18.2 C
New York
Saturday, June 28, 2025

Buy now

spot_img

BREAKING NEWS: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನೀರುಪಾಲು!

ಗದಗ: ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ನಡೆದಿದೆ.

ಶರಣಪ್ಪ ಬಡಿಗೇರ (34) ಮಹೇಶ್ (36) ಗುರುನಾಥ್ (38) ನೀರುಪಾಲಾದವರು. ಗದಗ ಜಿಲ್ಲೆಯ ಶಿರಹಟ್ಟಿಯಿಂದ ಆಗಮಿಸಿದ್ದ ಐವರು ಸ್ನೇಹಿತರ ಗುಂಪು ಆಂಜನೇಯನ ದರ್ಶನ ಪಡೆದು ಬಳಿಕ ನದಿಗೆ ಈಜಲು ಹೋಗಿದ್ದರು.

ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಶರಣಪ್ಪ ದೇವಸ್ಥಾನಕ್ಕೆ ಬಂದಿದ್ದ.ಈಜಲು ಬಾರದಿದ್ದರೂ ಸ್ನೇಹಿತ ಮಹೇಶ್ ನದಿಗೆ ಇಳಿದಿದ್ದ. ಆತ ನೀರುಪಾಲಾಗುತ್ತಿದ್ದಂತೆ

ಶರಣಪ್ಪ ಹಾಗೂ ಗುರುನಾಥ್ ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಮೂವರು ನದಿ ನೀರು ಪಾಲಾಗಿದ್ದಾರೆ. ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದೆ.ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news