Monday, September 16, 2024
Google search engine
Homeಉದ್ಯೋಗಗದಗ : ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಆಗ್ರಹ

ಗದಗ : ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಆಗ್ರಹ

ಗದಗ: ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಕಟಾವು ಪ್ರಾರಂಭವಾಗಿ ಸುಮಾರು ದಿನಗಳಾಗಿವೆ. ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಸೋಮವಾರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರಕಾರ ಈಗಾಗಲೇ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು ಒಳ್ಳೆಯ ಬೆಳವಣಿಗೆಯಾದರೂ ಹೆಸರು ಬೆಳೆ ಖರೀದಿ ಕೇಂದ್ರವನ್ನು ಆರಂಭಿಸಿದಾಗ ಮಾತ್ರ ರೈತರಿಗೆ ಲಾಭ ಸಿಗಲಿದೆ. ಇಲ್ಲದಿದ್ದರೆ ರೈತರು ತಮ್ಮ ಹಣದ ಅಡಚಣೆಗಾಗಿ ಕಡಿಮೆ ಬೆಲೆಯಲ್ಲಿ ಬೇರೆ ಕಡೆಗಳಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ಅಧಿಕಾರಿಗಳು ಶೀಘ್ರವೇ ಜಿಲ್ಲೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಸರಕಾರ ಈಗಾಗಲೇ ಪ್ರತಿ ಕ್ವಿಂಟಾಲ್‌ಗೆ ೮೬೮೨ ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಕೇಂದ್ರ ತೆರೆದು ಹೆಸರು ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಕಳೆದ ವರ್ಷ ಬರದಿಂದಾಗಿ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಫಸಲನ್ನು ನಿರೀಕ್ಷಿಸಲಾಗಿದ್ದು, ರೈತರ ಹಿತರಕ್ಷಣೆಗಾಗಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ನಿರಂತರ ಒಂದು ತಿಂಗಳಿAದ ಜಿಲ್ಲೆಯಲ್ಲಿ ಮಳೆ ಆಗುತ್ತಿರುವ ಕಾರಣ ಹೆಸರು ಬೆಳೆಗೆ ಹೆಚ್ಚು ತೇವಾಂಶದಿAದ ಇಳಿವರಿಯಲ್ಲಿ ಕುಂಟಿತ ಕಂಡು ಬಂದಿದ್ದು, ತುಂಗಭದ್ರ ನದಿ ಹಾಗೂ ಮಲಪ್ರಭಾ ನದಿ ಬೆಣ್ಣೆ ಹಳ್ಳದ ಮಹಾಪೂರದಿಂದ ರೈತರ ಬೆಳೆ ಹಾಳಾಗಿದೆ. ಉಳಿದಂತೆ ಹೆಸರು ಬೆಳೆ ಕಟಾವು ಮಾಡುತ್ತಿರುವದರಿಂದ ಜಿಲ್ಲೆಯಾದ್ಯಂತ ಎಪಿಎಂಸಿ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ಕೆವಲ ೪ ರಿಂದ ೫ ಸಾವಿರ ಪ್ರತಿ ಕಿಂಟಲಿಗೆ ಮಾರಾಟವಾಗುತ್ತಿದೆ. ಆದ ಕಾರಣ ಕೂಡಲೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ಟಾಸ್ ಪೂರ್ಸ್ ಸಭೆ ಮಾಡಿ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿದರು.

ಒಂದು ವಾರದಲ್ಲಿ ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಎಲ್ಲ ತಾಲೂಕ ಹಾಗೂ ಜಿಲ್ಲಾ ಎಪಿಎಂಸಿ ಗೇಟುಗಳಿಗೆ ಕೀಲಿ ಹಾಕಿ ವಹಿವಾಟು ಬಂದು ಮಾಡಿ ಖರೀದಿ ಕೇಂದ್ರ ತೆರೆಯುವರೆಗೆ ಚಳುವಳಿ ಮಾಡಲಾಗುವದು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನೆಡೆದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದರ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಈ ಮನವಿಯ ಮುಖಾಂತರ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ, ಜಿಲ್ಲಾ ಗೌರವಧ್ಯಕ್ಷ ಮಹಾದೇವಗೌಡ ಪಾಟೀಲ, ರೋಣ ತಾಲೂಕು ಅಧ್ಯಕ್ಷ ಸಂಗಣ್ಣ ದಂಡಿನ, ವಿಜಯಕುಮಾರ ಸುಂಕದ, ಪಾಂಡು ಸೋಮರಡ್ಡಿ, ರವಿ, ಮಂಜುನಾಥ ಭಜಂತ್ರಿ, ಸೇರಿದಂತೆ ರೈತ ನಾಯಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ