ಗದಗ : ಜನೆವರಿ 29 : ಕರ್ನಾಟಕ ತಾಂಡಾ ಅಬಿವೃದ್ಧಿ ನಿಗಮವು ತಾಂಡಾಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಬಂಜಾರ ಸಮುದಾಯದ ಆರ್ಥಿಕ, ಸಾಮಾಜಿಕ , ಶೈಕ್ಷಣಿಕ ಮತ್ತು ಸಾಂಸ್ಕೃತಿಕ, ಅಭಿವೃದ್ಧಿಗಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಬಂಜಾರರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ, ಬೆಳೆಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಯನ್ನು ಹೊರ ಹೊಮ್ಮಿಸಲು ಬಂಜಾರರ ಬಹುಮುಖ ಕಲಾ ಪ್ರತಿಭಾನ್ವೇಷಣೆ – ಕಲಾ ಮಳಾವೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಂಜಾರರ ಸಮುದಾಯದ ಬಹುಮುಖ ಕಲಾಪ್ರಕಾರಗಳಾದ ವಾಜಾ ವಾದ್ಯ ಕಲೆ, ಕಥನ ಗಾಯನ ( ಸಣ್ಣ ವಾಜಾ), ಲೆಂಗಿ ನೃತ್ಯ, ನಂಗಾರಾ ಠೋಳಿ ಬಿಡಿಸುವ ನೃತ್ಯ, ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಘೂಮರ್ ನೃತ್ಯ, ಮಹಿಳೆಯರ ಜಾನಪದ ನೃತ್ಯ,ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಬಂಜಾರ ಸುಗಮ ಸಂಗೀತ, ಬಾಲಕಿಯರ ನೃತ್ಯ, ಬಾಲಕರ ಲೆಂಗಿ ನೃತ್ಯ, ಬಾಲಕರ ಮತ್ತು ಬಾಲಕಿಯರ ಆಧುನೀಕ ನೃತ , ಮಹಿಳೆಯರ ಹವೆಲ ಮತ್ತು ಡಾವಲೋ ಪ್ರಕಾರಗಳಲ್ಲಿ ಬಂಜಾರ ಸಮುದಾಯದ ಕಲಾವಿದರು ಭಾಗವಹಿಸಿ ಪ್ರಶಸ್ತಿ ಪಡೆಯಲು ಬಂಜಾರ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನೆವರಿ 30 ಕೊನೆಯ ದಿನವಾಗಿದ್ದು ಅರ್ಜಿಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ವಲಯ ಕಚೇರಿ ಕೊಪ್ಪಳ ಇಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ವಲಯ ಕಚೇರಿ ಕೊಪ್ಪಳ ದೂರವಾಣಿ ಸಂಖ್ಯೆ 08539-220842 ಸಂಪರ್ಕಿಸಬಹುದಾಗಿದೆ.