Friday, October 18, 2024
Google search engine
Homeಉದ್ಯೋಗಗದಗ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆಯ ಮೂಲಕ ಮನವಿ  

ಗದಗ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆಯ ಮೂಲಕ ಮನವಿ  

ಗದಗ ೧೧ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ದ ಮಹಾತ್ಮಗಾಂಧಿ ಸರ್ಕಲ್‌ದಲ್ಲಿ ಧರಣಿ, ಪ್ರತಿಭಟನೆಯ ನಡೆಸಿ ಗದಗ ತಾಲೂಕ ತಹಶೀಲ್ದಾರ ಮುಖಾಂತರ ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ೩೦ ವಿವಿಧ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಮಹೇಶ ಹಿರೇಮಠ ಮಾತನಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸು ಪಡೆಯಬೇಕು. ಬೆಂಬಲ ಬೆಲೆ, ಎಪಿಎಂಸಿ ವ್ಯವಸ್ತೆ ಬಲಗೊಳಿಸಬೇಕು ಕೃಷಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿ ಕೈಬಿಡಬೇಕು. ದೇಶದ ಐಕ್ಯತೆಯನ್ನು ಕಾಪಾಡಬೇಕು, ರೈಲ್ವೆ, ವಿದ್ಯುತ್, ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು. ಅವೈಜ್ಞಾನಿಕ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು ಅಕುಶಲ ಕಾರ್ಮಿಕರಿಗೆ ೩೧ ಸಾವಿರ ರೂಪಾಯಿ ನಿಗದಿಮಾಡಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ್ವಯ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೆ ಗೊಳಿಸಬೇಕು. ಎಲ್ಲಾ ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದುಗೊಳಿಸ ಖಾಯಂಗೊಳಿಸಬೇಕು. ಎನ್.ಪಿಎಸ್ ರದ್ದುಗೊಳಿಸಿ ಓಪಿಎಸ್ ಮರುಸ್ಥಾಪನೆ ಇಪಿಎಸ್ ಪಿಂಚಣಿದಾರರಿಗೆ ಕನಿಷ್ಠ ರೂ ೯೦೦೦ ಪಿಂಚಣಿ ಖಚಿತಗೊಳಿಸಬೇಕು. ಕೇಂದ್ರ ಸರ್ಕಾರದ ವಾರ್ಷಿಕ ನಿವ್ವಳ ಆದಾಯದ ಶೇ. ೩ ರಷ್ಟು ಅನುದಾನ ನೀಡಬೇಕು. ವಿದ್ಯಾರ್ಥಿ ವೇತನ ಇತರೆ ಕಲ್ಯಾಣ ಯೋಜನೆಗಳ ಸಮರ್ಪಕ ಜಾರಿಗೊಳಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವಾರ್ಷಿಕ ೨೦೦ ದಿನಗಳು ದಿನಕ್ಕೆ ರೂ. ೭೦೦ ನಿಗದಿ ಮಾಡಬೇಕು. ನಗರ ಪ್ರದೇಶಕ್ಕೂ ಉದ್ಯೋಗ ಖಾತರಿ ವಿಸ್ತರಿಸಬೇಕು. ಅಂಗನವಾಡಿ ನೌಕರರು, ಬಿಸಿಯೂಟ ನೌಕರರು ಆಶಾ ಇತರೆ ಸಿಬ್ಬಂದಿಗಳಿಗೆ ೩೧ ಸಾವಿರ ಕನಿಷ್ಠ ವೇತನ ಮತ್ತು ನಿವೃತ್ತ ಪಿಂಚಣಿ ೧೦ ಸಾವಿರ ಪಿಂಚಣಿ ಕೊಡಬೇಕು. ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಆರಂಭಿಸಬೇಕು ಕಾರ್ಮಿಕ ಕಾಯಿದೆ ಐಟಿ ಮತ್ತು ಐಟಿಇಎಸ್ ಗೆ ವಿನಾಯ ನೀಡುವ ಅಧಿಸೂಚನೆ ರದ್ದುಗೊಳಿಸಬೇಕೆಂದು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲಿ ಸಿಐಟಿಯು ಪದಾಧಿಕಾರಿಗಳು ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು, ಇತರೆ ಅಸಂಘಟಿತ ಕಾರ್ಮಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ