14.4 C
New York
Friday, May 9, 2025

Buy now

spot_img

ಗದಗ : ಬಣ್ಣದ ನಗರದ ಮೂಲಭೂತ ಸೌಕರ್ಯ ಒದಗಿಸಲು ನಗರಸಭೆ ಪೌರಾಯುಕ್ತರಿಗೆ ಮನವಿ

ಗದಗ ೨೯: ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ಮೂರನೇ ವಾರ್ಡ್ ಬಣ್ಣದ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ವತಿಯಿಂದ ಬಣ್ಣದ ನಗರ ನಿವಾಸಿಗಳಿಂದ ಎರಡನೆ ಬಾರಿಗೆ ಮನವಿ ಸಲ್ಲಿಸಲಾಯಿತು.

ಸಂಸ್ಥೆಯ ರಾಜ್ಯಾಧ್ಯಕ್ಷರಾದ ರಾ. ದೇ. ಕಾರಭಾರಿ ಮನವಿ ಸಲ್ಲಿಸಿ ಮಾತನಾಡಿ ಮೂರನೇ ವಾರ್ಡ್ ಬಣ್ಣದ ನಗರದಲ್ಲಿ ಮನುಷ್ಯರು ಬದುಕಲು ಲಾಯಕ್ಕಿಲ್ಲದ ಪ್ರದೇಶವನ್ನಾಗಿ ಮಾನ್ಯ ನಗರಸಭೆ ಪರಿಸ್ತಿತಿಯನ್ನು ನಿರ್ಮಾಣ ಮಾಡಿದ್ದು ಸದರಿ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕನಿಷ್ಠ ಸೌಲಭ್ಯಗಳಾದ, ಚರಂಡಿ ಸ್ವಚ್ಛತೆ, ಬೀದಿ ದೀಪ ನಿರ್ವಹಣೆ, ಸೌಚಾಲಯ, ರಸ್ತೆಗಳಂತಹ ಸೌಲಬ್ಯಗಳೂ ಇಲ್ಲ ಹಾಗೂ ಬೀದಿ ದೀಪ ನಿರ್ವಹಣೆಗಾಗಿ ಬೀದಿ ದೀಪ ಅಳವಡಿಸಲು ಅಲ್ಲಿನ ಜನರಿಂದ ಐವತ್ತರಿಂದ ನೂರು ರೂಪಾಯಿಗಳನ್ನು ನಗರಸಭೆಯ ಬೀದಿ ದೀಪ ನಿರ್ವಹನೆಯವರು ಪಡೆಯುತ್ತಿದ್ದು ಹಣ ನಿಡದಿದ್ದರೆ ಬೀದಿ ದೀಪ ಅಳವಡಿಸದೆ ವಾಪಸ್ಸು ದೀಪಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂಬ ಗಂಭೀರ ಆರೋಪವನ್ನು ಮೂರನೇ ವಾರ್ಡ್ ಸಾರ್ವಜನಿಕರು ನಮ್ಮೊಂದಿಗೆ ಹೇಳಿಕೊಂಡಿದ್ದು ಚರಂಡಿ ನಿರ್ವಹಣೆಗಾಗಿ ಬಣ್ಣದ ನಗರದಲ್ಲಿ ನಗರಸಭೆ ಸಿಬ್ಬಂದಿಗಳು ಬರುವುದೇ ಇಲ್ಲ ಕಳೆದ ಎರಡು ವರ್ಷಗಳ ಹಿಂದೆ ಮೂರನೇ ವಾರ್ಡ್ ಸದಸ್ಯರನ್ನು ಅಲ್ಲಿನ ಸಾರ್ವಜನಿಕರು ಕೂಡಿ ಹಾಕಿದಾಗ ಕೆಲವು ದಿನ ಸ್ವಚ್ಛತೆಗಾಗಿ ಬಂದಿದ್ದರು ನಂತರ ಈ ವರೆಗೂ ಸ್ವಚ್ಛತಾ ಕಾರ್ಯ ಮಾಡಿರುವುದಿಲ್ಲ, ಕಳೆದ ವಾರ ಮತ್ತೊಮ್ಮೆ ಮೂರನೇ ವಾರ್ಡ್ ಸದಸ್ಯರನ್ನು ನಿವಾಸಿಗಳು ಕೂಡಿ ಹಾಕಿದಾಗ ಮದ್ಯ ಪ್ರವೇಶ ಮಾಡಿದ ನಮ್ಮ ತಂಡದ ಸದಸ್ಯರು ನಮ್ಮನ್ನು ಸಂಪರ್ಕಿಸಿ ನಮ್ಮ ಮದ್ಯಸ್ತಿಕೆಯಲ್ಲಿ ವಾರ್ಡ್ ಸದಸ್ಯರನ್ನು ಬಿಡಿಸಿದ್ದು, ಸಾರ್ವಜನಿಕರ ಸಮಸ್ಯೆಯ ಕುರಿತು ಅಂದು ನಗರಸಭೆಯ ಅಧಿಕಾರಿ ಶ್ರೀ ಬಂಡಿವಡ್ಡರ್ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಿಯ ಸಮಸ್ಯೆಯನ್ನು ಹೇಳಿ ನಂತರ ನಗರಸಭೆ ಅಧಿಕಾರಿ ಶ್ರೀ ಬದಿ ಅವರನ್ನು ಸಹ ಸಂಪರ್ಕಿಸಿ ಚರಂಡಿ ಸ್ವಚ್ಛತೆಗಾಗಿ ಎಅಃ ಯನ್ನು ತರಿಸಿ ಅಲ್ಲಿನ ಸದಸ್ಯರ ಮೂಲಕ ಸ್ವಚ್ಛತಾ ಕೆಲಸ ಆರಂಬ ಮಾಡಲಾಯಿತು ಕನಿಷ್ಠ ಮೂರು ದಿನ ಕಾರ್ಯ ನಿರ್ವಹಿಸಿದ ಎಅಃ ಕೇವಲ ತೋರಿಕೆಯ ಕೆಲಸವನ್ನು ನಿರ್ವಹಿಸಿದೆ ಇನ್ನಷ್ಟು ನೋವಿನ ಸಂಗತಿ ಏನೆಂದರೆ ಮೂರನೇ ವಾರ್ಡ್ ಬಣ್ಣದ ನಗರದ ಚರಂಡಿಗಳಲ್ಲಿ ಶೇಖರಣೆಗೊಂಡ ತಾಜ್ಯದಲ್ಲಿ ಸಾಕಷ್ಟು ಹುಳುಗಳು ಓಡಾಡುತ್ತಿದ್ದು ಅ ಹುಳುಗಳು ಚರಂಡಿ ತುಂಬಿ ಬ್ಲಾಕ್ ಆಗಿರುವ ಕಾರಣ ಹೊರಗೆ ಬಂದು ಸಂಪೂರ್ಣವಾದ ಪರಿಸರವನ್ನು ವ್ಯಾಪಿಸಿದೆ ಅಲ್ಲದೆ ಮೂರನೇ ವಾರ್ಡ್ ರಸ್ತೆಗಳು ಸಂಪೂರ್ಣವಾಗಿ ಕಸ ಕಡ್ಡಿ ಮಣ್ಣಿನಿಂದ ಕೂಡಿದ ಕಾರಣ ಸದರಿ ಸಂಪೂರ್ಣ ಪರಿಸರ ಕೀಟಾಣುಗಳÀ ತಾಣವಾಗಿದೆ ಬಹುಷ್ಯ ಬಣ್ಣದ ನಗರ ಸ್ಥಾಪನೆ ಆದ ಸಮಯದಿಂದ ಇಲ್ಲಿಯವರೆಗೂ ನಗರಸಭೆ ಸದರಿ ವಾರ್ಡ್ನಲ್ಲಿ ಯಾವುದೇ ಕೆಲಸಗಳನ್ನು ಮಾಡಿರುವುದಿಲ್ಲ ಎಂದು ಮೇಲ್ನೋಟಕ್ಕೆ ಸಾಬಿತಾಗುತ್ತದೆ.

ಸಾರ್ವಜನಿಕ ರಕ್ಷಣೆ ಮತ್ತು ಬ್ರಷ್ಟಾಚಾರ ವಿರೋಧಿ ಸಂಸ್ಥೆ, ಕರ್ನಾಟಕ ಮೂರನೇ ವಾರ್ಡ್ ಬಣ್ಣದ ನಗರದಲ್ಲಿ ಬೀದಿ ದೀಪ ನಿರ್ವಹಣೆಯಲ್ಲಿ ನಗರಸಭೆ ಬೀದಿ ದೀಪ ನಿರ್ವಹಣಾ ಸಿಬ್ಬಂದಿಗಳು ಬೀದಿ ದೀಪ ದುರಸ್ಥಿಗಾಗಿ ಲಂಚವನ್ನು ಪಡೆಯುತ್ತಾರೆ. ಲಂಚ ನೀಡದಿದ್ದಲ್ಲಿ ಬೀದಿ ದೀಪ ಅಳವಡಿಸದೆ ಹಿಂತಿರುಗುತ್ತಾರೆ. ಬೀದಿ ದೀಪ ನಿರ್ವಹಣ ಸಿಬ್ಬಂದಿ ಮತ್ತು ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಸಂಸ್ಥೆಯ ಸದಸ್ಯರೊಂದಿಗೆ ತೆರಳಿ ಬೀದಿ ದೀಪಗಳನ್ನು ದುರಸ್ಥಿ ಮಾಡಬೇಕು. ಚರಂಡಿ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಮಾನವ ಸಂಪನ್ಮೂಲ ಕಳುಹಿಸಬೇಕು ನೆಪ ಮಾತ್ರದ ಸ್ವಚ್ಛತೆಯನ್ನು ಮಾಡದೆ ಚರಂಡಿಗಳ ಸಂಪೂರ್ಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡಿದ ಸುಲಭ ಶೌಚಾಲಯಕ್ಕೆ ನೀರು ವಿದ್ಯುತ ಸಂಪರ್ಕ ಒದಗಿಸಬೇಕು. ರಸ್ತೆ ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಮಾಡಿಕೊಂಡರು ಒಂದು ವೇಳೆ ಈ ಮೇಲಿನ ತುರ್ತು ಬೇಡಿಕೆಗಳನ್ನು ಕ್ರಮ ಕೈಗೊಳ್ಳದಿದ್ದಲ್ಲಿ ಸದರಿ ವಾರ್ಡಿನ ಬಣ್ಣದ ನಗರದಲ್ಲಿ ಯಾವುದೇ ಕಾರ್ಯಗಳು ನಡೆದಿರುವುದಿಲ್ಲ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ನಗರಸಭೆಗೆ ಬೀಗ ಹಾಕುವ ಮೂಲಕ ಪ್ರತಿಭಟನೆ, ಬಣ್ಣದ ನಗರವಾಗಿ ತೆರಳುವ ಅಂತ್ಯ ಸಂಸ್ಕಾರಗಳಿಗೆ ತಡೆ ನೀಡುವ ಮೂಲಕ ಹಾಗೂ ಸ್ಮಶಾನ ರಸ್ತೆ ಬಂದ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮೇರಿ ರಾದೇ ಸೇರಿದಂತೆ ಬಣ್ಣದ ನಗರದ ನಿವಾಸಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ