ಗದಗ ಅಗಸ್ಟ 12 : ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಅಗಸ್ಟ 14 ರಂದು ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ವಾಕಥಾನ್ ಜರುಗಲಿದೆ. ಅಗಸ್ಟ 14 ರಂದು ಜರುಗಲಿರುವ ಈ ತಿರಂಗಾ ಅಭಿಯಾನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಎನ್.ಸಿ.ಸಿ, ಎನ್.ಎಸ್.ಎಸ್ ಪಡೆ, ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದು ದೇಶಭಕ್ತಿ ಗೀತೆಗಳ ನಿನಾದದೊಂದಿಗೆ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ತಿರಂಗಾ ಅಭಿಯಾನವು ಪ್ರಾರಂಭವಾಗಿ ನಗರದ ಗಾಂಧೀ ಸರ್ಕಲ್‌ಗೆ ಬಂದು ತಲುಪುವುದು. ಗಾಂಧೀ ಸರ್ಕಲ್‌ದಲ್ಲಿ ಸಂವಿಧಾನ ಪೀಠಿಕೆಯನ್ನು ಪಠಿಸುವುದರೊಂದಿಗೆ ತಿರಂಗಾ ಅಭಿಯಾನವು ಮುಕ್ತಾಯಗೊಳ್ಳಲಿದೆ.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂದು ಬಿಳಿ ಬಣ್ಣದ ಉಡುಪು ಧರಿಸಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.