10.7 C
New York
Thursday, November 13, 2025

Buy now

spot_img

ಗದಗ : ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ನೂತನ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಪದಗ್ರಹಣ ಸಮಾರಂಭ

ಗದಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಗದಗ, ವಿವಿಧ ಇಲಾಖೆಗಳ ವೃಂದ ಸಂಘಗಳು ಮತ್ತು ನೌಕರರ ಸಂಘಟನೆಗಳ ಸಹಯೋಗದಿಂದ ನೂತನ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೌಕರರ ಜನಸ್ನೇಹಿ ಕಾರ್ಯಾಗಾರವನ್ನು ಸೆಪ್ಟೆಂಬರ್‌ 6 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಭಾರತ ರತ್ನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿಗಳು ವಹಿಸುವರು.

ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಉದ್ಘಾಟನೆ ನೆರವೇರಿಸುವರು.

ರಾಜ್ಯ ಸರ್ಕಾರಿ ನೌಕರರ ಗದಗ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ, ಶಾಸಕರಾದ ಸಿ ಸಿ ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ಮಾಜಿ ಶಾಸಕ ಡಿ ಆರ್ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ನೌಕರ ಸಂಘದ ನಿಕಟ ಪೂರ್ವ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ. ರವಿ ಗುಂಜಿಕರ ಅವರುಗಳು ಆಗಮಿಸುವರು.

ಅತಿಥಿಗಳಾಗಿ ಗಿರಿಗೌಡ ಎಚ್, ಬಸವರಾಜು, ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೇಡಸ್ಯಾಳ, ನಾಗರಾಜ ಜುಮ್ಮಣ್ಣವರ, ಆರ್ ಮೋಹನ್ ಕುಮಾರ್, ಎಲ್ ಮೋಹನ್ ಕುಮಾರ್, ಹರಿ ರಾಮಕೃಷ್ಣ, ಎಸ್ ಎಪ್ ಸಿದ್ದನಗೌಡರ, ಬಸವರಾಜ ರಾಯವ್ವಗೊಳ, ಮಲ್ಲೇಶ್ ಕರಿಗಾರ, ಬಿ ಎ ಕುಂಬಾರ ಅವರುಗಳು ಪಾಲ್ಗೊಳ್ಳುವರು. ವೈ ಎನ್ ಗೌಡರ, ವಾಸಣ್ಣ ಕುರಡಗಿ, ರಾಜು ಕುರಡಗಿ, ಪ್ರೇಮನಾಥ್ ಗರಗ, ಆರ್ ಎಲ್ ಲಿಂಬನಾಯಕರ, ಕೆ ಎಪ್ ಹಳ್ಯಾಳ ಅವರುಗಳು ಉಪಸ್ಥಿತರಿರುವರು.

ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ದುರಗೇಶ ಕೆ ಆರ್, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಅವರುಗಳು ಉಪಸ್ಥಿತರಿರುವರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಡಿಟಿ ವಾಲ್ಮೀಕಿ, ಎಂ ಎಂ ನಿಟ್ಟಾಲಿ, ಡಿ ಎಸ್ ತಳವಾರ, ಸಿದ್ದಪ್ಪ ಲಿಂಗದಾಳ ಸೇರಿದಂತೆ ತಾಲೂಕ ಅಧ್ಯಕ್ಷರುಗಳಾದ ಡಾ. ಎಂ ಎ ಹಾದಿಮನಿ, ಮಲ್ಲಿಕಾರ್ಜುನ್ ಹಿರೇಮಠ, ಜಿ ಡಿ ಹವಳದ, ಶಿವಪ್ಪ ಹದ್ದಿ, ಎಸ್ ಜಿ ದಾನಪ್ಪ ಗೌಡ್ರು, ನಾಗರಾಜ್ ಹಳ್ಳಿಕೇರಿ ಸೇರಿದಂತೆ ಜಿಲ್ಲಾ ನಿರ್ದೇಶಕರೆಲ್ಲರೂ ಸರ್ವರಿಗೂ ಸ್ವಾಗತ ಕೋರಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನದಿಂದ ಭಾರತ ರತ್ನ ಪಂ. ಭೀಮ್ ಸೇನ್ ಜೋಶಿ ರಂಗಮಂದಿರದವರೆಗೆ ಕುಂಭಮೇಳ ಮೆರವಣಿಗೆ ಜರುಗಲಿದೆ. ಹಾಗೂ ಸಾಂಸ್ಕೃತಿಕ ರಸದೌತಣವನ್ನು ಗದಗ ನಟರಂಗ ಕಲ್ಚರಲ್ ಅಕಾಡೆಮಿ ತಂಡದಿಂದ ಏರ್ಪಡಿಸಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news