ಗದಗ : ಮೇ 6 : ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ. ಪಾಟೀಲ ಅವರು ಹೇಳಿದರು
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೆ ಡಿ ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸ್ವಾತಂತ್ರ್ಯ ನಂತರ ಅತ್ಯಂತ ಪರಿಣಾಕಾರಿ ಯಾವುದಾದರು ಸರ್ಕಾರ ಯೋಜನೆ ಅನುಷ್ಟಾನಗೊಂಡಿದ್ದರೆ ಅದು ಗ್ಯಾರಂಟಿ ಯೋಜನೆಗಳಾಗಿವೆ ಇದನ್ನು ಜಾರಿಗೊಳಿಸಿದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು
ಗದಗ ಜಿಲ್ಲೆಯಲ್ಲಿ ಶೇ 98.2 ರಷ್ಟು ಪ್ರಮಾಣ ಪಂಚ ಗ್ಯಾರಂಟಿ ಯೋಜನೆಗಳು ತಲುಪಿದೆ ಇನ್ನು 15 ದಿನಗಳಲ್ಲಿ ಶೇ 99 ರಷ್ಟು ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಗದಗ ಜಿಲ್ಲೆಯೂ ನೂತನ ಜಿಲ್ಲೆಯಾದರು ಸಾಧನೆಯಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ.
ಶಿಕ್ಷಣ ಕ್ಷೆತ್ರದಲ್ಲಿ ಪಿಯುಸಿ ಯಲ್ಲಿ 31 ನೇ ಸ್ಥಾನದಿಂದ 25 ನೇ ಸ್ಥಾನಕ್ಕೆ ತಲುಪಿ ಜಿಗಿತ ಕಂಡಿದ್ದೇವೆ. ಎಸ್ ಎಸ್ ಎಲ್ ಸಿ ಯಲ್ಲಿ 17 ನೇ ಸ್ಥಾನವನ್ನು ಪುನಃ ಕಾಯ್ದುಕೊಳ್ಳುವಲ್ಲಿ ಯಶ್ವಸಿಯಾಗಿದ್ದೇವೆ ಎಂದು ನುಡಿದರು.
ಜನತಾ ದರ್ಶನದ ಮೂಲಕ ಬಂದ 2000 ಅರ್ಜಿಯಲ್ಲಿ 1900 ಸಮಸ್ಯೆಗಳನ್ನು ಪರಿಸರಿಸಿದ್ದು ಕೆಲವು ಸಾದ್ಯವಾದ್ದನ್ನು ಮುಂದಿನ ಹಂತದಲ್ಲಿ ಕ್ರಮವಹಿಸಿಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಅವರು ಮಾತನಾಡಿ ಗದಗ ಜಿಲ್ಲೆಗೆ ಮೊದಲಿನಿಂದಲೂ ಅಭಿನಾಭವ ಸಂಬಂಧವಿದ್ದು ವಿದ್ಯಾರ್ಥಿ ನಾಯಕನಾಗಿದ್ದಾಗ ಸಹಕಾರಿ ಬೀಷ್ಮ ದಿ. ಕೆ ಎಚ್ ಪಾಟೀಲ ಅವರ ಶಿಷ್ಯ ಮತ್ತು ಅಭಿಮಾನಿಯಾಗಿದ್ದೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಚುನಾವಣೆಗಳಿಗೊಸ್ಕರ ಜಾರಿ ತಂದಿರುವುದಿಲ್ಲ. ಬಡ ಜನರ ಏಳಿಗೆಗಾಗಿ ಬಂಗಾರಪ್ಪ , ಮೋಯ್ಲಿ ಸೇರಿದಂತೆ ಸಿದ್ಧರಾಮಯ್ಯ ಅವರು ಜನಪರ ಯೋಜನೆಗಳನ್ನು ಜಾರಿ ತಂದಿದ್ದಾರೆ.
ಸರ್ಕಾರ ರಚನೆಯಾಗಿ ಮೊದಲ ಕ್ಯಾಬಿನೆಟ್ ನಲ್ಲಿಯೇ ಪಂಚ ಗ್ಯಾರಂಟಿ ಅನುಷ್ಟಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದರು.
ಗೃಹಲಕ್ಷ್ಮಿ ಯೋಜನೆಯಿಂದ ಪಡೆದ ಹಣವನ್ನು ಕೂಡಿಟ್ಟು ಬೋರ್ ವೇಲ್ ಕೊರೆಸಿರುವ ಉದಾಹರಣೆಗಳು ಗದಗ ಜಿಲ್ಲೆಯಲ್ಲಿ ಇವೆ. ಗೃಹಲಕ್ಷ್ಮೀಯಿಂದ ಮಹಿಳೆಯರ ಸಬಲೀಕರಣವಾಗಿದೆ ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಮುಂದುವರೆಯಲಿವೆ ಎಂದು ನುಡಿದರು.
ನರಗುಂದ ಶಾಸಕ ಸಿ ಸಿ ಪಾಟೀಲ ಅವರು ಮಾತನಾಡಿ ನಾವೇನು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ದಿ ಸ್ಪಲ್ಪ ಕುಂಠಿತವಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಬಿಡುಗಡೆಗೊಳಿಸಿ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಮಾತನಾಡಿ 2-3 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಮಾದ್ಯಮದಲ್ಲಿ ಪ್ರಸಾರವಾಗುತ್ತಿದೆ ಆದಷ್ಟು ಬೇಗ ಬಿಡುಗಡೆಗೊಳಿಸಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರೀಯಸಿದ ಎಚ್ ಎಂ ರೇವಣ್ಣ ಅವರು ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಲ್ಲಿ ಶೇ18ರಷ್ಟು ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಜಿ ಡಿಪಿ ಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂದಿದೆ ಮತ್ತು ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ , ಶಾಸಕ ಡಾ. ಚಂದ್ರು ಲಮಾಣಿ , ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಮಾಜಿ ಶಾಸಕ ಡಿ ಆರ್ ಪಾಟೀಲ, ಎಸ್ ಎನ್ ಬಳ್ಳಾರಿ, ಎಂ ಡಿ ಮಕಾಂದರ, ಪ್ರಬು ಮೇಟಿ, ಅಶೋಕ ಮಂದಾಲಿ, ಶಾರದ ಹಿರೇಗೌಡರ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿ .ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಸೇರಿದಂತೆ ಗಣ್ಯರು ಅಧಿಕಾರಿಗಳು ಹಾಜರಿದ್ದರು.