ಗದಗ ಅಗಷ್ಟ 7: ಸೊರಟೂರ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಶಾಲಾ ಶಿಕ್ಷಣ ಇಲಾಖೆ,ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ 2023-24 ಸಾಲಿನ 8443 ಲೆಕ್ಕ ಶೀರ್ಷಿಕೆಯಡಿ ಅಂದಾಜು ರೂ1.69 ಕೋಟಿ ಅನುದಾನದಲ್ಲಿ ನಿರ್ಮಿಸುವ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಸ್.ಪಾಟೀಲ್, ಗಣ್ಯರಾದ ವಾಸಣ್ಣ ಕುರಡಗಿ, ಟಿ ಈಶ್ವರ್, ಸಿದ್ದು ಪಾಟೀಲ್, ಸೊರಟೂರ ಗ್ರಾ.ಪಂ ಅಧ್ಯಕ್ಷತೆ ಚಂದ್ರಮ್ಮ ಓಂಕಾರಿ,ಎಸ್ ಡಿ ಎಮ್ ಸಿ ಗೌರವ ಅಧ್ಯಕ್ಷತೆ ನೀಲಮ್ಮ ಮಾದಣ್ಣನವರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್ .ಬಾರಟಕಿ ಪ್ರಾಚಾರ್ಯರಾದ ಎಸ್ ಎ ಅವಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.