Wednesday, March 26, 2025
Google search engine
Homeಗದಗಗದಗ : ಸಾಕ್ಷರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ

ಗದಗ : ಸಾಕ್ಷರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ

ಮುಂಡರಗಿ: ತಾಲೂಕಾ ಗ್ರಾಪಂ ವ್ಯಾಪ್ತಿಗಳ ಅನಕ್ಷರಸ್ಥ ಗ್ರಾಮ ಪಂಚಾಯತ ಸದಸ್ಯರಿಗೆ ಇಚ್ ಒನ್ ಟೀಚ್ ಒನ್ ಕಾರ್ಯಕ್ರಮದಡಿ ಸಾಕ್ಷರರನ್ನಾಗಿಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಶಿಬಿರಕ್ಕೆ ಗುರುವಾರ ಮುಂಡರಗಿ ತಾಪಂ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಹಮ್ಮಿಕೊಂಡ ಸಾಕ್ಷರ ಸನ್ಮಾನ ಕಾರ್ಯಕ್ರಮ ಮಹತ್ತರ ಕಾರ್ಯಕ್ರಮವಾಗಿದೆ. ಇದರಿಂದ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ತಾರತಮ್ಯ ಹಾಗೂ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿ ಎಂದು ಹೇಳಿದರು‌.

ಆ ನಿಟ್ಟಿನಲ್ಲಿ ಮೂರು ದಿನ ತರಬೇತಿ ಪಡೆದ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು ಅನಕ್ಷರಸ್ಥ ಗ್ರಾಪಂ ಸದಸ್ಯರನ್ನು ತರಬೇತಿ ನೀಡಿ ಸಾಕ್ಷರರನ್ನಾಗಿಸಿದರೆ ಇದು ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದಂತೆ ಇದು ಸಾಮಾಜಿಕ ಜವಾಬ್ದಾರಿಯು ಹೌದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ತರಬೇತಿದಾರರಾಗಿ ಶಿಕ್ಷಣ ಇಲಾಖೆ ಕೆ.ಬಿ ತಂಬ್ರಳ್ಳಿ ಹಾಗೂ ವಿ ಎಚ್ ಹೊಳಿಯಮ್ಮನವರ ಅವರು ಮೂರು ದಿನಗಳ ತರಬೇತಿ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಮಂಜುನಾಥ ಮುಧೋಳ, ವಿಷಯ ನಿರ್ವಾಹಕ ಶಾಬುದ್ಧೀನ ನಧಾಪ, ತಾಪಂ ಸಿಬ್ಬಂದಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ