Monday, April 29, 2024
Google search engine
Homeಶಿಕ್ಷಣಉದ್ಯೋಗಗದಗ : ಎರಡು ಕಳ್ಳತನ ಪ್ರಕರಣ ಭೇದಿಸಿದ ಗದಗ ಗ್ರಾಮೀಣ ಪೊಲೀಸರು

ಗದಗ : ಎರಡು ಕಳ್ಳತನ ಪ್ರಕರಣ ಭೇದಿಸಿದ ಗದಗ ಗ್ರಾಮೀಣ ಪೊಲೀಸರು

ಗದಗ : ಮನೆ ಕಳ್ಳತನ ಹಾಗೂ ಬೈಕ್ ಕಳ್ಳತನ ಎರಡು ಪ್ರಕರಣಗಳನ್ನು ಭೇಧಿಸೋ ಮೂಲಕ ಗದಗ ಜಿಲ್ಲೆಯ ಗದಗ ಗ್ರಾಮೀಣ ಪೊಲೀಸರಿಗೆ ಪ್ರಶಂಸೆ ವ್ಯಕ್ತವಾಗಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟಾರ್ ಸೈಕಲ್ ಹಾಗೂ ಮನೆ ಕಳ್ಳತನವಾದ ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡುವ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಜನರು ದಿನಾಂಕ : 16.01.2024 ರಂದು ನಸುಕಿನ ವೇಳೆಯಲ್ಲಿ ವಿಶೇಷ ಪೆಟ್ರೋಲಿಂಗ ಕರ್ತವ್ಯದ ಮೇಲಿರುವಾಗ , ಗದಗ ಬಿಂಕದಕಟ್ಟಿ ಝೂ ಕ್ರಾಸ್ ಹತ್ತಿರ ಹುಬ್ಬಳ್ಳಿ ಕಡೆಯಿಂದ ಒಬ್ಬನು ಮೋಟಾರ್ ಸೈಕಲನ್ನು ದೂಡಿಕೊಂಡು ಬರುತ್ತಿದ್ದು ಮೋಟಾರ್ ಸೈಕಲ್ ಗೆ ರಿಜಿಸ್ಟರ್ ನಂಬರ ಪ್ಲೇಟ್ ಇರದೇ ಇದ್ದ ಬಗ್ಗೆ ಸಂಶಯ ಬಂದು ಅವನ ಸಮೀಪ ವಿಚಾರಿಸಲು ಹೋದಾಗ ಅವನು ಗಾಡಿ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ್ದು , ಅವರೆಲ್ಲರೂ ಸೇರಿ ಅವನಿಗೆ ಹಿಡಿದು ಮೋಟಾರ್ ಸೈಕಲ್ ಬಗ್ಗೆ ವಿಚಾರಿಸಲು ಸಮರ್ಪಕ ಉತ್ತರ ಕೊಡದೇ ಇರುವಾಗ , ಅವನಿಗೆ ಕರೆದುಕೊಂಡು ಠಾಣೆಗೆ ಬಂದು ವಿಚಾರಣೆಗೊಳಪಡಿಸಿದ ನಂತರ ಆರೋಪಿತನಾದ 1 ] ಹನಮಂತ @ ಹನಮ್ಯಾ ತಂದೆ ಸಂಜು ಮಣ್ಣವಡ್ಡರ , ವಯಾ : 21 ವರ್ಷ , ಜಾತಿ : ಹಿಂದೂ ಭೋವಿ , ಉದ್ಯೋಗ : ತರಕಾರಿ ವ್ಯಾಪಾರ , ಸಾ : ಹುಬ್ಬಳ್ಳಿ ದೇಶಪಾಂಡೆ ನಗರ ಇವನು , ವಿವಿಧ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡು , 1 ] Pulsar 220 Black Color with blue sticker Motor Cycle , Engine No : DKZCFL97859 , Chassies No : MD2A13EZ8FCL11008 , W / Rs 75000-00 , 2 ] Yamaha Rx 100 Black Color Motor Cycle , Engine No 1L1466744 , Chassies No 94K1L1466744 , W / Rs 15000 = 00 , 3 ] Auto Rickshaw Chassis No : MD2A45AY3LWL17244 , W /

Rs 75000-00 ಕಿಮ್ಮತ್ತಿನ ವಾಹನಗಳನ್ನು ಹಾಜರಪಡಿಸಿದ್ದು ಇರುತ್ತದೆ. ಈ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಗದಗ ಗ್ರಾಮೀಣ ಪೋಲೀಸ್ ಠಾಣಿಯ ಪಿ.ಐ. ಶ್ರೀ ಎಮ್.ಎಮ್.ನದಾಫ , ಪಿಎಸ್‌ಐ , ಶ್ರೀ ಶಿವಾನಂದ ಪಾಟೀಲ , ಎಎಸ್‌ಐ ಶ್ರೀ ಎಮ್.ಎ.ಸದರಣ್ಣವರ ಮತ್ತು ಸಿಬ್ಬಂದಿ ಜನರಾದ , ಎಫ್.ಐ.ಖಾಜಿ , ಪಿ.ಎಸ್.ಗಾಣಗೇರ , ಡಿ.ಕೆ.ಜೈನರ , ಆರ್.ಐ.ಗುಂಜಳ , ಎ.ಜಿ.ಬೂದಿಹಾಳ , ಎ.ಆರ್.ಬನ್ನಿಕೊಪ್ಪ , ಆರ್.ಹೆಚ್.ಅಲಂದಾರ , ಎಮ್.ಐ.ಬಾಟೀಲ ಇವರ ಕ್ಷಿಪ್ತ ಮತ್ತು ಚಾಣಾಕ್ಷತನದ ಕರ್ತವ್ಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ.ಎಸ್.ನೇಮಗೌಡ ಐಪಿಎಸ್ ರವರು ಶ್ಲಾಘಿಸಿರುತ್ತಾರೆ .

ಇನ್ನೋಂದು ಕಳ್ಳತನ ಪ್ರಕರಣ 

ಗದಗ : ಹನಮಂತಗೌಡ ತಂದೆ ನಾಗನಗೌಡ ಮೂಗನೂರ ಸಾ : ಹುಲಕೋಟಿ ಇವರ ವಾಸದ ಮನೆಯಲ್ಲಿ ದಿನಾಂಕ 08-01-2024 ರಂದು ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಗೆ ಹಾಕಿದ ಕೀಲಿಯನ್ನು ಮುರಿದು ಒಳ ಹೋಗಿ ಬೆಡ್ ರೂಮಿನಲ್ಲಿಯ ಟ್ರಜರಿ ಬಾಗಿಲ ಮೀಟಿ ತಗೆದು ಅದರಲ್ಲಿದ್ದ , 1 ] ಒಂದು ಬಂಗಾರದ ಮಾಂಗಲ್ಯ ಸರ ತೂಕ 40 ಗ್ರಾಮ ಅ : ಕಿ : 1.00.000 / – ರೂ . 2 ] ಒಂದು ಬೆಳ್ಳಿಯ ಲಕ್ಷ್ಮೀ ಮೂರ್ತಿ ತೂಕ 80 ಗ್ರಾಮ . ಅ : ಕಿ : 10.000 / – ರೂ , 3 ) ನಗದು ಹಣ 2.000 / – ರೂ . ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂಬರ 04/2024 ಕಲಂ 454 , 380 ಐಪಿಸಿ ಪ್ರಕಾರ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿದ್ದು ಇತ್ತು , ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಪ್ರಕರಣವನ್ನು ಬೇಧಿಸುವ ಸಲುವಾಗಿ , ಗದಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ.ಎಸ್.ನೇಮಗೌಡ ಐಪಿಎಸ್ ಮತ್ತು ಶ್ರೀ ಎಮ್.ಬಿ.ಸಂಕದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ , ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ. ಶ್ರೀ ಎಮ್.ಎಮ್.ನದಾಫ ಇವರ ನೇತೃತ್ವದಲ್ಲಿ , ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ , ಶ್ರೀ ಶಿವಾನಂದ ಪಾಟೀಲ , ಬೆರಳುಮುದ್ರೆ ಘಟಕದ ಪಿ.ಐ. ಶ್ರೀ ಚಂದ್ರಪ್ಪ ಯು . , ಪಿಎಸ್‌ಐ ಶ್ರೀ ವಾಯ್.ಕೆ.ವಡಗೇರಿ ಮತ್ತು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ , ಎಫ್.ಐ.ಖಾಜಿ , ಪಿ.ಎಸ್.ಗಾಣೆಗೇರ , ಡಿ.ಕೆ.ಜೈನರ , ಬಿ.ಹೆಚ್.ಗುಡ್ಲಾನೂರ , ಹೆಚ್.ಐ.ಪರಸಣ್ಣವರ ಆರ್.ಐ.ಗುಂಜಳ , ಎ.ಜಿ.ಬೂದಿಹಾಳ , ಎ.ಆರ್.ಬನ್ನಿಕೊಪ್ಪ ಹಾಗೂ ಬೆರಳುಮುದ್ರೆ ಘಟಕದ ಹೆಚ್‌ ಅಬ್ದುಲ್‌ಘನಿ , ಎನ್.ಪಿ.ಬಡಿಗೇರ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಎಆರ್‌ಎಸ್‌ಐ ಶ್ರೀ ಜಿ.ಐ.ಬೂದಿಹಾಳ ಮತ್ತು ಸಂಜೀವ ಕೊರಡೂರ ಇವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದು , ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷಿಪ್ತ ಕಾರ್ಯಾಚರಣೆ ನಡೆಸಿ ಸತತ ಪರಿಶ್ರಮದೊಂದಿಗೆ ಚಾಣಾಕ್ಷತನದಿಂದ ಪ್ರಕರಣವನ್ನು ಬೇಧಿಸಿದ್ದು , ಆರೋಪಿ ನಾಗರಾಜ ನಾಗ್ಯಾ ತಂದೆ ದುರಗಪ್ಪ ಬಾಚಣಕಿ 26 ವರ್ಷ ಉದ್ಯೋಗ ಗೌಂಡಿ ಕೆಲಸ ಸಾ : ಹುಬ್ಬಳ್ಳಿ ರಾಮಲಿಂಗೇಶ್ವರ ನಗರ ಗೋಕುಲ ಇವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು , ಆರೋಪಿತನಿಗೆ ವಿಚಾರಣೆಗೊಳಪಡಿಸಿದಾಗ ಅವನು ಇಲ್ಲಿಯವರೆಗೆ ಹಲವಾರು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ತಿಳಿಯಿತು . ಅವನು ಇತ್ತೀಚೆಗೆ ಹುಲಕೋಟಿಯಲ್ಲಿ ಮಾಡಿದ ಮನೆಗಳ್ಳತನ ಪ್ರಕರಣದಲ್ಲಿಯ ಸುಮಾರು 1,12,000 / – ರೂ.ಕಿಮ್ಮತ್ತಿನ ಬಂಗಾರ ವ ಬೆಳ್ಳಿಯ ಆಭರಣಗಳನ್ನು ತನ್ನ ಗೆಳೆಯನ ಮನೆಯಲ್ಲಿ ಬಚ್ಚಿಟ್ಟಿದ್ದವುಗಳನ್ನು ಹೇಳಿ ತೋರಿಸಿ ಹಾಜರಪಡಿಸಿದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ . ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಚಾಣಾಕ್ಷತನದ ಕರ್ತವ್ಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ.ಎಸ್‌.ನೇಮಗೌಡ ಐಪಿಎಸ್ ರವರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿರುತ್ತಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments