ಗದಗ ೨೨: ಇಂದು ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪೋತದಾರ್ ರವರನ್ನು ಗದಗ-ಬೆಟಗೇರಿ ಅವಳಿ ನಗರದ ನಗರಸಭೆಯ ಪೌರಾಯುಕ್ತರನ್ನಾಗಿ ಪ್ರಭಾರದಲ್ಲಿರಿಸಿರುವುದು ಸಮಾಜ ಕಲ್ಯಾಣ ಇಲಾಖೆಯ ಕೆಲಸ ಕಾರ್ಯಗಳಿಗೆ ಕುಂಠಿತವನ್ನುಂಟುಮಾಡುತ್ತದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಯೋಜನೆಗಳು ವಸತಿ ನಿಲಯ, ವಸತಿ ಶಾಲೆ ಇನ್ನು ವಿವಿಧ ಯೋಜನೆಗಳು ಸರಾಗವಾಗಿ ನಡೆಯಬೇಕಾದರೆ ಮೂಲ ಇಲಾಖೆಯಲ್ಲಿ ಶ್ರೀಯುತರನ್ನು ಮುಂದುವರಿಸಿ ಉತ್ತಮ ಕಾರ್ಯಗಳನ್ನು ಮಾಡಲು ಸಹಕರಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಪ್ರಕಾಶ್ ಕೆಲ್ಲೂರು, ಬಸವರಾಜ್ ಈರಣ್ಣವರ್, ಬಸವರಾಜ ಕಾಡುಗೊಳ್ಳಿ, ಸುರೇಶ್ ಚಲವಾದಿ, ಬಸವರಾಜ್ ಮುಳ್ಳಾಳ ಇನ್ನು ಮುಂತಾದವರು ಉಪಸ್ಥಿತರಿದ್ದರು.