ಕಳೆದ ಹಲವು ವರ್ಷಗಳಿಂದ ಭಾರತ ದೇಶದಲ್ಲಿ ಅನೇಕ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ ಈ ಕಾರ್ಯಕ್ರಮಗಳು ಎಲ್ಲರಿಂದ ಎಲ್ಲರಿಗಾಗಿ ಎಲ್ಲಾ ಸಂಪನ್ಮೂಲಗಳನ್ನು ಸಮಯೋಚಿತವಾಗಿ ಬಳಸಿ ಸರ್ವಾಂಗೀಣ ಸಮಾಜದ ಅಭಿವೃದ್ಧಿಯ ಸಂಕಲ್ಪವನ್ನು ಹೊಂದಲಾಗಿರುತ್ತದೆ. ಕಳೆದ ದಶಕದಲ್ಲಿ ತ್ವರಿತವಾಗಿ ಅನುಷ್ಠಾನವಾಗುತ್ತಿದ್ದು ದೇಶಾದ್ಯಂತ ಸಾರ್ವಜನಿಕರ ಬದುಕನ್ನ ಸುಗಮಗೊಳಿಸುವಲ್ಲಿ ಅದರಲ್ಲಿಯೂ ಮುಖ್ಯವಾಗಿ ನಮ್ಮ ದೇಶದ ಮಹಿಳೆಯರ ಮತ್ತು ಮಕ್ಕಳಿಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿರುತ್ತದೆ.
ಇಂಥ ಕಾರ್ಯಕ್ರಮಗಳ ಸಾಲಿಗೆ ಇದೀಗ ಸೇರ್ಪಡೆಗೊಳ್ಳುತ್ತಿದೆ, ಭಾರತ ಸರ್ಕಾರದ ಬಹುಮುಖ್ಯವಾದ ಮತ್ತು ವಿಶೇಷವಾಗಿ ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರೂಪಗೊಳ್ಳುತ್ತಿರುವ ಕಾರ್ಯಕ್ರಮವೇ “ಸ್ವಸ್ಥನಾರಿ ಶಸಕ್ತ ಪರಿವಾರ ಅಭಿಯಾನ”.
ಈ ಅಭಿಯಾನವು ನಮ್ಮ ರಾಜ್ಯದಲ್ಲಿ ಇದೇ ದಿನಾಂಕ ಸಪ್ಟೆಂಬರ್ ೧೭ರಂದು ಉದ್ಘಾಟನೆಗೊಂಡು ಅಕ್ಟೋಬರ್ ೨ ಗಾಂಧಿ ಜಯಂತಿಯ ಶುಭದಿನದವರೆಗೆ ನಡೆಯಲಿದೆ ಈ ಅಭಿಯಾನದ ಅಂಗವಾಗಿ ಮಹಿಳೆಯರ ಮತ್ತು ಹದಿಹರೆಯದವರ ಮಕ್ಕಳ ಹಲವು ಆರೋಗ್ಯ ಚಟುವಟಿಕೆಗಳನ್ನು ಅಭಿಯಾನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಅವುಗಳಲ್ಲಿ ಮುಖ್ಯವಾದವುಗಳೆಂದರೆ ರಕ್ತ ಹೀನತೆ, ಸಕ್ಕರೆ ಕಾಯಿಲೆ ಬಿಪಿ ಕ್ಷಯರೋಗ ಕ್ಯಾನ್ಸರ್ ಅಪೌಷ್ಟಿಕತೆ , ಮುಂತಾದ ರೋಗಗಳ ತಪಾಸನ ಕೇಂದ್ರಗಳನ್ನ ತೆರೆದು ತಜ್ಞ ವೈದ್ಯರಿಂದ ತಪಾಸಣೆ ಮಾಡುವುದು ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಸಲಹೆಯನ್ನ ನೀಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ, ಇದರ ಜೊತೆಗೆ ಅನೇಕ ಆರೋಗ್ಯ ಶಿಬಿರಗಳನ್ನ ಅಂದರೆ ರಕ್ತದಾನ ಶಿಬಿರ, ಯೋಗ ಶಿಬಿರ ಎನ್ ಸಿ ಡಿ ಶಿಬಿರ ಹೀಗೆ ಹಲವಾರು ಶಿಬಿರಗಳನ್ನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಕ್ಕಳಿಂದ ಹಾಗೂ ಸಾರ್ವಜನಿಕರಿಂದ ಜಾತ ಮತ್ತು ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ವಿಶೇಷ ಗರ್ಭಿಣಿ ತಾಯಂದಿರ ಪರೀಕ್ಷೆ ಮತ್ತು ಬಾಣಂತಿಯರ ಪರೀಕ್ಷೆ ಹರಿಹರೆಯದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಋತುಸ್ರಾವದ ಸಮಸ್ಯೆಗಳು ಅಪೌಷ್ಟಿಕತೆ ಮಕ್ಕಳಿಗೆ ಲಸಿಕ ವಿತರಣೆ ತಾಯಿತನದ ಬಗ್ಗೆ ಆರೋಗ್ಯ ಜಾಗೃತಿ ಮೂಡಿಸುವುದು ಮಾನಸಿಕ ಆರೋಗ್ಯ ಕಿವಿ ಮೂಗು ಗಂಟಲು ಹಲ್ಲು ವಸಡಿನ ಸಮಸ್ಯೆಗಳ ಕುರಿತು ಆರೋಗ್ಯ ಚಿಗುರೆಗಳನ್ನು ಏರ್ಪಡಿಸಲಾಗುತ್ತಿದೆ ಇದರ ಜೊತೆಗೆ ಸಾರ್ವಜನಿಕರಿಗೆ ವಿವಿಧ ರೋಗಗಳ ಹರಡುವಿಕೆ ಮತ್ತು ಮುನ್ನೆಚ್ಚರಿಕ ಕ್ರಮಗಳ ಕುರಿತು ಅರಿವು ಮೂಡಿಸುವ ಮಾಹಿತಿ ಶಿಕ್ಷಣ ನೀಡುವ ಕಾರ್ಯಕ್ರಮಗಳು ಕೂಡ ಜರುಗಲಿವೆ.
ಪ್ರತಿದಿನ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಆಯ್ದ ತಾಲೂಕ ಆಸ್ಪತ್ರೆಗಳಲ್ಲಿ ಈ ಆರೋಗ್ಯ ತಪಾಸನೆ ಶಿಬಿರಗಳು ಅಲ್ಲಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಜರುಗಲಿವೆ .ಈ ಅಭಿಯಾನವು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಾಲೂಕ ಮಟ್ಟದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಸ್ತ ಆರೋಗ್ಯ ಸಿಬ್ಬಂದಿಯು ಸಮನ್ವಯ ಸಾಧಿಸಿಕೊಂಡು ಈ ಶಿಬಿರಗಳನ್ನ ನಡೆಸಿಕೊಡಲಿದ್ದಾರೆ.
ಅಭಿಯಾನದ ಪ್ರತಿದಿನದ ನೊಂದಣಿಗಳು ಹಾಗೂ ಚಿಕಿತ್ಸೆ ಪಡೆದವರ ಅಂಕಿ ಸಂಖ್ಯೆಗಳು ಪೋರ್ಟಲ್ ಮೂಲಕ ದಾಖಲಿಸಲಾಗುತ್ತದೆ. ಈ ಅಭಿಯಾನವು ಮಹಿಳಾ ಆರೋಗ್ಯ ಮತ್ತು ಪೋಷಣೆಯನ್ನು ಬಲಪಡಿಸುವ ಮೂಲಕ ಕುಟುಂಬಗಳ ಮತ್ತು ಸಮುದಾಯಗಳನ್ನು ಸಸಕ್ತಗೊಳಿಸುವ ಪ್ರಮುಖ ಅಂಶಗಳನ್ನು ಒಳಗೊಂಡಿದ್ದು ಸಾರ್ವಜನಿಕರ ಸಹಭಾಗಿತ್ವ ಮತ್ತು ಸಕ್ರಿಯೆ ಬೆಂಬಲದಿAದ ಈ ಆಂದೋಲವನ್ನು ಯಶಸ್ವಿಗೊಳಿಸಬಹುದಾಗಿದೆ.
ಬನ್ನಿ ಈ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿ.



