ಗದಗ ಸಪ್ಟೆಂಬರ್ 8:ವಿದ್ಯಾರ್ಥಿ ಜೀವನದಿಂದ ಲಕ್ಕುಂಡಿ ಬಗ್ಗೆ ಅಭಿಮಾನ ಹೊಂದಿ ಮೊದಲ ಬಾರಿ ಶಾಸಕನಾದ ಸಂದರ್ಭದಲ್ಲಿ ಆಗಬೇಕಾಗಿರುವ ಅಭಿವೃದ್ಧಿ, ಸಂಶೋದನೆ ಬಗ್ಗೆ ಹತ್ತು ಹಲವು ಕನಸುಗಳನ್ನು ಕಂಡಿದ್ದೆ. ಅಂತಹ ಕನಸುಗಳನ್ನು ನನಸು ಮಾಡಲು ಆ ಭಗವಂತ ನಿಮ್ಮ ಮೂಲಕ ಈ ಸುವರ್ಣಾವಕಾಶ ಒದಗಿಸಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.
ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 13 ಆರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಕುಂಡಿಗೆ ಹೋದವ ಹಂಪಿಗೆ ಹೊಗುತ್ತಾನೆ. ಹಂಪಿಗೆ ಹೋದವ ಲಕ್ಕುಂಡಿಗೆ ಬಂದೇ ಬರ್ತಾನೆ ಎನ್ನುವಂತಾಗಬೇಕು. ಕಟ್ಟೆಯ ಕೆಳಗೆ ಅವಿತಿರುವ ಕಲೆ, ಶಿಲ್ಪಕಲೆಗಳು ಅದ್ಬುತ ಕಲಾಕೃತಿಗಳನ್ನು ಉತ್ಖನನವಾಗಬೇಕಾದರೆ ಗ್ರಾಮಸ್ಥರ ಪ್ರೀತಿ, ಸ್ನೇಹ, ವಿಶ್ವಾಸ, ತ್ಯಾಗ ಬೇಕಾಗುತ್ತದೆ.
ಕಲ್ಯಾಣ ಚಾಲುಕ್ಯ ಕಾಲದಲ್ಲಿ ಅದ್ಬುತ ಶಿಲ್ಪಕಲೆಗಳನ್ನು ಅಗೌರವದಿಂದ ನೋಡಲಾಗುತ್ತಿದೆ. ಇಂದಿನ ದಿನದಲ್ಲೂ ತಿಪ್ಪೆಯನ್ನು ಅಗೆದರೆ 20ಕ್ಕೂ ಹೆಚ್ಚು ಶಿಲ್ಪಕಲೆಗಳು. ಸಿಗುತ್ತವೆ. ಕಟ್ಟೆಯನ್ನು ಅಗೆದರೂ ಮ್ಯೂಸಿಯಂ ಹಿಡಿಸಲಾಗದಷ್ಟು ಪಾರಂಪರಿಕ ಶಿಲ್ಪಕಲೆಗಳು ದೊರೆಯುತ್ತವೆ.ಆದ್ದರಿಂದ ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಲಕ್ಕುಂಡಿಯನ್ನು ಚಾಲುಕ್ಯರು ಠಂಕ ಶಾಲೆಯನ್ನಗಿಸಿಕೊಂಡಿದ್ದರು ಆ ಕಾಲದ ಇತಿಹಾಸ ಸಂಸ್ಕöÈತಿ ,ವೈಭವದ ಮೆರಗು,ಸಂಭ್ರಮ ಮರುಕಳಿಸುವಂತೆ ಆಂದೋಲನ ಪ್ರಾರಂಭಿಸಿ ಅದಕ್ಕೆ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡುವ ಕೆಲಸವಾಗಬೇಕು ಎಂದರು.
ಕರ್ನಾಟಕದಲ್ಲಿ ಸುಮಾರು 25 ಸಾವಿರ ಸ್ಮಾರಕಗಳು ಇದ್ದಾವೆ,ಅವೆಲ್ಲವನ್ನು ಸರ್ಕಾರದಿಂದ ಅಭಿವೃದ್ಧಿಗೊಳಿಸುವುದರ ಜೊತೆಗೆ ಊರಿನ ಮತ್ತು ಸ್ಮಾರಕಗಳ ಬಗ್ಗೆ ಅಭಿಮಾನ ಹೊಂದಿ ಅಮೇರಿಕದಲ್ಲಿರುವ ಕನ್ನಡಿಗರು ಮುಂದೆ ಬಂದು ದತ್ತು ತೆಗೆದುಕೊಳ್ಳುತ್ತಿರುವುದು ಗರ್ವ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ಲಕ್ಕುಂಡಿ ಪ್ರಾಧಿಕಾರಕ್ಕೆ ಅಪಾರ ಅನುದಾನ ನೀಡಲಾಗುತ್ತಿದ್ದು ಲಕ್ಕುಂಡಿ ಪ್ರಾಧಿಕಾರದ ಆಯುಕ್ತರಾದ ಶರಣು ಗೊಗೇರಿ ಲಕ್ಕುಂಡಿಯ ಅಭಿವೃದ್ಧಿಗೆ ಸದಾ ಕ್ರೀಯಾ ಶೀಲರಾಗಿ,ಉತ್ಸುಕತೆಯಿಂದ ,ಸರ್ಕಾರದ ಆಲೋಚನೆ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿ ಕೆಲಸವನ್ನು ಮಾಡಿ ಲಕ್ಕುಂಡಿಯನ್ನು ಸುಪ್ರಸಿದ್ಧ ಪ್ರವಾಸ ತಾಣವನ್ನಾಗಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಕುಂಡಿಗೆ ತನ್ನದೇ ಆದ ಐತಿಹಾಸಿಕ ಸ್ಥಾನವಿದೆ. ಪಾರಂಪರಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ಲಕ್ಕುಂಡಿಯಲ್ಲಿ 101 ದೇವಾಲಯ, 101 ಬಾವಿಗಳಿವೆ ಎಂಬುದು ಇತಿಹಾಸದಿಂದ ತಿಳಿದುಬಂದರೂ ಸಧ್ಯ 30 ದೇವಾಲಯಗಳು, 30 ಬಾವಿಗಳು ಮಾತ್ರ ಕಂಡುಬರುತ್ತಿವೆ. ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಅವಶ್ಯಕ.
ಸರಕಾರ ಯಾವುದೇ ಇರಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದು ಗ್ರಾಮಸ್ಥರ ಜಾವಾಬ್ದಾರಿಯಾಗಿದೆ. ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ 43 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಸಚಿವ ಎಚ್.ಕೆ. ಪಾಟೀಲ ಅವರು 5 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆರಂಭಿಕವಾಗಿ ಚಾಲನೆ ನೀಡಿರುವುದು ಸಂತಸದ ವಿಷಯ ಎಂದರು.
ಸರಕಾರ ಯಾವುದೇ ಇರಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದು ಗ್ರಾಮಸ್ಥರ ಜಾವಾಬ್ದಾರಿಯಾಗಿದೆ. ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ 43 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಸಚಿವ ಎಚ್.ಕೆ. ಪಾಟೀಲ ಅವರು 5 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆರಂಭಿಕವಾಗಿ ಚಾಲನೆ ನೀಡಿರುವುದು ಸಂತಸದ ವಿಷಯ ಎಂದರು.
ಲಕ್ಕುಂಡಿ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಹಾಲಗೊಂಡ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಅನುದಾನ ಒದಗಿಸುವುದು ಸೇರಿ ಪ್ರಸಕ್ತ ಸಾಲಿನ ಲಕ್ಕುಂಡಿ ಉತ್ಸವಕ್ಕೂ ಚಾಲನೆ ನೀಡಬೇಕು ಎಂದು ಸಿ.ಸಿ. ಪಾಟೀಲ ಅವರು ಸಚಿವರಿಗೆ ಮನವಿ ಮಾಡಿದರು. ಜೊತೆಗೆ ಸ್ಮಾರಕಗಳ ರಕ್ಷಣೆ, ಸ್ಮಾರಕಗಳ ಅಭಿವೃದ್ಧಿ ಗ್ರಾಮಸ್ಥರ ಹೊಣೆಗಾರಿಕೆಯೂ ಆಗಿದೆ ಎಂದು ತಿಳಿಸಿದರು.
ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಲಕ್ಕುಂಡಿ ಪರಂಪರೆಯನ್ನು ಗುರುತಿಸಿ ಹೆಚ್ಚಿನ ಪ್ರಾತಿನಿಧ್ಯ ನೀಡಿ ಪಾರಂಪರಿಕ ಸ್ಮಾರಕಗಳನ್ನು ರಕ್ಷಿಸಿಕೊಂಡು ಬರಲಾಗುತ್ತಿದೆ ಎಂದರು.
ಸಿಂಗಟಾಲೂರ ಏತನೀರಾವರಿ ಮೂಲಕ ಲಕ್ಕುಂಡಿ ಕೆರೆಗೆ ನೀರು ತರುವ ವ್ಯವಸ್ಥೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಗದಗ-ರೋಣ ತಾಲೂಕಿನ ಭಾಗದ ಗದ್ದಿಹಳ್ಳಕ್ಕೆ ನೀರು ಹರಿಸುವಂತೆ ಮಾಡಬೇಕು. ಕಣಗಿನಹಾಳ, ಕೋಟುಮುಚಗಿ, ಹರ್ಲಾಪೂರ, ನೀರಲಗಿ, ಬೆನಕೊಪ್ಪ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಿಂಗಟಾಲೂರ ಏತನೀರಾವರಿ ಮೂಲಕ ಲಕ್ಕುಂಡಿ ಕೆರೆಗೆ ನೀರು ತರುವ ವ್ಯವಸ್ಥೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಗದಗ-ರೋಣ ತಾಲೂಕಿನ ಭಾಗದ ಗದ್ದಿಹಳ್ಳಕ್ಕೆ ನೀರು ಹರಿಸುವಂತೆ ಮಾಡಬೇಕು. ಕಣಗಿನಹಾಳ, ಕೋಟುಮುಚಗಿ, ಹರ್ಲಾಪೂರ, ನೀರಲಗಿ, ಬೆನಕೊಪ್ಪ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
8 ದೇವಸ್ಥಾನಗಳ ಉತಾರಗಳನ್ನು ಗ್ರಾ.ಪ ಅಧ್ಯಕ್ಷ ಕೆಂಚಪ್ಪ ಪೂಜಾರ ಅವರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, 101 ದೇವಾಲಯ, 101 ಬಾವಿಗಳಿಗೆ ಹೆಸರಾಗಿರುವ ಲಕ್ಕುಂಡಿ ಗ್ರಾಮದ ಪಾರಂಪರಿಕ ದೇವಸ್ಥಾನಗಳ ರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೇಶದ ಸಂಪತ್ತಾಗಿರುವ ಖನಿಜ, ಆಹಾರ ದೇವಾಲಯಗಳ, ಶಿಲ್ಪಕಲೆ, ಸಂಗೀತ, ಸಾಹಿತ್ಯವನ್ನು ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಎಲ್ಲರ ಕರ್ತವ್ಯವಾಗಿದೆ ಎಂದರು.
ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ, ಅ.ದ. ಕಟ್ಟಿಮನಿ, ಮುಖಂಡರಾದ ವಿವೇಕ ಯಾವಗಲ್, ಅಶೋಕ ಮಂದಾಲಿ, ಪಾಲ್ಗೊಂಡಿದ್ದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು.