ಗದಗ : ಜಿಲ್ಲಾ ಶಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ2024-2029 ನೇ ಸಾಲಿನ ಉಳಿದ ಅವಧಿಯ ಜಿಲ್ಲಾಧ್ಯಕ್ಷ ಸ್ಥಾನದ ಇಂದು ಜುಲೈ 03 ರಂದು ನಡೆದ ಚುನಾವಣೆಯಲ್ಲಿ ಬಸವರಾಜ ಬಳ್ಳಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಸವರಾಜ .ವೆ.ಬಳ್ಳಾರಿ ಆಯ್ಕೆಗೊಂಡಿದ್ದಾರೆ. ಇಲ್ಲಿನ ಸರ್ಕಾರಿ ನೌಕರ ಸಂಘದ ಭವನದಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಸವರಾಜ ಬಳ್ಳಾರಿ 55 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತಗೊಂಡರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೊಂದು ಬಣದ ನಾಗರಾಜ್ ಹಳ್ಳಿಕೇರಿ ಅವರು 13 ಮತಗಳನ್ನು ಪಡೆದು ಪರಾಭವಗೊಂಡರು.
2024-2029 ನೇ ಸಾಲಿನ ಉಳಿದ ಅವಧಿಯ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯು ಅವಧಿಗೆ ಇಲ್ಲಿನ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಗುರುವಾರ ಬೆಳಗ್ಗೆ 10 ರಿಂದ ಮತದಾನ ಜರುಗಿತು, ಚುನಾವಣೆಯಲ್ಲಿ ಸೇರಿದಂತೆ ಒಟ್ಟು 68 ಜನರು ಮತದಾನ ಮಾಡಿದರು. ಈ ಪೈಕಿ 68 ಮತಗಳು ಸಿಂಧುತ್ವ
ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಚುನಾವಣೆ ತೀವ್ರ ಪೈಪೋಟಿಯಿದ ನಡೆದಿತ್ತು. ಎರಡು ಬಣಗಳು ಗೆಲುವಿಗೆ ರಾಜಕೀಯ ತಂತ್ರಗಾರಿಕೆ ನಡೆಸಿದ್ದವು. ಹೀಗಾಗಿ, ಜಿಲ್ಲಾಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲವಿತ್ತು. ಸಂಜೆ 3 ಗಂಟೆಯಿಂದ ನಡೆದ ಮತ ಎಣಿಕೆ ಒಂದು ಗಂಟೆಯೊಳಗೆ ಪೂರ್ಣಗೊಂಡಿದ್ದು ಅಧ್ಯಕ್ಷ ಬಸವರಾಜ ಬಳ್ಳಾರಿ, ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು. ಮತಎಣಿಕೆ ಮುಗಿದು ಪದಾಧಿಕಾರಿಗಳ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಬಸವರಾಜ ಬಳ್ಳಾರಿ ಬೆಂಬಲಿತ ನೌಕರರು ಸಂಭ್ರಮಿಸಿದರು.