ಗದಗ ೩೧: ಜಿ.ಪಿ.ಎಲ್. (GPL) ಗದಗ ಪ್ರೀಮಿಯರ್ ಲೀಗ್-೨೦೨೪ ೨ನೇ ಆವೃತ್ತಿ ಲೆದರ ಬಾಲ್ ಕ್ರಿಕೆಟ್ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಕಳೆದ ಬಾರಿ ಯಶಸ್ವಿಯಾಗಿ ನೆರವೇರಿದ ಟೂರ್ನಿಯು ಗದಗ ಜನತೆಯು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ತೆರನಾಗಿ ಎಲ್ಲಾ ಕ್ರಿಕೆಟ್ ಕ್ರೀಡಾಪಟುಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲರು ಈಗ ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ವರ್ಷದ ಹಾಗೆ ಈ ವರ್ಷವು ಕೂಡಾ ೪ ತಂಡಗಳಿಗೆ ಇದೇ ತಿಂಗಳು ದಿನಾಂಕ: ೧೧-೦೯-೨೦೨೪ ರವೆರೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿರುತ್ತದೆ ಎಂದು ಕಮೀಟಿಯ ಸದಸ್ಯರು ತಿಳಿಸಿದ್ದಾರೆ. ಸೆಪ್ಟಂಬರನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಹಾಗೂ ಅಕ್ಟೋಬರನಲ್ಲಿ ಈ ಕ್ರಿಕೆಟ್ ಟೂರ್ನಿಯು ಪ್ರಾರಂಭವಾಗುತ್ತದೆ.