ಗದಗ : ದಿನಾಂಕ ೨೩ ಮತ್ತು ೨೪ನೇ ಅಗಸ್ಟ ೨೦೨೫ ರಂದು ರಾಜ್ಯ ಮಟ್ಟದ ಸಿ.ಐ.ಎಸ್.ಸಿ.ಇ. ಕರಾಟೆ ಪಂದ್ಯಾವಳಿಯನ್ನು ಮಲ್ಟಿ ಸ್ಪೋರ್ಟ್್ಸ ಅರೀನಾ ಅಟ್ ಡೆಕತ್ಲಾನ್, ಬನ್ನೇರುಘಟ್ಟ ರೋಡ, ಬೆಂಗಳೂರನಲ್ಲ್ಲಿ ಹಮ್ಮಿಕೊಳ್ಳಲಾಗಿತ್ತು. ಗದಗ ವಿನಯ ಚಿಕ್ಕಟ್ಟಿ ಐ.ಸಿ.ಎಸ್.ಇ. ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ೮ನೇ ತರಗತಿಯ ಕುಮಾರ ಮೊಹಮ್ಮದ ತಾಹೀಮ ಗೋನಾಳ ಬಂಗಾರದ ಪದಕ ಗೆದ್ದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಮತ್ತು ದ್ವಿತೀಯ ಸ್ಥಾನವನ್ನು ೧೦ನೇ ತರಗತಿಯ ಕುಮಾರ ಮೊಹಮ್ಮದ ಶಬ್ಬೀರ್ ಸಾಕೀಬ್ ಬೆಳ್ಳಿ ಪದಕ ಗಳಿಸಿದ್ದಾನೆ. ಇವರ ಸಾಧನೆಗೆ ಚಿಕ್ಕಟ್ಟಿ ಶಾಲಾ ಕಾಲೇಜಿನ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀ ವಿನಯ್ ಎಸ್. ಚಿಕ್ಕಟ್ಟಿ, ಪ್ರಾಂಶುಪಾಲರಾದ ಶ್ರೀ ಬಿಪಿನ್ ಎಸ್. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶೋಭಾ ಎಸ್. ಸ್ಥಾವರಮಠ, ಶಿಕ್ಷಕ/ಕಿ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಮುಷ್ಠಿ ಕರಾಟೆ ಪೌಂಡೇಶನ್‌ನ ತರಬೇತುದಾರರಾದ ಶ್ರೀ ಬಸವರಾಜ ಹೊಂಬಾಳಿ ಶುಭ ಹಾರೈಸಿ ಎಲ್ಲರೂ ಸಂತಸ ವ್ಯಕ್ತ ಪಡಿಸಿದ್ದಾರೆ.
ಪ್ರಥಮ ಸ್ಥಾನ ಕುಮಾರ ಮೊಹಮ್ಮದ ತಾಹೀಮ ಗೋನಾಳ ಬಂಗಾರದ ಪದಕ ದ್ವಿತೀಯ ಸ್ಥಾನ
ಕುಮಾರ ಮೊಹಮ್ಮದ ಶಬ್ಬೀರ್ ಸಾಕೀಬ್
ಬೆಳ್ಳಿ ಪದಕ



