13.7 C
New York
Wednesday, May 21, 2025

Buy now

spot_img

ಗದಗ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಾನುವಾರು, ಮನೆ ಹಾಗೂ ಬೆಳೆ ಹಾನಿ ವಿವರ

ಗದಗ ಅಕ್ಟೋಬರ್ 25: ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ವಾಡಿಕೆ ಮಳೆ 96 ಮಿಮೀ ಇದ್ದು 122.1 ಮಿ. ಮೀ.ಮಳೆಯಾಗಿದ್ದು ವಾಡಿಕೆಗಿಂತ 26 ಪ್ರತಿಶತ ಜಾಸ್ತಿ ಮಳೆಯಾಗಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 8 ಸಣ್ಣ ಜಾನುವಾರುಗಳು ಮರಣಹೊಂದಿವೆ ಮತ್ತು 99 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಸದರಿ ಮರಣ ಹೊಂದಿದ ಜಾನುವಾರು ಮತ್ತು ಹಾನಿಗೊಳಗಾದ ಮನೆಗಳಿಗೆ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಳನ್ವಯ ಪರಿಹಾರ ಪಾವತಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಮತ್ತು ಬೆಣ್ಣೆಹಳ್ಳ ಪ್ರವಾಹದಿಂದ ಒಟ್ಟು 28,173 ಹೆಕ್ಟೇರ್ ಪ್ರದೇಶ ಬೆಳೆಹಾನಿಗೊಳಗಾಗಿದೆ. ಆ ಪೈಕಿ 17652 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮತ್ತು 10521 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ.

ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯ ಬೆಳೆಹಾನಿಗೆ ಸರ್ಕಾರ ರೂ 29.37 ಕೋಟಿ ಪರಿಹಾರ ಮೊತ್ತ ನೀಡಬೇಕಾಗಿದೆ . ಈ ಕುರಿತು ಜಂಟಿ ಸರ್ವೇ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : SSLC' ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ.! ಗದಗ : ಬಾವಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ ! ಗದಗ : ವಾಕರಸಾ ಸಂಸ್ಥೆಯಿಂದ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಸಾರ್ವಜನಿಕರ ಅಭಿಪ್ರಾಯ ಕಾರ್ಯಕ್ರಮ “ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ