ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ
ಹೆಸರು ಪ್ರತಿ ಕ್ವಿಂಟಲ್ ರೂ. 8682 ನಿಗದಿ
ಗದಗ ಅಗಸ್ಟ 27 : 2025-25 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದಹೆಸರು ಹುಟ್ಟುವಳಿಯನ್ನು ಖರೀದಿಸಲಾಗುತ್ತಿದ್ದು ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸೋಮವಾರ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ರೈತರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅವರು ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.
ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಎಫ್ ಎ ಕ್ಯೂ ಗುಣಮಟ್ಟದ ಪರಿಶೀಲನೆಗಾಗಿ ಆಯಾ ಹೋಬಳಿ ವ್ಯಾಪ್ತಿಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳನ್ನು ಗ್ರೇಡರ್ ಆಗಿ ನೇಮಕ ಮಾಡಬೇಕು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಿದ ಹೆಸರು ಹುಟ್ಟುವಳಿಯನ್ನು ದಾಸ್ತಾನೀಕರಿಸಲು ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.
ಸರ್ಕಾರದ ಆದೇಶದನ್ವಯ ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 2 ಕ್ವಿಂಟಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ 10 ಕ್ವಿಂಟಲ್ ಮಾತ್ರ ಖರೀದಿಸಲು ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರಿಗೆ ಸೂಚಿಸಲಾಗಿದ್ದು ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್‌ಗೆ ರೂ.8682 /- ರಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ದಿನಾಂಕ 24-8-2024 ರ ಅನುಸಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸದರಿ ಆದೇಶದ ದಿನಾಂಕದಿAದ ರೈತರ ನೋಂದಣಿ 45 ದಿನದವರೆಗೆ ಹಾಗೂ ನೋಂದಣಿ ಕಾರ್ಯದ ಜೊತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ಜರುಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ಜಿಲ್ಲೆಯ 56 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ , ಸಹಕಾರಿ ಸಂಘಗಳ ಇಲಾಖೆ ಅಧಿಕಾರಿಗಳು, ಕೃಷಿ ಮಾರಾಟ ಇಲಾಖೆ, ಮಾರ್ಕೆಟಿಂಗ್ ಫೆಡರೇಷನ್ ಶಾಕಾ ವ್ಯವಸ್ಥಾಪಕರು, ಎಪಿಎಂಸಿ ಕಾರ್ಯದರ್ಶಿ, ಕೇಂದ್ರ ಹಾಗೂ ರಾಜ್ಯ ಉಗ್ರಾಣ ನಿಗಮದ ಶಾಖಾ ವ್ಯವಸ್ಥಾಪಕರು ಹಾಜರಿದ್ದರು.
ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಜಿಲ್ಲೆಯ 56 ಕಡೆಗಳಲ್ಲಿನ ಹೆಸರು ಖರೀದಿ ಕೇಂದ್ರಗಳ ವಿವರ ಈ ಕೆಳಗಿನಂತಿದೆ :
ಗದಗ ತಾಲೂಕು :- ಪಿಎಸಿಎಸ್ ಮುಳಗುಂದ, ಬಳಗಾನೂರ, ಹರ್ಲಾಪುರ, ಶಿರೋಳ,ಕೋಟುಮಚಗಿ-1, ಹೊಂಬಳ, ಕೋಟುಮಚಗಿ-2, ನೀರಲಗಿ, ಸೊರಟೂರ, ಕದಡಿ, ಲಿಂಗದಾಳ, ಕಣಗಿನಹಾಳ,ಕುರ್ತಕೋಟಿ, ಬಿಂಕದಕಟ್ಟಿ, ನೀಲಗುಂದ, ಶ್ರಿ ಪ್ರಭುಸ್ವಾಮಿ ಎಫ್ ಪಿ ಓ ಹೊಂಬಳ, ಟಿ ಎ ಪಿ ಸಿ ಎಂ ಎಸ್ ಗದಗ, ಶ್ರಮಜೀವಿ ಎಫ್ ಪಿ ಓ ಹಿರೇಹಂದಿಗೋಳ, ಗದಗ ಕೋ ಆಪ್ ಕಾಟನ್ ಸೇಲ್ ಸೊಸೈಟಿ ಲಿ.ಗದಗ.
ಶಿರಹಟ್ಟಿ ತಾಲೂಕು : – ಪಿ ಎ ಸಿ ಎಸ್ ಶಿರಹಟ್ಟಿ, ಟಿ ಎ ಪಿ ಸಿ ಎಂ ಎಸ್ ಶಿರಹಟ್ಟಿ, ಎಫ್ ಪಿ ಓ ಬೆಳ್ಳಟ್ಟಿ.
ಲಕ್ಷೆö್ಮÃಶ್ವರ ತಾಲೂಕು :- ಪಿ ಎ ಸಿ ಎಸ್ ಯಳವತ್ತಿ, ಪಿ ಎ ಸಿ ಎಸ್ ಅಡರಕಟ್ಟಿ
ಮುಂಡರಗಿ ತಾಲೂಕು:- ಪಿ ಎ ಸಿ ಎಸ್ ಆಲೂರ, ಪೇಠಾಲೂರ , ಬರದೂರ , ಶಿರೂರ
ನರಗುಂದ ತಾಲೂಕು:- ಪಿ ಎ ಸಿ ಎಸ್ ಚಿಕ್ಕ ನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪುರ, ಖಾನಾಪುರ, ಗಂಗಾಪುರ, ಟಿ ಎ ಪಿ ಸಿ ಎಂ ಎಸ್, ನರಗುಂದ.
ರೋಣ ತಾಲೂಕು: ಪಿ ಎ ಸಿ ಎಸ್ ಹೊಸಳ್ಳಿ, ಮಲ್ಲಾಪುರ, ರೋಣ-1, ರೋಣ-2, ಅಬ್ಬಿಗೇರಿ, ಯಾವಗಲ್ ,ಕೌಜಗೇರಿ, ಬೆಳವಣಿಕಿ, ಸವಡಿ, ನಿಡಗುಂದಿ, ಜಕ್ಕಲಿ,ಹೊಳೆ ಆಲೂರ, ಯಾ.ಸ. ಹಡಗಲಿ, ಟಿಎಪಿಸಿಎಂಎಸ್ ರೋಣ, ಎಫ್‌ಪಿಓ ಸವಡಿ.ಗಜೇಂದ್ರಗಡ ತಾಲೂಕು : ಟಿ ಎ ಪಿ ಸಿ ಎಂ ಎಸ್ ನರೇಗಲ್,ಟಿ ಎ ಪಿ ಸಿ ಎಂ ಎಸ್ ಗಜೇಂದ್ರಗಡ.