ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಅಕಾಲಿಕ ಮಳೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಡಿಲಿಗೆ ಇಬ್ಬರು ಬಲಿಯಾಗಿದ್ದು, 40ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರಾಯಚೂರು ತಾಲೂಕಿನ ಉಡುಮಗಲ್ ಖಾನಾಪುರದಲ್ಲಿ ಕುರಿ ಕಾಯಲು ಹೊಲಕ್ಕೆ ತೆರಳಿದ್ದ ತನಗಲ್ ಮಲ್ಲಮ್ಮ (50), ಮರ್ಚೆಟಾಂಳ ಗ್ರಾಮದಲ್ಲಿ ಗಿಡ ಕಡಿಸಲು ಹೊಲಕ್ಕೆ ಹೋಗಿದ್ದ ಹನುಮಂತ (44) ಸಿಡಿಲು ಬಡಿದು ಮೃತಪಟ್ಟಿ ದ್ದಾರೆ.
ಸಿಡಿಲು ಬಡಿದು ಮುದಗಲ್‌ನಲ್ಲಿ 2 ಎತ್ತುಗಳು, ಕೊಪ್ಪಳ ಜಿಲ್ಲೆ ಯಲ ಬುರ್ಗಾ ತಾಲೂಕಿನ ಗಾಣಧಾಳ ಗ್ರಾಮದಲ್ಲಿ 35 ಕುರಿಗಳು ಮೃತಪಟ್ಟಿವೆ. ಕುರಿಗಾಹಿ ಗವಿಸಿದ್ದಪ್ಪ ಕರಿಯಪ್ಪ ನವಲಹಳ್ಳಿ ಗಾಯಗೊಂಡಿದ್ದಾರೆ. ವಿಜಯನಗರ, ಯಾದಗಿರಿ, ಕಲಬುರಗಿ, ಬಳ್ಳಾರಿ, ಧಾರವಾಡ, ಗದಗದಲ್ಲೂ ಗುಡುಗು ಮಳೆಯಾಗಿದೆ.