Thursday, September 19, 2024
Google search engine
Homeಉದ್ಯೋಗವಿದ್ಯಾಜ್ಯೋತಿ ಸ್ಕಾಲರ್‌ಶಿಪ್ ಯೋಜನೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡದ ಹೆಣ್ಣುಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತದೆ...

ವಿದ್ಯಾಜ್ಯೋತಿ ಸ್ಕಾಲರ್‌ಶಿಪ್ ಯೋಜನೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡದ ಹೆಣ್ಣುಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತದೆ – ಸಚಿವರಾದ ಡಾ. ಹೆಚ್. ಕೆ. ಪಾಟೀಲ

ಗದಗ ೧೫: ಕೆನರಾ ಬ್ಯಾಂಕನ ಡಾ. ಬಿ. ಆರ್. ಅಂಬೇಡ್ಕರ ವಿದ್ಯಾಜ್ಯೋತಿ ಸ್ಕಾಲರ್‌ಶಿಪ್ ಯೋಜನೆಯ ಅಡಿಯಲ್ಲಿ ಗದಗ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಗದಗ ನಗರದ ಲಾಯನ್ಸ್ ಕ್ಲಬ್‌ನಲ್ಲಿ ದಿನಾಂಕ ೧೪-೦೮-೨೦೨೪ ರಂದು ೦೧-೩೦ ಘಂಟೆಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವಂತಹ ಮಹತ್ತರ ಯೋಜನೆಯಾಗಿ ೫ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಆಯಾ ತರಗತಿಗೆ ಹೆಚ್ಚಿನ ಅಂಕಪಡೆದ ಸಮುದಾಯದ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ಇದಾಗಿದ್ದು ಗದಗ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಈ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಚ್. ಕೆ. ಪಾಟೀಲ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆನರಾ ಬ್ಯಾಂಕಿನ ಮಹತ್ತರ ಹಾಗೂ ಸಮಾಜಮುಖಿ ಕಾರ್ಯಕ್ರಮ ಇದಾಗಿದ್ದು, ಪರಿಶಿಷ್ಟ ಜಾತಿ, ಪಂಗಡ ಮುಖ್ಯವಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಇಂತಹ ಯೋಜನೆಗಳಿಂದ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅನುಕೂಲವಾಗುವುದು ಮತ್ತು ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಬೇಕೆAದು ತಿಳಿಸಿದರು.
ಕೆನರಾ ಬ್ಯಾಂಕನ ಗದಗ ಶಾಕೆಯ ಮುಖ್ಯ ಪ್ರಬಂಧಕರಾದ ಅಯ್ಯಾಸ್ವಾಮಿ ಎನ್. ಮಾತನಾಡಿ ಕೆನರಾ ಬ್ಯಾಂಕನ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕೆನರಾ ಡಾ. ಬಿ. ಆರ್. ಅಂಬೇಡ್ಕರ ವಿದ್ಯಾಜ್ಯೋತಿ ಸ್ಕಾಲರ್‌ಶಿಪ್ ಯೋಜನೆಯ ಒಂದಾಗಿದ್ದು ಈ ಯೋಜನೆಯ ಅನುಷ್ಠಾನಕ್ಕಾಗಿ ಕೆನರಾ ಬ್ಯಾಂಕ್ ರಾಷ್ಟçವ್ಯಾಪಿ ೯೭೦೦ ಶಾಖೆಯಿಂದ ಒಟ್ಟು ೪೪೭೪೨ ವಿದ್ಯಾರ್ಥಿನಿಯರಿಗೆ ೧೮ ಕೋಟಿ ರೂಪಾಯಿಗಳಷ್ಟು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಹೆಣ್ಣುಮಕ್ಕಳ ಶೈಕ್ಷಣಿಕವಾಗಿ ಬಹಳಷ್ಟು ಪ್ರೋತ್ಸಾಹ ಸಿಗುವುದೆಂದು ತಿಳಿಸದಿರು.
ಈ ಕಾರ್ಯಕ್ರಮದಲ್ಲಿ ವಾಸಣ್ಣ ಕುರಡಗಿ ಮಾಜಿ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರು, ಸಂದೀಪ ಅಗರವಾಲ ಸಹಾಯಕ ಪ್ರಬಂಧಕರು ವಲಯ ಕಚೇರಿ ಹುಬ್ಬಳ್ಳಿ, ಸುನೀಲ ಕುಮಾರ ವಿಭಾಗೀಯ ಪ್ರಬಂಧಕರು ಬಾಗಲಕೋಟೆ, ಆಂಜನೇಯ ಕಟಗಿ ಪ್ರಥಮ ದರ್ಜೆ ಗುತ್ತಿಗೆದಾರರು, ಗದಗ ನಗರದ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು, ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ನಾಗರಾಜ ಹೆಚ್. ನಿರೂಪಿಸಿದರು. ಬಾಳಾಜಿರಾವ ಕುಲಕರ್ಣಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು