ ಸಾಕ್ಷರತಾ ಕಾರ್ಯಕ್ರಮ ಮತ್ತು ರಾಷ್ಟç ಮಟ್ಟದ ನವಭಾರತ ಸಾಕ್ಷರತಾ ಕಾರ್ಯಕ್ರಮಗಳನ್ನು ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಜೆ.ಎ. ಬಾವಿಕಟ್ಟಿ, ಹಾಗೂ ಎಸ್.ಪಿ. ಪ್ರಭಯ್ಯನಮಠ, ಮತ್ತು ಗದಗ ಗ್ರಾಮೀಣ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು, ಸಾಕ್ಷರತಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಸ್ತಿಜಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯರರಾದ ಶ್ರೀಮತಿ ಹೊನಗುಡಿ, ಹಾಗೂ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಮತ್ತು ವಿಶೇಷವಾಗಿ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಬೋಧಕರೂ ಕೂಡಾ ಅಂತರಾಷ್ಟ್ರಿಯ ಸಾಕ್ಷರತಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯ ಲೋಕ ಶಿಕ್ಷಣ ಸಮಿತಿಯಿಂದ ಬಂದಂತಹ ಸಾಕ್ಷರತಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿತ್ತಿ ಪತ್ರಗಳನ್ನು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಹಿಸಿದ ಎಲ್ಲರೂ ಅನಾವರಣಗೊಳಿಸಿದರು. ಅಶೋಕ ಹಾದಿ, ಸಾಕ್ಷರತಾ ಪ್ರಮಾಣ ವಚನವನ್ನು ಬೋಧಿಸಿದರು ಹಾಗೂ ಕಾರ್ಯಕ್ರಮದ ನಿರೂಪಿಸಿದರು.
ಶ್ರೀನಿವಾಸ ದುಂಡಸಿ, ದೈಹಿಕ ಶಿಕ್ಷಕರು, ಸ.ಪ್ರೌ.ಶಾಲೆ, ಎಸ್.ಎಮ್.ಕೆ. ನಗರ, ಗದಗ ಹಾಗೂ ಎಮ್.ಎ. ಯರಗುಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಗದಗ ಶಹರ ವಲಯ ಇವರು ವಂದನಾರ್ಪಣೆ ಮಾಡಿದರು.