ರೋಣ: ರೋಣ ತಾಲ್ಲೂಕಿನ ಯರೆಬೆಲೇರಿ ಗ್ರಾಮದಲ್ಲಿ ಮೊನ್ನೆಯ ದಿನ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಪಮಾನ ಮಾಡಿದ್ದನ್ನು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಒಂದು ವಾರದ ಒಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಅಧ್ಯಕ್ಷರಾದ ಗೋಪಾಲ ಕೋಣಿಮನಿ ಹೇಳಿಕೆ ನೀಡಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಭೀಮ್ ಆರ್ಮಿ ಗದಗ ಜಿಲ್ಲಾ ಗೌರವ ಅಧ್ಯಕ್ಷ ವಿಜಯ ಕಲ್ಮನಿ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಕೇವಲ ದಲಿತ ಸಮುದಾಯಕ್ಕೆ ಸೀಮಿತ ಮಾಡಿದ್ದಾರೆ ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಬ್ಬ ವಿಶ್ವ ನಾಯಕ ಅವರ ಜನ್ಮದಿನವನ್ನು ಇಡೀ ವಿಶ್ವ World Knowledge Day ಎಂದು ಆಚರಿಸುತ್ತಿರುವಾಗ ಅಂತಹ ಮಹಾನ್ ವ್ಯಕ್ತಿಗೆ ಅಪಮಾನವನ್ನು ಮಾಡುವುದು ಎಷ್ಟು ಸರಿ? ಎಂದು ಹೇಳಿದರು*
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಾಘವೇಂದ್ರ ಹರಿಜನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಹಾದಿಮನಿ ಅಹಿಂದ ಹೋರಾಟಗಾರ ವಿಜಯ ಬಡಿಗೇರ ಹಾಗೂ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಇದ್ದರು.