ಗದಗ : ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಸಕಲಮಂಗಲ ವಾದ್ಯಗಳೊಂದಿಗೆ ಶ್ರಾವಣ ಮಾಸದ ಕಡೆ ಸೋಮವಾರ ಸಾಯಂಕಾಲ ಭಾರಿ ವಿಜೃಂಭಣೆಯಿಂದ ನಡೆಯಿತು .
ಜಾತ್ರೆಯ ದಿನವಾದ ಇಂದು ಬೆಳಿಗ್ಗೆಯಿಂದಲೆ ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಅಭಿಷೇಕ , ಮಹಾಪ್ರಸಾದ , ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು .
ಪಲ್ಲಕ್ಕಿ ಉತ್ಸವ , ಗೋಣಿ ಬಸವೇಶ್ವರ ಪತಾಕೆ ಸವಾಲು ಕಾರ್ಯಕ್ರಮಗಳ ಮೂಲಕ ಸಂಜೆ ರಥೋತ್ಸವದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಲವು ವಾದ್ಯಗಳೊಂದಿಗೆ , ಭಜನೆಯೊಂದಿಗೆ ದೇವಸ್ಥಾನದ ಆವರಣದಿಂದ ಶ್ರೀ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವದ ಸಕಲ ಸಿದ್ಧತೆಯೊಂದಿಗೆ ಸಾವಿರಾರು ಭಕ್ತರ ನಡುವೆ ಮಂಗಲ ವಾದ್ಯಗಳೊಂದಿಗೆ ಭಾರಿ ವಿಜ್ರಂಬಣೆಯಿಂದ ರಥೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಭಕ್ತಿ ಮೆರೆದರು