ಗದಗ : ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು :ಎಸ್ ವಿ ಸಂಕನೂರು

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

ಗದಗ  ಸಪ್ಟೆಂಬರ್ 5 : ಸಮಾಜದಲ್ಲಿ ಶಿಕ್ಷಕರನ್ನು ಸಾಕ್ಷಾತ್ ಬ್ರಹ್ಮನಂತೆ ಕಾಣುತ್ತಾರೆ ಅದಕ್ಕೆ ಗೌರವ ತರುವಂತೆ ಎಲ್ಲ ಶಿಕ್ಷಕವೃಂದ ಶಿಕ್ಷಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಅವರು ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ,ಗದಗ ಗ್ರಾಮೀಣ ಮತ್ತು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಇವರುಗಳ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಗದಗ ಜಿಲ್ಲೆ ಸೇರಿದಂತೆ ಇಡೀ ದೇಶಾದ್ಯಂತ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಶಿಕ್ಷಕರ ದಿನಾಚರಣೆಯ ಮೂಲ ಕಾರಣೀಕರ್ತರಾದ ರಾಧಾಕೃಷ್ಣನ್ ಅವರು ತಮ್ಮ ಹುಟ್ಟು ಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ತಿಳಿಸಿದರು . ರಾಧಕೃಷ್ಣನ್ ಅವರು ಪ್ರಾದ್ಯಾಪಕರಾಗಿ ವೃತ್ತಿ ಪ್ರಾರಂಭ ಮಾಡಿ ತಮ್ಮ ಜೀವನವನ್ನು ಮಕ್ಕಳಿಗಾಗಿ ಸಮರ್ಪಿಸಿಕೊಂಡರು, ರಾಧಾಕೃಷ್ಣನ್ ಅವರಿಗೆ ವಿವಿಧ ದೇಶಗಳು ಡಾಕ್ಟರೇಟ್ ನೀಡಿ ಗೌರವವನ್ನು ಸಲ್ಲಿಸಿವೆ. ಅವರ ಆದರ್ಶ ಜೀವನ ಶೈಲಿಯನ್ನು ಇಂದಿನ ಶಿಕ್ಷಕರು ಅಳವಡಿಸಿಕೊಂಡು ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಬೇಕು ಎಂದರು. ವಿವಿಧ ದೇಶಗಳಲ್ಲಿ ಶಿಕ್ಷಕರನ್ನು ಗೌರವದಿಂದ ಹಾಗೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ ಎಂದು ವಿವರಿಸಿದರು.

ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಅದರಲ್ಲಿ ಕೆಲಸ ಮಾಡುವ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದರೆ ಆ ಮಗುವಿನ ಭವಿಷ್ಯದ ನಿರ್ಮಾಣ ಮಾಡುವವರು ಶಿಕ್ಷಕರು ಎಂದು ತಿಳಿದುಕೊಂಡು ಎಲ್ಲರೂ ಗಂಭೀರತೆಯಿAದ ಕಾರ್ಯನಿರ್ವಹಿಸಬೇಕು.

ಶಿಕ್ಷಕಿ ಸಾವಿತ್ರಿ ಭಾಯಿ ಪುಲೆ ಅವರ ಹಾಗೇ ಉತ್ತಮ ಕೆಲಸ ಮಾಡಬೇಕು. ಶಿಕ್ಷಕರು ಕೇವಲ ಮಕ್ಕಳಿಗೆ ವಿಷಯವನ್ನು ತುಂಬುವ ಯಂತ್ರ ಆಗದೇ , ಮಕ್ಕಳಿಗೆ ಉತ್ಸಾಹ ಹಾಗೂ ವಿಷಯದ ಕುರಿತು ಕುತೂಹಲ ಮೂಡುವ ಹಾಗೇ ಪಾಠ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು.

ಪ್ರತಿಭಾವಂತ ಶಿಕ್ಷಕರಿದ್ದರೂ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡವ ಕೌಶಲ್ಯ ಬೆಳೆಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆ ಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ಬೆಳೆಸುವ ಹಾಗೇ ಎಲ್ಲರೂ ಚಿಂತನೆ ಮಾಡಬೇಕು,ಶಿಕ್ಷಣದ ಗುಣಮಟ್ಟ ಕುಸಿಯದಂತೆ ಭೋದನೆ ನೀಡಬೇಕು. ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತಂದಿದಕ್ಕೆ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ ನಾನು ಕೂಡ ಶಿಕ್ಷಕ ವೃತ್ತಿಯಿಂದ ಬಂದಿದ್ದೇನೆ ಅದು ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರು ಕೇವಲ ಶಾಲೆಗೆ ಸೀಮಿತವಾಗದೆ ತುರ್ತು ಪರಿಸ್ಥಿತಿಯಂತಹ ಕೋವಿಡ್ ವೇಳೆ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸರಿಯಾಗಿ ಕಾರ್ಯನಿರ್ವಹಿಸಿದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್ ಬಾರಟಕ್ಕೆ, ಸರ್ವರನ್ನು ಸ್ವಾಗತಿಸಿ ಮಾತನಾಡಿ ಶಿಕ್ಷಕರು ಪ್ರಾರಂಭದಿAದ ನಿವೃತ್ತಿ ವರೆಗೆ ಸದಾ ಕ್ರಿಯಾ ಶೀಲಾರಾಗಿ ಕೆಲಸ ಮಾಡಬೇಕು. ಮಗುವಿಗೆ ತಾಯಿ ಉಸಿರು ಮತ್ತು ತಂದೆಯಿAದ ಹೆಸರು ಬರುತ್ತೆ ಶಿಕ್ಷಕನಿಂದ ಮಗುವಿಗೆ ಹೆಸರು ಉಸಿರು ಶಾಶ್ವತವಾಗಿ ಇರುವಂತೆ ಮಾಡಿ ವಿದ್ಯಾರ್ಥಿಯ ಭವಿಷ್ಯ ನಿರ್ಮಿಸುವ ಶಿಲ್ಪಿ ಯಾಗಬೇಕು ಹೇಳಿದರು.

ಉಪನ್ಯಾಸಕರಾಗಿ ಐಬಿ ಬೆನಕೊಪ್ಪ ಅವರು ಮಾತನಾಡಿ ಶಿಕ್ಷಕರ ಬೇಡಿಕೆ , ಜವಾಬ್ದಾರಿ ,ಸವಾಲುಗಳ ಕುರಿತು ಶಿಕ್ಷಕರ ದಿನಾಚರಣೆಯಲ್ಲಿ ಚರ್ಚೆ ಮಾಡಬೇಕು. ಸಾಕಷ್ಟು ಕತ್ತಲು ಆವರಿಸಿದ ಮನಸ್ಸಿನ್ನು ಬೆಳಕಿನಡೆಗೆ ಸಾಗಿಸಲು ಶಿಕ್ಷಕರು ಬೇಕು, ಹಾಗಾಗಿ ಶಿಕ್ಷಕರು ಹೃದಯ ಶ್ರೀಮಂತಿಕೆ ಹೊಂದಬೇಕು. ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢತೆ ಹಾಗೂ ನೈತಿಕತೆ ಹೊಂದಿರಬೇಕು ಎಂದು ಶಿಕ್ಷಕ ವೃತ್ತಿ ಬಗ್ಗೆ ಸುಧಿರ್ಘವಾಗಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕöÈತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್ ಸಾಬ ಬಬರ್ಚಿ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ, ನೌಕರರ ಸಂಘದ ಅಧ್ಯಕ್ಷರಾದ ರವಿ ಗುಂಜಿಕರ,ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ, ಎಸ್ ಎನ್ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್‌ಎಸ್‌ಬುರಡಿ, ವಿ.ವಿ.ನಡುವಿನಮನಿ ,ಶಾಲಾ ಶಿಕ್ಷಕರು,ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.

ಕಾರ್ಯಕ್ರಮವನ್ನು ವಿರೇಶ ವಾಲ್ಮಿಕಿ ,ಬಿ.ಎಂ ಎರಗುಡಿ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *