ಗದಗ ಅಗಸ್ಟ 26: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಏಡ್ಸ್ತಡೆಗಟ್ಟುವಿಕೆ ಮತ್ತು ನಿಯಂತ್ರಣಘಟಕ ಗದಗ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರುಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಅರುಂಧತಿಕುಲಕರ್ಣಿರವರು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೆಚ್.ಐ.ವಿ. ಏಡ್ಸ್ ಸಾಮಾನ್ಯ ಖಾಯಿಲೆಯಾಗಿದ್ದು, ಕೋವಿಡ್‌ನಷ್ಟು ಭಯಾನP Àಇಲ್ಲ. ಹಾಗೂ ಇದನ್ನು ಔಷೊಧಪಚಾರವನ್ನು ತೆಗೆದುಕೊಂಡು ಜೀವನಾವಧಿಯನ್ನು ಹೆಚ್ಚಿಗೆ ಮಾಡಬಹುದುಎಂದು ತಿಳಿಸಿದರು. ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುತ್ತಾ 18 ವರ್ಷತುಂಬಿದವರು, ಹಿಮೋಗ್ಲೋಬಿನ್ ಪ್ರಮಾಣ 12.5 ಮಿ.ಗ್ರಾಇರುವವರು ಹಾಗೂ 45 ಕೆ.ಜಿ. ಕ್ಕಿಂತ ಹೆಚ್ಚಿಗೆತೂಕ ಉಳ್ಳವರು, ಯಾರಬೇಕಾದರೂ ರಕ್ತದಾನ ಮಾಡಬಹುದು ಹಾಗೂ ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೊಸ ರಕ್ತ ಉತ್ಪಾದನೆಯಾಗಲು ಪ್ರೇರೆಪಣೆ ಕೊಡುತ್ತದೆ. ಮತ್ತು ಕ್ಯಾನ್ಸರ್ ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟಬಹುದು ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಬಾರಿಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರು ಬಿ.ಕೆ. ಲಿಂಬನಗೌಡರಮಾತನಾಡಿ ಸ್ಪರ್ಧಾಳುಗಳು ಸ್ಪೂರ್ತಿಯಿಂದ ಭಾಗವಹಿಸಿ ಕಾಲೇಜಿಗೆ ಕೀರ್ತಿತರಬೇಕೆಂದು ಹೇಳಿದರು. ವಿದ್ಯಾರ್ಥಿಜೀವನಅಮೂಲ್ಯವಾದದ್ದು, ವಿದ್ಯಾರ್ಥಿಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಲು ಹಾಗೂ ವಿದ್ಯಾರ್ಥಿಗಳು ಆರೋಗ್ಯದಿಂದಇರಲುತಿಳಿಸಿದರು.
ಬಸವರಾಜ ಲಾಲಗಟ್ಟಿಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರಸಪ್ರಶ್ನೆ ಸ್ಪರ್ಧೆಯ ನಿಯಮಗಳು ಹಾಗೂ ಉದ್ದೇಶಗಳನ್ನು ವಿವರಿಸಿ, ಯುವಜನರಲ್ಲಿರಕ್ತದಾನದ ಹಾಗು ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯಉದ್ದೇಶವಾಗಿದ್ದು, ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತುತಾರತಮ್ಯ ಹಾಗೂ ರಾಷ್ರೀಯ ಸಹಾಯವಾಣಿ, ಹೆಚ್.ಐ.ವಿ. ಏಡ್ಸ್ಕಾಯ್ದೆ 2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ವೇದಿಕೆಯಲಿ ್ಲಮೌಲ್ಯ ಮಾಪಕರಾದ ಡಿ.ಡಿ.ಪಿ.ಐಕಛೇರಿಯ ವಿಷಯ ನೀರಿಕ್ಷಣಾಧಿಕಾರಿಗಳಾದ ಶ್ರೀಮತಿ ಲಲಿತಾ ವಂಕ್ಯಾಳ ಹಾಗೂ ಶ್ರೀಆರ್.ಜಿ. ಕೌಲಗೇರಿಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ 29 ಪ್ರೌಢಶಾಲೆಯ ತಂಡಗಳು ಭಾಗವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆಕಾರ್ಯಕ್ರಮವನ್ನು ಬಸವರಾಜ ಲಾಲಗಟ್ಟಿ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಸರಕಾರಿ ಪ್ರೌಢಶಾಲೆ ಹೊಳೆಮಣ್ಣೂರ ವಿದ್ಯಾರ್ಥಿನಿಯರಾದ ಕು. ಸೃಷ್ಠಿ ತುಳಸಿಗೇರಿ ಹಾಗೂ ಕು. ಶ್ರೇಯಾ ಸುಣಗಾರ, ದ್ವೀತಿಯ ಸ್ಥಾನವನ್ನುಸರಕಾರಿಆದರ್ಶ ವಿದ್ಯಾಲಯಇಟಗಿಯ ಕು. ಸಂಜನಾ ಸುಬೇದಾರ ಮತ್ತು ಕು. ನಿರ್ಮಲಾಕವಲೂರ, ತೃತೀಯ ಸ್ಥಾನವನ್ನುಆದರ್ಶ ವಿದ್ಯಾಲಯ ಕೊರ್ಲಹಳ್ಳಿಯ ಕು. ಸಮೀಕ್ಷಾ ಹಾಗೂ ಮಹಾಲಕ್ಷಿö್ಮಇಲ್ಲೂರಪಡೆದುಕೊಂಡರು. ವಿಜೇತರಾದವರಿಗೆ ಪ್ರಶಸ್ತಿ ಪತ್ರಮತ್ತುಪ್ರಥಮರೂ. 6000, ದ್ವಿತೀಯರೂ5000, ತೃತೀಯರೂ. 4000, ರೂಪಾಯಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿಪ್ರೌಢಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಆರೋಗ್ಯಇಲಾಖೆಯಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ತನುಶ್ರೀ ಬದಿ ಪ್ರಾರ್ಥಿಸಿದರು. ಸುನೀಲ ರವರುವಂದನಾರ್ಪಣೆ ಮಾಡಿದರು.



