ಗದಗ : ರಾಜ್ಯದ ಎಲ್ಲ ಜಿಲ್ಲೆಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (Dedicated AEROಗಳು), ಸಿರಸ್ತೆದಾರರು, ALMT, DLMT ಹಾಗೂ SLMT ಸದಸ್ಯರು, ಎಲ್ಲಾ ತಾಲೂಕುಗಳ ಚುನಾವಣಾ ವಿಷಯನಿರ್ವಾಹಕರು ಹಾಗೂ ನಾಲ್ಕು ಮತಕ್ಷೇತ್ರಗಳ ಚುನಾವಣಾ ಸಮಾಲೋಚಕರು ಮುಂತಾದವರಿಗೆ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ (SIR – Special Intensive Revision) ಕುರಿತು ಶನಿವಾರ ತರಬೇತಿ ಏರ್ಪಡಿಸಲಾಗಿತ್ತು.
ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಕುರಿತು ತರಬೇತಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ವಿ ಅನ್ಬುಕುಮಾರ ಹಾಗೂ ಜಂಟಿ ಚುನಾವಣಾಧಿಕಾರಿ ಯೋಗಿಶ್ವರ ಅವರ ತರಬೇತಿಯ ನೇತ್ರತ್ವದಲ್ಲಿ ಸವಿವರವಾಗಿ ತರಬೇತಿ ಜರುಗಿತು.
ಗದಗ ಜಿಲ್ಲೆಯ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಜಿಲ್ಲೆಯಿಂದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿ ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ ಸೇರಿದಂತೆ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಚುನಾವಣಾ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (Dedicated AEROಗಳು), ಸಿರಸ್ತೆದಾರರು, ALMT, DLMT ಹಾಗೂ SLMT ಸದಸ್ಯರು, ಎಲ್ಲಾ ತಾಲೂಕುಗಳ ಚುನಾವಣಾ ವಿಷಯನಿರ್ವಾಹಕರು ಹಾಗೂ ನಾಲ್ಕು ಮತಕ್ಷೇತ್ರಗಳ ಚುನಾವಣಾ ಸಮಾಲೋಚಕರು ಪಾಲ್ಗೊಂಡಿದ್ದರು.