ಗದಗ ಮೇ 12 : ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2025ನೇ ಸಾಲಿಗೆ ಮೆರಿಟ್-ಕಂ-ರಿಸರ್ವೇಶನ್ ಆಧಾರಿತ ಪ್ರವೇಶಗಳನ್ನು ಆನ್ ಲೈನ್ ಮುಖಾಂತರ ವೃತ್ತಿಯ ಅನುಸಾರ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಸರಕಾರಿ ಮತ್ತು ಅನುದಾನಿತ ಐ.ಟಿ.ಐ ಗಳಲ್ಲಿ ಎನ್.ಸಿ.ವಿ.ಟಿ ಸಂಯೋಜಿತ ಸಿ.ಟಿ.ಎಸ್ ಯೋಜನೆ ಅಡಿಯಲ್ಲಿರುವ ಇಂಜನೀಯರಿAಗÀ ಹಾಗೂ ನಾನ್-ಇಂಜನೀಯರಿAಗ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ ವೆಬ್ ಸೈಟ್ www.cite.karnataka.gov.in www.cite.karnataka.gov.inಮೂಲಕ ಸ್ವತಃ ಅಥವಾ ಐ.ಟಿ.ಐ ಗಳಲ್ಲಿರುವ ಸಹಾಯ ಕೇಂದ್ರಗಳ ಮುಖಾಂತರ ಮೇ 28 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಗದಗ ಜಿಲ್ಲೆಯ 9 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಾಗೂ 7 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶವನ್ನು ಆನ್ ಲೈನ್ ಮುಖಾಂತರ ಪಡೆಯಬಹುದಾಗಿದೆ.
ಗದಗ ಜಿಲ್ಲೆಯ 9 ಸರಕಾರಿ ಐ.ಟಿ.ಐ ಗಳು: ಸರಕಾರಿ ಐ.ಟಿ.ಐ(ಮಹಿಳಾ), ಬೆಟಗೇರಿ-ಗದಗ, ಸರಕಾರಿ ಐ.ಟಿ.ಐ, ಮುಂಡರಗಿ, ಸರಕಾರಿ ಐ.ಟಿ.ಐ ನರಗುಂದ, ಸರಕಾರಿ ಐ.ಟಿ.ಐ ಶಿರಹಟ್ಟಿ, ಸರಕಾರಿ ಐ.ಟಿ.ಐ, ಸೂಡಿ ತಾ. ಗಜೇಂದ್ರಗಡ, ಸರಕಾರಿ ಐ.ಟಿ.ಐ ಹೊಂಬಳ ತಾ: ಗದಗ, ಸರಕಾರಿ ಐ.ಟಿ.ಐ ಸೊರಟೂರ ತಾ: ಗದಗ, ಸರಕಾರಿ ಐ.ಟಿ.ಐ ಕುರ್ತಕೋಟಿ ತಾ: ಗದಗ, ಸರಕಾರಿ ಐ.ಟಿ.ಐ ಯಾವಗಲ್ ತಾ. ರೋಣ
ಗದಗ ಜಿಲ್ಲೆಯ 7 ಅನುದಾನಿತ ಐ.ಟಿ.ಐ ಗಳು: ಸರ್. ಸಿದ್ದಪ್ಪ ಕಂಬಳಿ ಖಾಸಗಿ ಐ.ಟಿ.ಐ, ಮುಂಡರಗಿ ರೋಡ, ಗದಗ, ಜಗದ್ಗುರು ತೋಟದಾರ್ಯ ಖಾಸಗಿ ಐ.ಟಿ.ಐ ಡಂಬಳ ತಾ:ಮುಂಡರಗಿ, ಬಾಪೂಜಿ ಖಾಸಗಿ ಐ.ಟಿ.ಐ, ಲಕ್ಷೇಶ್ವರ ತಾ ಶಿರಹಟ್ಟಿ, ಸಂಜಯ ಗ್ರಾಮೀಣ ವಿದ್ಯಾ ಸಂಸ್ಥೆಯ ಐ.ಟಿ.ಐ, ಹೊಳೆ-ಆಲೂರ ತಾ. ರೋಣ, ಶ್ರೀ ಜಗದ್ಗುರು ಅನ್ನದಾನೇಶ್ವರ ಖಾಸಗಿ ಐ.ಟಿ.ಐ, ಗಜೇಂದ್ರಗಡ ತಾ. ರೋಣ, ಶ್ರೀ ಕೊಟ್ಟೂರ ಸ್ವಾಮಿ ಖಾಸಗಿ ಐ.ಟಿ.ಐ, ನರೇಗಲ್ಲ ತಾ. ರೋಣ, ಶ್ರೀ ಮಾದಾರ ಚನ್ನಯ್ಯ ಖಾಸಗಿ ಐ.ಟಿ.ಐ, ಶಿರೋಳ ತಾ. ನರಗುಂದ
ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ಐ.ಟಿ.ಐ ಗಳ ಪ್ರಾಚಾರ್ಯರನ್ನು ಅಥವಾ ಇಲಾಖೆಯ ವೆಬ್ ಸೈಟಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಐ.ಟಿ.ಐ ಗದಗ ಪ್ರಾಚಾರ್ಯ/ನೋಡಲ್ ಅಧಿಕಾರಿಯಾದ ಡಾ. ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.