ಕಂದಾಯ ಅಧಿಕಾರಿಗಳ ಸಭೆ
ಗದಗ ಅಗಸ್ಟ 16: ಗದಗ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರನ್ಸ್ ಹಾಲ್‌ದಲ್ಲಿ ಶುಕ್ರವಾರ ಕಂದಾಯ ಅಧಿಕಾರಿಗಳ ಸಭೆಯು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಪಹಣಿಗೆ ಆಧಾರ ಜೋಡಣಿಯಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿದ ಶಿರಹಟ್ಟಿ ತಾಲೂಕಿನ ತಹಶೀಲ್ದಾರರಾದ ಅನಿಲ ಬಡಿಗೇರ ಅವರು ತಾಲೂಕಿನ 82.11 % ರಷ್ಟು ಮತ್ತು ಲಕ್ಷೆö್ಮÃಶ್ವರ ತಾಲೂಕಿನ ತಹಶೀಲ್ದಾರರಾದ ವಾಸುದೇವ ಸ್ವಾಮಿ ಅವರು ತಾಲೂಕಿನ 80.19 % ರಷ್ಟು ಪ್ರಗತಿ ಸಾಧಿಸಿದ್ದು ಹಾಗೂ 80 % ರಷ್ಟು ಪ್ರಗತಿ ಸಾಧಿಸಿದ ಒಟ್ಟು 4 ಕಂದಾಯ ನಿರೀಕ್ಷಕರಿಗೆ ಹಾಗೂ 90% ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ ಒಟ್ಟು 11 ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು