23 C
New York
Friday, July 4, 2025

Buy now

spot_img

ಗದಗ : ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಗದಗ ಲಿಫ್ಟ್ ಉದ್ಘಾಟನೆ ಹಾಗೂ ದಾನಿಗಳ ಸನ್ಮಾನ ಸಮಾರಂಭ

ಗದಗ ೦೯: ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಗದಗ ಲಿಫ್ಟ್ ಉದ್ಘಾಟನೆ ಹಾಗೂ ದಾನಿಗಳ ಸನ್ಮಾನ ಸಮಾರಂಭ ಜರುಗಿತು. ಶ್ರೀ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಹಾವೇರಿ ಗದಗ ಸಂಸದರು ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ದಿವಂಗತ ಎಸ್. ಬಿ. ಸಂಕಣ್ಣವರ ಭಾವಚಿತ್ರಕ್ಕೆ ಪುಷ್ಪನಮನಗೈದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ವ್ಹಿ. ಸಂಕನೂರ, ಡಿ. ಆರ್. ಪಾಟೀಲ ಮಾಜಿ ಶಾಸಕರು, ಈಶಣ್ಣ ಮುನವಳ್ಳಿ ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಅಧ್ಯಕ್ಷರು ಈ ಹಿಂದೆ ಎಸ್. ಬಿ. ಸಂಕಣ್ಣವರ ನಿರ್ಮಿಸಿದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಕಟ್ಟಡದ ಮೇಲಂತಸ್ತನ ನವೀಕರಣ ಹಾಗೂ ಲಿಫ್ಟ್ ಅಳವಡಿಸಲು ಧನ ಸಹಾಯ ಮಾಡಿದ ಇರ್ವರು ದಾನಿಗಳಾದ ಕಿರಣ ಪ್ರಕಾಶ ಭೂಮಾ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಗಣ್ಯ ವರ್ತಕರಾದ ಅಶೋಕ ಎಸ್. ಸಂಕಣ್ಣವರ ಇವರನ್ನು ಸಂಸದರಾದ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗಣ್ಯ ಉದ್ದಿಮೆದಾರರಾದ ವಿಜಯಕುಮಾರ ಗಡ್ಡಿ, ತಾತನಗೌಡ ಎಸ್. ಪಾಟೀಲ, ಹರೀಶಕುಮಾರ ಎಸ್. ಶಹಾ, ಶರಣಬಸಪ್ಪ ಎಸ್. ಗುಡಿಮನಿ, ಪ್ರಕಾಶ ಉಗಲಾಟದ, ರಾಜಣ್ಣ ಮಲ್ಲಾಡದ, ಸದಾಶಿವಯ್ಯ ಮದರಿಮಠ, ಅಶೋಕಗೌಡ ಕೆ. ಪಾಟೀಲ, ಅಶೋಕ ಎಸ್. ನೀಲುಗಲ್ಲ, ರಾಹುಲ ಸಂಕಣ್ಣವರ ಸೇರಿದಂತೆ ಚೇಂಬರ ಆಫ್ ಕಾಮರ್ಸ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಆಯ್ಕೆ ಗದಗ : ನರಗುಂದದಲ್ಲಿ ಜುಲೈ 9 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” : ರೋಣ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ" ಗದಗ : ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ - ಅಬ್ದುಲ್ ಮುನಾಫ್ ಮುಲ್ಲಾ  ಗದಗ : ಮಕ್ಕಳಿಗೆ ವಿದ್ಯೆಯ ಜೊತೆ ಆರೋಗ್ಯವೂ ಮುಖ್ಯ : ಡಾ. ಪ್ರಜ್ಜಲ ಎಂ ಹಿರೇಮಠ  ಗದಗ : ಯಕ್ಷಗಾನ ; ಸಿರಿಸಿಂಗಾರಿ ಭಾಗ್ಯದಂಬಾರಿ”  ಗದಗ : ಜಿಲ್ಲಾ ನೋಟರಿ ಸಂಘದ ವತಿಯಿಂದ  ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಗದಗ : ಅವಾಸ್ ಯೋಜನೆಗೆ ಅರ್ಜಿ ಆಹ್ವಾನ ಗದಗ : ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸಿ