ಗದಗ : ಶಿರಹಟ್ಟಿ ತಾಲ್ಲೂಕಿನ ಜಲಿಗೇರಿ ಗ್ರಾಮದಲ್ಲಿ ಶೆಂಗಾ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.
ಗೀತಾ ಬಸಪ್ಪ ಬಸಾಪೂರ (35) ಮೃತರು. ಜಲಿಗೇರಿ ಗ್ರಾಮದ ನಿವಾಸಿ ಅವರಿಗೆ ಪತಿ, ಮೂವರು , ಪುತ್ರಿ ಇದ್ದಾರೆ.
ಬೆಳಿಗ್ಗೆ. 9:30 ನಿಮಿಷ ಸುಮಾರಿಗೆ ಜಲ್ಲಿಗೇರಿ ಗ್ರಾಮದಲ್ಲಿ ಶೇಂಗಾ ಒಕ್ಕುವ ಮಿಷನ್ ನಲ್ಲಿ. ಶೇಂಗಾ ತೆಗೆಯಲು ಹೋಗಿ ಮಿಷನ್ ಪುಲಿಗೆ ವೇಲ್ ಸುತ್ಹಾಕಿಕೊಂಡು.ಮಹಿಳೆ ಸಿಲುಕಿ ಒದ್ದಾಡಿದ್ದಾರೆ. ಕುಟುಂಬಸ್ಥರು ತಕ್ಷಣವೇ ಯಂತ್ರ ಬಂದ್ ಮಾಡಿ, ಮಹಿಳೆಯನ್ನು ಹೊರತೆಗೆದಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ .
ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.