ಗದಗ : ಭಾರತದ ಸಂವಿಧಾನ ಜನರನ್ನು ಸಶಕ್ತಗೊಳಿಸಿ ಸರ್ವರಿಗೂ ಸಮಾನತೆ ಒದಗಿಸಿ,ಮೂಲಭೂತ ಹಕ್ಕುಗಳನ್ನು ನೀಡಿದೆ.ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ,ಸಂವಿಧಾನ ನಮ್ಮೇಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಉಮೇಶ ಗುಳೇದ ನುಡಿದರು. ಅವರು ಸರ್ಕಾರಿ ಪ್ರೌಢಶಾಲೆ ಲಿಂಗದಾಳದಲ್ಲಿ ಜರುಗಿದ 76ನೆಯ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಗಣರಾಜ್ಯೋತ್ಸವದ ಔಚಿತ್ಯವನ್ನು ವಿವರಿಸಿದರು.
ಮುಖ್ಯೋಪಾಧ್ಯಾಯನಿ ಪಾರ್ವತಿ ಎಸ್ ಸಜ್ಜನ ಪ್ರಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949 ನವೆಂಬರ್ 26 ರಂದೇ ಆದರೂ ಅನುಷ್ಠಾನದಲ್ಲಿ ತಂದಿದ್ದು 1950 ಜನವರಿ 26 ರಂದು ಈ ದಿನವನ್ನು ಗಣರಾಜ್ಯೋತ್ಸವ ದಿನ ಎಂದು ಆಚರಣೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ ,ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಆಡಳಿತ .ಭಾರತ ಸಂವಿಧಾನವು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ರಾಷ್ಟ್ರವನ್ನು ಪ್ರತಿಪಾದಿಸುತ್ತದೆ, ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಅಂಗಗಳನ್ನಾಗಿ ವಿಭಜಿಸುತ್ತದೆ ಎಂದರು. .
ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನ ವಿಷಯದ ಶಿಕ್ಷಕಿ ಎಸ್ .ವಿಜಯಾ ಹಾಗೂ ಹಿಂದಿ ವಿಷಯದ ಶಿಕ್ಷಕಿ ಸವಿತಾ ಜಿ ಗುಳೇದ ,ಎಸ ಡಿ ಎಂ ಸಿ ಸದಸ್ಯೆ ಪುಷ್ಪಾ ಸುರೇಶ ಮುಗಳಿ,ಮರಿಯಪ್ಪ ಕೊಂಡಿಕೊಪ್ಪ,ವಿದ್ಯಾರ್ಥಿನಿಯರಾದ ನೀಲಾ ಹಿರೇಶೆಡ್ಡಿ,ಸಹ್ಯಾದ್ರಿ ಬಂಡಿವಾಡ,ಸುಷ್ಮಾ ನಾಗಾವಿ ಸಮಾರಂಭವನ್ನು ಉದ್ದೇಶಿಸಿ ಸಂದರ್ಭಾನುಸಾರವಾಗಿ ಮಾತನಾಡಿದರು. ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ , ಹಾಗೂ ಎಂಟನೇ ತರಗತಿಯ ಆರತಿ ಹೊಸಮಠ ಮತ್ತು ಸಂಜನಾ ಬೆಟ್ಟಕುಸುಗಲ್ ಸಂಗಡಿಗರಿಂದ ದೇಶಭಕ್ತಿ ಗೀತೆಯ ನೃತ್ಯ ,ವಿಜಯಲಕ್ಷ್ಮೀ ಜಾನೋಪಂತರ ಹಾಗೂ ಐಶ್ವರ್ಯಾ ನಾಗಾವಿ ಅವರಿಂದ ದೇಶ ಭಕ್ತಿಗೀತೆ ಜರುಗಿತು . ವೇದಿಕೆಯ ಮೇಲೆ ಎಸ್ ಡಿ ಎಂ ಸಿ ಸದಸ್ಯರಾದ ರವಿ ಬಬಲಿ ,ಶಿವಪ್ಪ ಗೊಬ್ಬರ ಗುಂಪಿ ,ಉಪಾಧ್ಯಕ್ಷೆ ಜಯಶ್ರೀ ಬಸವರಾಜ ಬಡಿಗೇರ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕ ಘಟಕದ ಉಪಾಧ್ಯಕ್ಷ ಶಾಂತಕುಮಾರ. ಬಿ .ಭಜಂತ್ರಿ ಶಿಕ್ಷಕರಾದ ರಾಮಪ್ಪ ಬಿಂಗಿ ,ಆನಂದ ಕುಮಾರ ಟಿ ಮೇಗಡಿ, ಸಿದ್ದಲಿಂಗೇಶ ಕೆ . ಹಗರನ್ನವರ,ನಾಗರಾಜ ಎಸ್ ಕುರುಬನಾಳ, ಶಂಕರ ಅತನೂರ, ಮಲ್ಲಮ್ಮ ಹುಡೇದ ,ಅಡುಗೆ ಸಿಬ್ಬಂದಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಅಂಗವಾಗಿ ಜರುಗಿದ ಪ್ರಬಂಧ ಸ್ಪರ್ಧೆಯಲ್ಲಿ ಶ್ವೇತಾ ಶಿಡ್ಲಣ್ಣವರ ಪ್ರಥಮ,ಸಂಜನಾ ಬೆಟ್ಟ ಕುಸುಗಲ್ ದ್ವೀತಿಯ,ಮೈನಾ ದೊಡ್ಡಮನಿ ತೃತೀಯ,ಪುಷ್ಪಾ ದಾಸಣ್ಣವರ ಸಮಾಧಾನಕರ ಸ್ಥಾನ ಪಡೆದರೆ,
ಭಾಷಣ ಸ್ಪರ್ಧೆಯಲ್ಲಿ ನೀಲಾ ಹಿರೇಶೆಡ್ಡಿ ಪ್ರಥಮ,ಸಹ್ಯಾದ್ರಿ ಬಂಡಿವಾಡ ದ್ವೀತಿಯ,ಸುಷ್ಮಾ ನಾಗಾವಿ ತೃತೀಯ ಸ್ಥಾನ ಪಡೆದ ಪ್ರಯುಕ್ತ ವಿಜೇತರಿಗೆ ಬಹುಮಾನ ವಿತರಿಸಲಾಯಿ.
ಕು.ಈಶ್ವರಿ ಅಂಗಡಿ ಹಾಗೂ ಆರತಿ ಹೊಸಮಠ ಪ್ರಾರ್ಥನೆ ಗೈದರು,ಶಿಕ್ಷಕರಾದ ಎ ಟಿ ಮೇಗಡಿ ಕಾರ್ಯಕ್ರಮ ನಿರೂಪಿಸಿದರು,ಎಸ್ ಬಿ ಭಜಂತ್ರಿ ಸ್ವಾಗತಿಸಿದರು,ದೈಹಿಕ ಶಿಕ್ಷಣ ಶಿಕ್ಷಕ ಎಸ್ ಕೆ ಹಗರಣ್ಣವರ ಮತ್ತು ಕುಮಾರಿ ಅನು ದ್ಯಾಮಣ್ಣವರ ಪಥ ಸಂಚಲನ ನಡೆಸಿದರು ,ಆರ್ ಎಂ ಬಿಂಗಿ ವಂದಿಸಿದರು.