ಗದಗ ೨೨: ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ (ರಿ) ಕಡಲಬಾಳು ಸಂಸ್ಥೆಯು ಸಾಧಕರಿಗೆ ಕೊಡಮಾಡುವ ೨೦೨೪ನೇ ಸಾಲಿನ ಶ್ರೀ ಕೃಷ್ಣದೇವರಾಯ ರಾಷ್ಟಿçÃಯ ಪ್ರಶಸ್ತಿಗೆ ಕೃಷಿಯೊಂದಿಗೆ ನಾಡು ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ದಂಪತಿಗಳನ್ನು ಆಯ್ಕೆ ಮಾಡಲಾಗಿದ್ಧು ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ ೨೫-೮-೨೦೨೪ ರಂದು ವಿಜಯನಗರ ಜಿಲ್ಲೆಯ ಶ್ರೀ ಸದ್ಗುರು ಶಿವರಾಮ ಅವದೂತರ ಆಶ್ರಮ ದಕ್ಷಿಣ ಕಾಶಿ ಹೇಮಕೂಟ ಹಂಪಿಯಲ್ಲಿ ಜರುಗಲಿದೆ.