ಅರ್ಜಿ ಆಹ್ವಾನ
ಗದಗ : ಜುಲೈ 10: 2024-25 ನೇ ಸಾಲಿಗೆ ಗದಗ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಸಮುದಾಯದ ಐಐಎಂ, ಐಐಟಿ, ಐಐಎಸ್‍ಇ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪರ್ಶಿಯನ್) ವಿದ್ಯಾರ್ಥಿಗಳು ಸೇವಾಸಿಂಧು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನ ಅಗಸ್ಟ್ 31 ಆಗಿರುತ್ತದೆ.
ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಭ್ಯರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.8.00 ಲಕ್ಷಕ್ಕಿಂತ ಮೀರಿರಬಾರದು. ಹಿಂದಿನ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ (ಬ್ಯಾಕ್‍ಲಾಗ್) ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ಪಡೆಯುವ ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ ಭವನ, ಜಿಲ್ಲಾ ನ್ಯಾಯಾಲಯದ ಎದುರುಗಡೆ, ಹುಬ್ಬಳ್ಳಿ ರೋಡ, ಗದಗರವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ.
ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನ
ಗದಗ ಜುಲೈ 10: 2024-25ನೇ ಸಾಲಿನ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ,ಮೇಕೆ, ಘಟಕಗಳ ( 20 + 1 ) ಸ್ಥಾಪನೆಗಾಗಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ. ನಿ ಬೆಂಗಳೂರು ಇದರಲ್ಲಿ ನೋಂದಣಿಯಾದ ಗದಗ ಜಿಲ್ಲೆಯ ಚಾಲ್ತಿಯಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷ ವಯೋಮಿತಿಯೊಳಗಿನ ಮಹಿಳಾ ಮತ್ತು ಪುರುಷ ಕುರಿ/ ಮೇಕೆ ಸಾಕಾಣಿಕೆದಾರರು ಅರ್ಜಿಗಳನ್ನು ಜುಲೈ 31 ರೊಳಗೆ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.ನಿ ಗದಗ ಪಶು ಆಸ್ಪತ್ರೆ ಆವರಣ ಗದಗ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ( ದೂ.ಸಂ. 9663570842 ) ಸಂಪರ್ಕಿಸಬಹುದಾಗಿದೆ.
ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ
ಗದಗ ಜುಲೈ 10: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 11 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 30 76 ಪ್ಲಾಟ್ ಕಂಚಿ ಕೊರವರ ಓಣಿ 2 ನೇ ಭಾಗದ ಲೈನ್ ಗಳು. ವಾರ್ಡ್ 34, 35 ಆದರ್ಶ ನಗರ ಹಿರೇಮಠದವರ ಮನೆ ಲೈನ್ ಆದರ್ಶ ನಗರದ 3 ಭಾಗಗಳು 3 ನೇ ಕ್ರಾಸ್ ದೇವರಾಜ ಹಾಸ್ಟೆಲ್ ನೀಲಮ್ಮ ತಾಯಿ ಮಠದ ಮುಂದಿನ ಭಾಗಗಳು. ವಾರ್ಡ್ 24 ಅಬ್ಬಿಗೇರಿ ಕಾಂಪೌಂಡ್ ತೆಗ್ಗಿನ ಲಾಟ್ ರಂಗನವಾಡ ಉಡಚಮ್ಮಮನ ಗುಡಿ ಲೈನ್ ಮಖಾನಗಲ್ಲಿ ಕೆಲವು ಉಳಿದ ಭಾಗಗಳು. ವಾರ್ಡ್ 27 ಕೆ ಹೆಚ್ ಪಾಟೀಲ್ ಬಡಾವಣೆ ಫಾರಮ ಓಣಿ ವೀರ ನಾರಾಯಣ ಬಡಾವಣೆ ಕಾಶಿ ವಿಶ್ವನಾಥ ನಗರ ಅಸೂಟಿವವರ ಲೈನ್ ಹನುಮಂತ ದೇವರ ಗುಡಿ ಲೈನ್ ದ್ಯಾಮವ್ವನ ಗುಡಿ ಲೈನ್ ಕಣವಿಯವರ ಲೈನ್ ಮಾಳಕೋಟೇಶ್ವರ್ ಗುಡಿ ಲೈನ್ ವಿ ಆರ್ ಎಲ್ ಆಫೀಸ್ ಹಿಂದಿನ ಭಾಗ. ವಾರ್ಡ್ 24, 25, 19 ಹಾಳ ದಿಬ್ಬ ಭಾಗ-3 ಅಬ್ಬಿಗೆರೆ ಲೈನ್ ಕುರುಗಲ ಲೈನ್ ಪುಣೇಕರ ಲೈನ್ ಬಿ ಏಸ್ ಹಿರೇಮಠ್ ಲೈನ್ ಮದ್ಲಿ ಓಣಿ ಹಳೆ ಲೈನ್ ಜೀರ ಓಣಿ ಕುರುಬರ ಗರಡಿ ಕೊಪ್ಪದ ಮಾಬೂಸುಬಾನಿ ಕಟ್ಟಿ ಗಣಪತಿ ಗುಡಿ ಖಾನ ತೋಟ್ ಭಾಗ -1, 2.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು, ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ
ಗದಗ ಜುಲೈ 10: ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಅಥವಾ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಗೃಹಲಕ್ಷ್ಮೀ ಯೋಜನೆಯಡಿ ಪ್ರಯೋಜನ ಪಡೆಯಲು ಅನುವಾಗುವಂತೆ ಗೃಹಲಕ್ಷ್ಮೀ ಯೋಜನೆಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ (ನ್ಯಾಶನಲ್ ಪೋರ್ಟಲ್ ಫಾರ್ ಟ್ರಾನ್ಸಜೆಂಡರ್ ಪರ್ಸನ್ಸ್ ) ಯಿಂದ ಪಡೆದಿರುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಪರಿಗಣಿಸಲು ಸರ್ಕಾರವು ಅನುಮೋದನೆ ನೀಡಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರು ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಛೇರಿಗೆ ತೆರಳಿ ಗೃಹಲಕ್ಷ್ಮೀ ಯೋಜನೆಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಟ್ರಾನ್ಸ್‍ಜೆಂಡರ್ ಗುರುತಿನ ಚೀಟಿ, ಪಾಸ್ಟೋರ್ಟ್ ಸೈಜ್ ಪೋಟೋ ಮತ್ತು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ ಎಂದು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.