ಗದಗ ಜುಲೈ 22 : ರೋಣ ಪುರಸಭೆ ಕಾರ್ಯಲಯ ವತಿಯಿಂದ ಡೇ-ನಲ್ಟ್ ಯೋಜನೆಯ ಬೀದಿ ಬದಿ ವ್ಯಾಪಾರಿಗಳ ಮತ್ತು ಆತ್ಮನಿರ್ಬರ ನಿಧಿ ಯೋಜನೆಯಡಿ ಕರ್ನಾಟಕ ಬೀದಿ ಬದಿ ವ್ಯಾಪಾರ ನಿಯಮದಂತೆ ನಗರದ ಸ್ಥಳೀಯ ಸಂಸ್ಥೆಯ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳ ಕುಂದುಕೋರತೆ ಪರಿಹಾರ ಸಮಿತಿಗೆ ಅಧ್ಯಕ್ಷರನ್ನು ಮತ್ತು 2 ಸದಸ್ಯರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ.
ಸಮಿತಿಯ ಅಧ್ಯಕ್ಷರಾಗಬಯಸುವವರು ನಿವೃತ್ತ ಸಿವಿಲ್ ನ್ಯಾಯಾಧೀಶರಾಗಿರಬೇಕು ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಹಾಗೆಯೇ ಸಮಿತಿಯ ಸದಸ್ಯರಾಗಲು ರಾಜ್ಯ ಸರ್ಕಾರದ ನಿವೃತ್ತವರ್ಗ-1 ಅಧಿಕಾರಿಯಾಗಿರಬೇಕು ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಸ್ಥಳೀಯ ಪ್ರದೇಶದಲ್ಲಿ ಸೇವಾ ದಾಖಲೆ ಹೊಂದಿರಬೇಕು. ಪ್ರಸ್ತಾವಿತ ಸಮಿತಿಯ ಅವಧಿಯು ಬಿಡುಗಡೆಯಾದ ದಿನಾಂಕದಿಂದ 5 ವರ್ಷಗಳವರೆಗೆ ಚಲಾವಣೆಯಲ್ಲಿರುತ್ತದೆ. ಸಮಿತಿಯ ಕಾರ್ಯಾಚರಣೆಯ ಅಧಿಕಾರ ವ್ಯಾಪ್ತಿಯನ್ನು ಕಾಲ ಕಾಲಕ್ಕೆ ಸರ್ಕಾರವು ಸೂಚಿಸುತ್ತದೆ.
ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಸಿವಿಲ್ ನ್ಯಾಯಧೀಶರು ಅಥವಾ ಮ್ಯಾಜಿಸ್ಟ್ರೇಟ್ ಆರೆಕಾಲಿಕ ಆಧಾರದ ಮೇಲೆ ನೇಮಕಗೊಂಡರೆ ಒಂದು ಸಭೆಗೆ ರೂ 2500=00 ಹಾಗೂ ಕುಂದು ಕೊರತೆ ಪರಿಹಾರ ಸಮಿತಿಯ ಇತರೆ ಸದಸ್ಯರು ಅರೆಕಾಲಿಕ ನೇಮಕಗೊಂಡರೆ ಒಂದು ಸಭೆಗೆ ರೂ 1000=00 ಗೌರವಧನ ಪಡೆಯುತ್ತಾರೆ. ಅರ್ಜಿ ಆಹ್ವಾನ ಪ್ರಕಟಗೊಂಡ 30 ದಿನಗಳ ಒಳಗಾಗಿ ರೋಣ ಪುರಸಭೆ ಕಾರ್ಯಾಲಯದ ಡೇನಲ್ಡ್ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೋಣ ಪುರಸಭೆ ಕಾರ್ಯಾಲಯದ ಡೇನಲ್ಡ್ ವಿಭಾಗದಲ್ಲಿ ಸಂಪರ್ಕಿಸಬಹುದಾಗಿದೆ.
ಸುದ್ದಿ – 2
ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
ಗದಗ ಜುಲೈ 22 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರ ( ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ) ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ 2024-25 ನೇ ಸಾಲಿನಲ್ಲಿ ಆನ್‍ಲೈನ್ ಮೂಲಕ https://shp.karnataka.gov.in ಅರ್ಜಿ ಸಲ್ಲಿಸಲು ಜುಲೈ 23 ರವರಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.