ಗದಗ : ಗೋಡೆ ಕುಸಿದು 8 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಕುರುಬಗೇರಿ ಓಣಿಯಲ್ಲಿ ಘಟನೆ ಜರುಗಿದೆ.
ಶಾಲೆ ಮುಗಿಸಿಕೊಂಡು ಮನೆಗೆ ಬಂದಂತಹ 8 ವರ್ಷದ ಬಾಲಕನೊಬ್ಬ ಸ್ನೇಹಿತರೊಂದಿಗೆ ಆಟವಾಡುವಾಗ ಗೋಡೆಯ ಬಳಿ ಅವಿತುಕೊಂಡಿದ್ದಾನೆ. ಈ ವೇಳೆ ಏಕಾಏಕಿ ಗೋಡೆ ಬಾಲಕ ದಾರುಣವಾಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮೃತ ಬಾಲಕನನ್ನು ಪ್ರದೀಪ್ ಗೋನಾಳ್ (8)ಎಂದು ತಿಳಿದುಬಂದಿದೆ.
ಈತ ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳೆಯರೊಂದಿಗೆ ಆಟವಾಡುವಾಗ ದುರ್ಘಟನೆ ನಡೆದಿದೆ. ಗೋಡೆ ಬಿದ್ದ ಶಬ್ದಕ್ಕೆ ಓಡಿ ಬಂದು ಸ್ಥಳೀಯರು ರಕ್ಷಿಸಿದ್ದಾರೆ ಆದರೆ ಆಸ್ಪತ್ರೆಗೆ ಹೋಗುವಾಗ ಪ್ರದೀಪ್ ಮಾರ್ಗ ಮಧ್ಯೆ ಕೊನೆಯುಸಿರೆಳಿದಿದ್ದಾನೆ.
ಈ ಘಟನೆ ನರಗುಂದ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.