ಗದಗ : ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನೀರಿನ ಟ್ಯಾಂಕರ್ ಮಗುವಿನ ಮೇಲೆ ಏರಿದ ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟ ಘಟನೆ ನಡೆದಿದೆ.
ರೀದಾ ಸೊರಟೂರು 2 ವರ್ಷದ ಮಗು ಅಪಘಾತದಲ್ಲಿ ಉಸಿರು ನಿಲ್ಲಿಸಿದೆ.ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವನ್ನ ಅವರ ಸಂಬಂಧಿ ಸ್ಕೂಟಿಯಲ್ಲಿ ಮುಂದಗಡೆ (ಕಾಲಿನ ಬಳಿ) ಕೂರಿಸಿಕೊಂಡು ಹೋಗುತ್ತಿರುವಾಗ ಎದುರಿಗೆ ಟ್ರ್ಯಾಕ್ಟರ್ ಬಂದಿದೆ. ಇದರಿಂದ ರಸ್ತೆ ಪಕ್ಕಕ್ಕೆ ಸ್ಕೂಟಿ ಚಾಲಕಿ ಸ್ಕೂಟಿ ನಿಲ್ಲಿಸಿದ್ದಾಳೆ. ತಕ್ಷಣ ಆಯ ತಪ್ಪಿ ಮಗುವು ಬೈಕ್‌ನಿಂದ ರಸ್ತೆಗೆ ಉರುಳಿ ಬಿದ್ದಿದೆ. ಕ್ಷಣ ಮಾತ್ರದಲ್ಲೇ ಬಂದ ನೀರಿನ ಟ್ಯಾಂಕರ್ ನ ಹಿಂಬದಿ ಚಕ್ರಕ್ಕೆ ಮಗುವಿನ ತಲೆಬುರುಡೆ ಸಿಕ್ಕು ಸ್ಥಳದಲ್ಲೇ ಮಗು ಸಾವನ್ನಪ್ಪಿದೆ.
ಕಣ್ಣೆದುರಿಗೆ ತನ್ನ ಕಂದಮ್ಮ ಬಲಿಯಾದ ದೃಶ್ಯ ನೋಡಿದ ಬೈಕ್ ಚಲಾಯಿಸುತ್ತಿದ್ದ ಮಗುವಿನ ಸಂಬಂಧಿ ಮಗುವನ್ನ ಎತ್ತಿಕೊಂಡು ಗೋಳಾಟ ನಡೆಸಿದ್ದಾಳೆ
ಈ ಅಪಘಾತದ ಭೀಕರತೆಗೆ ಮಗುವಿನ ಮಿದುಳು ಛಿದ್ರವಾಗಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗದಗ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.