9.2 C
New York
Thursday, November 13, 2025

Buy now

spot_img

ಗದಗ : ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಗದಗ ಸಪ್ಟಂಬರ್ 3 : ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕ/ಯುವತಿಯರಿಗೆ ಆನಲೈನ ಮೂಲಕ ಈ ಕೆಳಕಂಡ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಕಾರ್ಯಕ್ರಮಗಳು :

ನೇರ ಸಾಲ ಯೋಜನೆ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ನೇರಸಾಲ ಮಂಜೂರು ಮಾಡಲಾಗುತ್ತದೆ. ಹೈನುಗಾರಿಕೆ (ಬ್ಯಾಂಕುಗಳ ಸಹಯೋಗದೊಂದಿಗೆ) ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ ಹಸುಗಳಿಗೆ ಘಟಕ ವೆಚ್ಚದಶೇ. 50% ರಷ್ಟು ಅಥವಾ ಗರಿಷ್ಟರೂ. 1.25 ಲಕ್ಷಗಳ ಸಹಾಯಧನ, ಸ್ವಾವಲಂಬಿ ಸಾರಥಿ (ಬ್ಯಾಂಕುಗಳ ಸಹಯೋಗದೊಂದಿಗೆ) ಸರಕುವಾಹನ/ಟ್ಯಾಕ್ಸಿ (ಹಳದಿಬೋರ್ಡ) ಖರೀದಿಸುವ ಉದ್ದೇಶಕ್ಕೆ ಘಟಕ ವೆಚ್ಚದ ಶೇ 75% ರಷ್ಟು ಅಥವಾ ಗರಿಷ್ಟರೂ. 4.00 ಲಕ್ಷಗಳ ಸಹಾಯ ಧನ .

ಉದ್ಯಮ ಶೀಲತಾ ಅಬಿವೃದ್ಧಿ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ) ಇತರೆ ಉದ್ದೇಶ: ವ್ಯಾಪಾರ ಮತ್ತು ಇತರೆ ಉದ್ದೇಶಗಳಿ ಗೆಘಟಕ ವೆಚ್ಚ ಶೇ 70% ರಷ್ಟು ಅಥವಾ ಗರಿಷ್ಟರೂ. 2.00 ಲಕ್ಷ ಸಹಾಯಧನ.

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ: ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಠ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕವೆಚ್ಚರೂ. 5.00 ಲಕ್ಷ ಸಹಾಯಧನ ರೂ. 2.50 ಲಕ್ಷ ಸಾಲರೂ. 2.50ಲಕ್ಷ (ಶೇ. 4% ರಷ್ಟುಬಡ್ಡಿದರ)

ಭೂ ಒಡೆತನ ಯೋಜನೆ : ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಘಟಕ ವೆಚ್ಚ. ರೂ. 20.00 ಲಕ್ಷಸಹಾಯಧನಶೇ. 50% ಸಾಲಶೇ. 50% (ಶೇಕಡ4% ರ ಬಡ್ಡಿದರ)

ಗಂಗಾ ಕಲ್ಯಾಣ ಯೋಜನೆ: 1.20 ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪಸೆಟ್ ಅಳವಡಿಸಿ ವಿದ್ಯುದ್ಧೀಕರಣ ಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು. ಘಟಕ ವೆಚ್ಚರೂ. 3.75 ಲಕ್ಷ ಇದರಲ್ಲಿರೂ. 50,000/- ಸಾಲವೂ ಸೇರಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಜಿಲ್ಲಾ ಆಡಳಿತ ಭವನ 1ನೇ ಮಹಡಿ ರೂಮ್ ನಂ. 122/5 ಗದಗ ಸಂಪರ್ಕಿಸಲು ಕೋರಿದೆ. ಅಥವಾ ನಿಗಮದ ವೆಬ್ ಸೈಟ್ ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ 9482300400 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-09-2025 ಅರ್ಜಿ ಸಲ್ಲಿಸುವ ವೆಬ್ಸೆöÊಟ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಸಲ್ಲಿಸಬಹುದು.

2023-24 ಮತ್ತು 2024-25ನೇ ಸಾಲಿನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿಸಲ್ಲಿಸುವ ಅವಶ್ಯಕತೆ ಇರುವುದಿಲ್ಲ, ನಿಗಮದ ನಿರ್ದೇಶಕರ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂದು ಪೋರ್ಟಲ್ ಮೂಲಕವೇ ಸಲ್ಲಿಸಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news