ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೇರಣಾತ್ಮಕ ಕಾರ್ಯಕ್ರಮ
ಗದಗ : ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಮಕ್ಕಳ ಸ್ಪರ‍್ತಿದಾಯಕ ಕರ‍್ಯಕ್ರಮದಲ್ಲಿ ಆಗಮಿಸಿದಂತಹ ಗದುಗಿನ ಆರ್.ಟಿ.ಓ ಆದಂತಹ ಶ್ರೀ ಬಾಲಚಂದ್ರ ಹೆಚ್ ಬಿ ಅವರು ಮಾತನಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿಯರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಮಕ್ಕಳು ಪಾಲಕರನ್ನು ಕುರಿತು ಪ್ರತಿದಿನ ಮಾಡುವ ಈ ಪ್ರರ‍್ಥನೆಯನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಇದೇ ರೀತಿ ಎಲ್ಲ ಮಕ್ಕಳು ತಂದೆ ತಾಯಿಯರಿಗೆ ಗೌರವವನ್ನು ನೀಡಿರಿ ಎಂದು ಹೇಳಿದರು.
ಮಕ್ಕಳಿಗೆ ರಸ್ತೆ ಸಂಚಾರದ ನಿಯಮಗಳನ್ನು ಹೇಳುತ್ತಾ ವಿದ್ಯರ‍್ಥಿಗಳು ಶಾಲೆಗೆ ಬಸ್, ಆಟೋ, ಬೈಕ್, ಕಾರುಗಳಲ್ಲಿ ಬರುತ್ತಾರೆ. ಶಾಲಾ ಬಸ್ಸಿನಲ್ಲಿ ನಿಯಮಿತವಾದ ವಿದ್ಯಾರ್ಥಿಗಳನ್ನು ಹಾಕಿಕೊಂಡು ಬರಬೇಕು ಹಾಗೂ ಬಸ್ ಚಾಲಕನ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಬಾರದು ಮತ್ತು ಬಸ್ ಇಳಿದ ನಂತರ ಅದರ ಮುಂಭಾಗದಿಂದ ಹೋಗಬಾರದು. ಏಕೆಂದರೆ ಬಸ್ಸಿನ ಮುಂಭಾಗ ಚಾಲಕನಿಗೆ ಕಾಣುವುದಿಲ್ಲ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಅದರ ಹಿಂಭಾಗದಿಂದ ಹೋಗಬೇಕು. ಆಟೋದಲ್ಲಿ ಬರುವಾಗ ವಿದ್ಯರ‍್ಥಿಗಳು ಜಾಗೃತವಾಗಿ ಕುಳಿತುಕೊಳ್ಳಬೇಕು. ಹೊರಗಡೆ ಕೈ ಹಾಕುವುದು, ಜೋತು ಬೀಳುವುದನ್ನು ಮಾಡಬಾರದು. ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ್ ಹಾಕಿಕೊಂಡು ವಾಹನ ಚಾಲನೆ ಮಾಡಬೇಕು ಏಕೆಂದರೆ ಅಪಘಾತ ಸಂಭವಿಸಿದಾಗ ನಮಗಾಗುವ ತೊಂದರೆಯನ್ನು ಕಡಿಮೆ ಮಾಡುತ್ತದೆ. ಬೈಕ್ ನಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಚಾಲನೆ ಮಾಡಬೇಕು. ಇದರಿಂದ ತಲೆಯ ಭಾಗ ತುಂಬಾ ಸುರಕ್ಷಿತವಾಗಿರುತ್ತದೆ ಎಂದು ಮಾತನಾಡಿದರು.
ಮುಂದುವರೆದು ಮಾತನಾಡಿದ ಇವರು ಒಕ್ಕಲಿಗನು ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು ಎಂಬ ಗಾದೆ ಮಾತಿನಂತೆ ಒಕ್ಕಲಿಗ ಎಂದರೆ ರೈತ, ಅವರು ಬಿತ್ತದಿದ್ದರೆ ಜಗತ್ತೇ ಹಸಿವಿನಿಂದ ಬಳಲಬೇಕಾಗುತ್ತದೆ. ಕೇವಲ ವಿದ್ಯೆ ಕಲಿಯುವುದು ಅಷ್ಟೇ ಅಲ್ಲ ರೈತನಿಗೆ ಗೌರವವನ್ನು ನೀಡುವುದನ್ನು ಕಲಿಯಬೇಕು. ಜೀವನ ನಡೆಸಲು ಓದು ಮಾತ್ರ ಸಾಕಾಗದು ಅದರ ಜೊತೆಗೆ ಅನೇಕ ಕೌಶಲ್ಯಗಳು ಕಲಿಯಬೇಕು ಅಂದಾಗ ಜೀವನವನ್ನು ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಕೌಶಲ್ಯ ಬಲ್ಲವನಿಗೆ ನಿರುದ್ಯೋಗವಿಲ್ಲ ಎಂದು ಹೇಳುತ್ತಾ ವಿದ್ಯಾರ್ಥಿಗಳು ಕಲಾಕ್ಷೇತ್ರ, ಸಾಹಿತ್ಯ ಕ್ಷೇತ್ರ, ಕರಕುಶಲ ಕೌಶಲ್ಯ, ವಾಣಿಜ್ಯ ಕ್ಷೇತ್ರ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಈ ಕರ‍್ಯಕ್ರಮದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ ಎಸ್.ವೈ.ಚಿಕ್ಕಟ್ಟಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರುಡಿದರು. ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಕಲಾವತಿ ಕೆಂಚರಾಹುತ್, ಯೋಗಜ್ಞಾನ ಗುರುಗಳು ಬೆಂಗಳೂರು ಶ್ರೀ ಅನಿಲ್ ನಾಯ್ಕ , ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾದ ಶ್ರೀ.ವಿ.ಬಿ.ತಾಳಿಯವರು ಉಪಸ್ಥಿತರಿದ್ದರು. ಐಸಿಎಸ್ಇ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಸ್ಥಾವರಮಠ ರವರು, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪ ಮುಖ್ಯೋಪಾಧ್ಯಾಯನೀಯರಾದ ಶ್ರೀಮತಿ ರಿಯಾನ ಮುಲ್ಲಾ ಅವರು, ಸಂಸ್ಥೆಯ ಶಿಕ್ಷಕ ವೃಂದದವರು, ಮುದ್ದು ವಿದ್ಯರ‍್ಥಿಗಳು ಭಾಗವಹಿಸಿದ್ದರು.