ಮುಂಡರಗಿ : ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರನ ಕಾಲು ತುಂಡಾದ ಘಟನೆ ಮುಂಡರಗಿ ಪಟ್ಟಣದ ಎಪಿಎಂಸಿ ಹತ್ತಿರ ನಡೆದಿದೆ.
ಸಂಜೆ 7 ಗಂಟೆಗೆ ಗವಿಯಪ್ಪ. ಬನ್ನಿಕೊಪ್ಪ . ಹಿರೇವಡಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗದಗನಿಂದ ಮುಂಡರಗಿ ಪಟ್ಟಣಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಬೈಕ್ ಸವಾರನ ಕಾಲು ತುಂಡಾಗಿ ಬಿದ್ದಿದೆ.ಇನ್ನು ಗಂಭೀರ ಗಾಯಗಳಾಗಿವೆ.ಸದ್ಯ ಗಾಯಾಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಎಂದು ತಿಳಿದು ಬಂದಿದೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.