ಗದಗ : ಜನೆವರಿ 7: ಜನೆವರಿ 5 ರಿಂದ 6 ರವರೆಗೆ ದಾವಣಗೆರೆಯಲ್ಲಿ ನಡೆದ 2024-25ನೇ ಸಾಲಿನ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ವಿನೂತ ಎಸ್ ಅಕ್ಕಸಾಲಿಗ (ಪತ್ತಾರ) ಇವರು ಚಿತ್ರ ಕಲೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೂ ಕೆಂಚಮ್ಮ ದೇವಿ ಜನಪದ ಕಲಾ ತಂಡ ಅಡವಿಸೊಮಾಪೂರ ಕಲಾವಿದರಾದ ಮಂಜುನಾಥ್ ಮಾದರ್, ಮೈಲಾರಪ್ಪ ಹರಿಜನ್, ಚಿದಾನಂದ ಅನವಾಳ್, ಜಗದೀಶ್ ತಳವಾರ್, ಶಾಂತವೀರೇಶ್ ಕೋಣಿ, ರವಿ ಮಾದರ್, ಶಿವು ತಳವಾರ್, ರಮೇಶ್ ಮಾದರ್, ವೀರೇಶ್ ಮಾದರ್, ಸುನಿಲ್ ಮಾದರ್ ಇವರು ತೃತೀಯ ಸ್ಥಾನ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಸದರಿ ಕಲಾವಿದರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋಧ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಇವರು ಶುಭ ಕೊರಿದರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶರಣು ಐ ಗೋಗೇರಿ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.