Friday, October 18, 2024
Google search engine
Homeಗದಗಗದಗ : ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಎ ಆರ್ ಕಮತ ಆಯ್ಕೆ 

ಗದಗ : ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಎ ಆರ್ ಕಮತ ಆಯ್ಕೆ 

ಗದಗ : ಅಡವಿಸೋಮಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಎ ಆರ್ ಕಮತರವರಿಗೆ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.

ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡುವ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮೆಲ್ಲರ ಆತ್ಮೀಯ ಶಿಕ್ಷಕಿಯರಾದ ಶ್ರೀಮತಿ ಎ ಆರ್ ಕಮತ ಗುರು ಮಾತೆಯರಿಗೆ ಆಯ್ಕೆಯಾಗಿರುತ್ತಾರೆ 

  ಡಾ.ಬಿ .ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ಇಂದು ನಡೆಯುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ ) ಬೆಂಗಳೂರು ಹಾಗೂ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸುವರು.

ಶಾಲೆ ಎಂದರೆ ಬದುಕಿನ ಒಂದು ಭಾಗವಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಅವರು ಇಷ್ಟಪಡುವ ಕಲಿಕೆಯನ್ನು ಕಷ್ಟಪಡದೆ ಸ್ವೀಕರಿಸುವ ಹಾಗೆ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಸಹಜವಾದ ಕಲಿಕೆಯೊಂದಿಗೆ ಸಾರ್ಥಕ ಬದುಕನ್ನು ಕಂಡುಕೊಂಡ ರವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವುದು ಹೆಮ್ಮೆ ಎನಿಸಿದೆ . ಜ್ಞಾನ ಮತ್ತು ಕೌಶಲಗಳು ಜೊತೆಗೆ ಉತ್ತಮ ನಾಗರಿಕನಾಗಲು ಪ್ರೇರಕವಾದ ಮೌಲ್ಯ ಶಿಕ್ಷಣವನ್ನು ನೀಡುವುದರ ಮೂಲಕ ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕಾದ ಅಕ್ಷರದ ಜ್ಞಾನವನ್ನು ಸಂತಸದಿಂದ ನೀಡಿ ಮಕ್ಕಳ ಪಾಲಿನ ಆದರ್ಶ ಗುರುಮಾತೆಯಾಗಿ ಸರಳ ಸಜ್ಜನಿಕೆಗೆ ಹೆಸರಾದವರು ಎ ಆರ್ ಕಮತ ಗುರು ಮಾತೆಯರು.

ಗೌರವಾನ್ವಿತರಿಗೆ ಗ್ರಾಮದ ಹಿರಿಯರು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಗೂ ಅಪಾರ ವಿಧ್ಯಾರ್ಥಿ ಬಳಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ