ಗದಗ ೧೦: ರಾಜ್ಯದ ಮಾಜಿ ಕುಸ್ತಿ / ಕಬಡ್ಡಿ ಕ್ರೀಡಾಪಟುಗಳಿಗೆ ಈ ವರ್ಷದ ಬಜೆಟ್‌ನಲ್ಲಿ ಮಾಸಾಶನ ಹೆಚ್ಚಿಸಿದ ಸರಕಾರಕ್ಕೆ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಗದಗ ಜಿಲ್ಲೆಯ ಮಾಜಿ ಪೈಲ್ವಾನರು ಹಾಗೂ ಕಬಡ್ಡಿ ಕ್ರೀಡಾಪಟುಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ಸೇರಿ ನಾಡಿನ ಪ್ರಗತಿಪರವಾದ ಬಜೆಟನ್ನು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದರು. ಇದರಿಂದ ಜಿಲ್ಲೆಯ ೧೪೦ ಜನ ಹಾಗೂ ರಾಜ್ಯದ ೩೫೦೦ ಜನ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದು ಗದಗ ಜಿಲ್ಲಾ ಪೈಲ್ವಾನರ ಸಂಘ ಅಧ್ಯಕಷ ಪೈಲ್ವಾನ್ ದೇವೇಂದ್ರಪ್ಪ ಗಡಾದ ತಿಳಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಮಾಜಿ ಪೈಲ್ವಾನರಾದ ಸುಭಾಸ ಕಟಗೇರಿ, ದೈವೇಂದ್ರಪ್ಪ ಗಡೇದ, ಮೋದಿನಸಾಬ ಅಣ್ಣಿಗೇರಿ, ದೇವಪ್ಪ ಯಲಿಗಾರ, ಅಮರಪ್ಪ ಗುಡಗುಂಟಿ, ಈರಪ್ಪ ಹೊಸಳ್ಳಿ, ಮರಿತಮ್ಮಪ್ಪ ಆದಮ್ಮನವರ, ಬಾಜೇಸಾಬ ಈಟಿ, ಮಕ್ತುಂಸಾಬ ಸೈಯ್ಯದ, ತೋಟಪ್ಪ ಮುರಾರಿ, ಹೊನ್ನಪ್ಪ ವಡ್ಡರ ಉಪಸ್ಥಿತರಿದ್ದರು.