9.2 C
New York
Thursday, November 13, 2025

Buy now

spot_img

ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರ ಗಮನಕ್ಕೆ

ಗದಗ ಅಗಸ್ಟ 26 : ಗದಗ ಬೆಟಗೇರಿ ನಗರದ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆAದರೆ, ನಗರದಲ್ಲಿ ಗಣೇಶನ ವಿಸರ್ಜನೆ ಮಾಡುವ ಸಮಯದಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇವರು ಅನೇಕ ಸೂಕ್ತ ಸಲಹೆ ಹಾಗೂ ಮಾರ್ಗಸೂಚನೆಗಳನ್ನು ನೀಡಿದ ಪ್ರಯುಕ್ತ ಗದಗ ಬೆಟಗೇರಿ ಅವಳಿ ನಗರದ ಮದ್ಯಭಾಗದಲ್ಲಿರುವ ಬೆಟಗೇರಿ ಭಾಗದ ಅಶೋಕ ರಸ್ತೆ ಡಾ. ನೇರ್ಲೆಕರ ದವಾಖಾನೆ ಎದುರಿಗೆ ನಗರಸಭೆಯಿಂದ ಕಟ್ಟಿದ ಟ್ಯಾಂಕಿನಲ್ಲಿ ; ಹುಬ್ಬಳ್ಳಿ ರಸ್ತೆ ಮಾನ್ವಿ ಹಳ್ಳದ ಹತ್ತಿರ ಶ್ರೀ ಮಾನ್ವಿಯವರ ತರೆರೆದ ಬಾವಿ (ರಿಂಗ್ ರೋಡಗೆ ಹೊಂದಿಕೊAಡಿರುವ) ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತಿಳಿಸಿದ್ದು, ಹಾಗೂ ನಗರದ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ವಿಗ್ರಹಗಳನ್ನು ವಿಸರ್ಜಿಸಲು ಹುಡ್ಕೋ ಕಾಲನಿ ಶ್ರೀ ಹುಣಸೀಮರದ ಶಾಲೆ ಹತ್ತಿರ ; ಹುಡ್ಕೋ ಕಾಲನಿ ಗಾರ್ಡನ್ ಹತ್ತಿರ ; ಆದರ್ಶ ನಗರ ಗದಗ ; ಖಾನತೋಟ ಭಾವಿ ಹತ್ತಿರ ಗದಗ ; ಹಾಲಕೆರೆ ಮಠದ ಹತ್ತಿರ ಗದಗ ; ಡಿ ಸಿ ಮಿಲ್ಲ ಕಂಪೌAಡ ಹತ್ತಿರ ಗದಗ ಬಸವೇಶ್ವರ ನಗರ ಕರ್ನಾಟಕ ಚಿತ್ರಮಂದಿರ ಹಿಂದೆ ಗದಗ , ವಿಠೋಬ ದೇವರ ಗುಡಿ ಹತ್ತಿರ ಜರ್ಮನ್ ದವಾಖಾನೆ ಹತ್ತಿರ ಬೆಟಗೇರಿ, ಮಸಾರಿ ಭಾಗದ ವಿವೇಕಾನಂದ ನಗರದಲ್ಲಿ ಈ ಎಲ್ಲ ಕಡೆಗಳಲ್ಲಿ ನೀರಿನ ತೊಟ್ಟಿಗಳನ್ನು ಕಟ್ಟಿದ್ದು ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಗಣೇಶ ಮೂರ್ತಿಗಳನ್ನು ಮೇಲ್ಕಾಣಿಸಿದ ನಿಗಧಿಪಡಿಸಿದ ಸ್ಥಳಗಳಲ್ಲಿ ವಿಸರ್ಜಿಸಬೇಕು.

ಟ್ಯಾಂಕ ಬಾವಿಗಳಲ್ಲಿ ಪ್ಲಾಸ್ಟಿಕ ಹೂವು ದಾರ ಇನ್ನಿತರ ಯಾವುದೇ ವಸ್ತರುಗಳನ್ನು ನೀರಿನಲ್ಲಿ ಹಾಕದೆ ಗದಗ ಬೆಟಗೇರಿ ನಗರಸಭೆಯಿಂದ ಇಡಲಾದ ಕಂಟೇನರಗಳಲ್ಲಿಯೇ ಪ್ಲಾಸ್ಟಿಕ ಹೂವು ದಾರ ಹಾಕಿ ಪರಿಸರ ಮಾಲಿನ್ಯವಾಗದಂತೆ ತಡೆಯಲು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news